ಪ್ರಧಾನಮಂತ್ರಿ ಮೋದಿಯವರು ಆಸ್ಟ್ರೇಲಿಯಾ ಪ್ರಧಾನಮಂತ್ರಿಯೆದುರಿಗೆ ಹಿಂದೂ ದೇವಸ್ಥಾನಗಳ ದಾಳಿಯ ಕುರಿತು ವಿಷಯವನ್ನು ಮಂಡನೆ !

ಭಾರತೀಯ ಸಮುದಾಯದ ಸುರಕ್ಷತೆ ನಮ್ಮ ಪ್ರಾಧಾನ್ಯತೆ ಆಗಿದೆ – ಆಸ್ಟ್ರೇಲಿಯಾ ಪ್ರಧಾನಮಂತ್ರಿಯ ಆಶ್ವಾಸನೆ

ಆಸ್ಟ್ರೇಲಿಯಾ ಪ್ರಧಾನಮಂತ್ರಿ ಆಂಥನಿ ಅಲ್ಬನೀಜ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಆಂಥನಿ ಅಲ್ಬನೀಜರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ಚರ್ಚಿಸುವಾಗ ಆಸ್ಟ್ರೇಲಿಯದಲ್ಲಿ ಹಿಂದೂಗಳ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿಯ ಕುರಿತು ವಿಷಯ ಮಂಡಿಸಿದರು.

1. ಈ ಚರ್ಚೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಆಸ್ಟ್ರೇಲಿಯಾದ ದೇವಸ್ಥಾನಗಳ ಮೇಲಿ ದಾಳಿಯ ಬಗ್ಗೆ ಮೇಲಿಂದ ಮೇಲೆ ಕೇಳಿ ಬರುತ್ತಿದೆ. ಇಂತಹ ವಾರ್ತೆಗಳಿಂದ ಭಾರತದ ಎಲ್ಲ ಜನರಲ್ಲಿ ಕಳವಳ ನಿರ್ಮಾಣವಾಗಿದೆ ಮತ್ತು ಇದರಿಂದ ನಾನು ದುಃಖಿತನಾಗಿರುವುದು ಸ್ವಾಭಾವಿಕವಾಗಿದೆ. ಈ ಭಾವನೆ ಮತ್ತು ಚಿಂತೆಯನ್ನು ಪ್ರಧಾನಮಂತ್ರಿ ಅಲ್ಬನೀಜ ಇವರ ಎದುರಿಗೆ ಮಂಡಿಸಲಾಯಿತು. ಅವರು ನನಗೆ ಭಾರತೀಯ ಸಮುದಾಯದ ರಕ್ಷಣೆ ಅವರ ಪ್ರಾಮುಖ್ಯತೆಯಾಗಿದೆಯೆಂದು ಆಶ್ವಾಸನೆ ನೀಡಿದ್ದಾರೆ. ಈ ವಿಷಯದ ಮೇಲೆ ಎರಡೂ ದೇಶಗಳು ನಿಯಮಿತವಾಗಿ ಸಂಪರ್ಕದಲ್ಲಿದ್ದು, ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ.

2. ಪ್ರಧಾನಮಂತ್ರಿ ಮೋದಿಯವರು ಮಾತು ಮುಂದುವರೆಸಿ, ಹಿಂದ ಮತ್ತು ಪ್ರಶಾಂತ ಕ್ಷೇತ್ರದ ಸಮುದ್ರದ ಸುರಕ್ಷತೆಯನ್ನು ಹೆಚ್ಚಿಸಲು ನಮ್ಮ ಚರ್ಚೆಯಾಯಿತು. ನಾವು ಒಂದು ವ್ಯಾಪಕ ಆರ್ಥಿಕ ಒಪ್ಪಂದದ ಮೇಲೆಯೂ ಕಾರ್ಯ ಮಾಡುತ್ತಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಾವು ಒಪ್ಪಂದವನ್ನು ಮಾಡಿದ್ದೇವೆ, ಎಂದೂ ಸಹ ಹೇಳಿದರು.