ಹಿಂದೂ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸಿ ವಿವಾಹವಾಗುವಂತೆ ಮುಸಲ್ಮಾನನಿಂದ ಒತ್ತಡ !

ಉತ್ತರಪ್ರದೇಶದಲ್ಲಿ `ಲವ್ ಜಿಹಾದ’ನ ಹೊಸ ಪ್ರಕರಣ ಬೆಳಕಿಗೆ !

ಪ್ರಾತಿನಿಧಿಕ ಛಾಯಾಚಿತ್ರ

ಕನ್ನೋಜ (ಉತ್ತರಪ್ರದೇಶ) – ಜಿಲ್ಲೆಯ ಛಿಬ್ರಾಮಾವೂ ಕೋತವಾಲಿ ಪ್ರದೇಶದಲ್ಲಿ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಹಿಂದೂ ವಿದ್ಯಾರ್ಥಿನಿಯ ಮೇಲೆ ಮತಾಂತರಗೊಳಿಸಿ ವಿವಾಹವಾಗುವಂತೆ ಅದೇ ಪರಿಸರದ ಓರ್ವ ಮುಸಲ್ಮಾನ ಯುವಕ ಒತ್ತಡ ಹೇರುತ್ತಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಬಳಿಕ ಆರೋಪಿ ಯುವಕನು ತನ್ನ ಕುಟುಂಬದೊಂದಿಗೆ ಸಂತ್ರಸ್ತ ಬಾಲಕಿ ಮತ್ತು ಅವಳ ಸಹೋದರನಿಗೆ ಥಳಿಸಿದನು. (ಇದರಿಂದ ಅವನ ಉದ್ಧಟತನ ಕಂಡು ಬರುತ್ತದೆ. ಕಾನೂನಿನ ಭಯ ಇಲ್ಲದಿರುವ ಇಂತಹವನ್ನು ಜೈಲಿಗಟ್ಟಬೇಕು – ಸಂಪಾದಕರು)

ಸಂತ್ರಸ್ತ ಬಾಲಕಿಯು ತನ್ನ ದೂರಿನಲ್ಲಿ, ಅವಳ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಮುಸಲ್ಮಾನ ಸಮುದಾಯದ ಒಬ್ಬ ಯುವಕನು ಶಾಲೆಗೆ ಹೋಗುವಾಗ ಅವಳ ದಾರಿಯನ್ನು ಅಡ್ಡಗಟ್ಟಿ ಪೀಡಿಸುತ್ತಿದ್ದನು. ಅವನು ಅವಳಿಗೆ ಮತಾಂತರಗೊಳಿಸಿ ವಿವಾಹವಾಗಲು ಒತ್ತಡ ಹೇರುತ್ತಿದ್ದನು. ಆರೋಪಿ ಯುವಕನು ಸಂತ್ರಸ್ತ ಬಾಲಕಿಯ ಮನೆಗೆ ಹೋಗಿಎ, `ವಿವಾಹವಾಗದಿದ್ದರೆ ನಿನ್ನನ್ನು ಮತ್ತು ನಿನ್ನ ಕುಟುಂಬದವರನ್ನು ಕೊಲ್ಲುತ್ತೇನೆ’, ಎಂದು ಬೆದರಿಕೆ ಹಾಕಿದ್ದನು. ಈ ಪ್ರಕರಣದ ತನಿಖೆ ಮುಂದುವರಿದಿದೆಯೆಂದು ಪೊಲೀಸ ನಿರೀಕ್ಷಕ ಸಂತೋಷಕುಮಾರ ಕುಶವಾಹ ಹೇಳಿದ್ದಾರೆ.