ಇಸ್ಲಾಮಾಬಾದಿನಲ್ಲಿ ನಡೆದ ಮಹಿಳೆಯರ ಮೆರವಣಿಗೆಯ ಮೇಲೆ ಪೊಲೀಸರ ಲಾಠಿ ಚಾರ್ಜ್

ಇಸ್ಲಾಮಾಬಾದ್ (ಪಾಕಿಸ್ತಾನ) – ಇಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಮಹಿಳೆಯರು ನಡೆಸಿರುವ ಮೆರವಣಿಗೆಯ ಸಮಯದಲ್ಲಿ ಹಿಂಸಾಚಾರ ಸಂಭವಿಸಿದೆ. ಈ ಸಮಯದಲ್ಲಿ ಮೆರವಣಿಗೆಯಲ್ಲಿದ್ದ ಮಹಿಳೆಯರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. ಈ ಘಟನೆಯು ಇಲ್ಲಿನ ಪ್ರೆಸ್ ಕ್ಲಬ್‌ನ ಬಳಿ ನಡೆದಿದೆ. ಪೊಲೀಸರು ಮೆರವಣಿಗೆ ನಡೆಸಿರುವವರ ಮೇಲೆ ಲಾಠಿ ಚಾರ್ಜ್ ನಡೆಸಿ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ, ಎಂದು ಆರೋಪಿಸಲಾಗಿದೆ.

೧. ಈ ಮೆರವಣಿಗೆಯಲ್ಲಿ ಮಂಗಳಮುಖಿಯರೂ ಸಹಭಾಗಿಯಾಗಿದ್ದರು. ಪೊಲೀಸರು ಹೇಳುವಂತೆ, ಮೆರವಣಿಗೆಯಲ್ಲಿ ಸಹಭಾಗಿಯಾಗಲು ಮಂಗಳಮುಖಿಯರು ಪ್ರಯತ್ನಿಸುತ್ತಿದ್ದರಿಂದ ಗೊಂದಲ ನಿರ್ಮಾಣವಾಗಿದೆ, ಆದರೆ ಮೆರವಣಿಗೆಯಲ್ಲಿನ ಮಹಿಳೆಯರು ಪೊಲೀಸರು ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದರು ಎಂದು ಹೇಳಿದ್ದಾರೆ.

೨. ಈ ಮೆರವಣಿಗೆಯಲ್ಲಿ ಸಚಿವೆ ಶೇರಿ ರೆಹಮಾನರವರು ಸಹಭಾಗಿಯಾಗಿದ್ದರು. ಅವರು ಟ್ವಿಟ್ ಮಾಡಿ ನಡೆದಿರುವ ಗೊಂದಲದ ಬಗ್ಗೆ ಹೇಳಿದ್ದಾರೆ, ಒಂದು ಚಿಕ್ಕ ಮತ್ತು ಶಾಂತಿಯುತವಾಗಿ ನಡೆಯುವ ಮೆರವಣಿಗೆಯ ಮೇಲೆ ಇಸ್ಲಾಮಾಬಾದಿನ ಪೊಲೀಸರಿಂದ ನಡೆದ ಲಾಠಿ ಚಾರ್ಜ್ ನಿರರ್ಥಕವಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಈ ಘಟನೆಯ ತನಿಖೆಯಾಗಬೇಕು, ಪಾಕಿಸ್ತಾನ ಮಾನವಾಧಿಕಾರ ಆಯೋಗವು ಕೂಡ ಲಾಠಿ ಚಾರ್ಜನ್ನು ಖಂಡಿಸಿದೆ.