ಪಾಕಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳ ಉಲ್ಲಂಘನೆಯ ವಿರುದ್ಧ ನೆದರಲ್ಯಾಂಡನಲ್ಲಿ ಆಂದೋಲನ

ಆರ್ಮಸ್ಟರಡ್ಯಾಮ್ಸ (ನೆದರಲ್ಯಾಂಡ) – ಪಾಕಿಸ್ತಾನದಲ್ಲಿ ಮಹಿಳೆಯರು ಮತ್ತು ಯುವತಿಯರ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಪಾಕಿಸ್ತಾನಿ ನಾಗರಿಕರು ಇಲ್ಲಿ ಆಂದೋಲನವನ್ನು ನಡೆಸಿದರು. ಇದರಲ್ಲಿ `ಆಕ್ಷನ್ ಕಮಿಟಿ ಫಾರ ಕ್ರಿಶ್ಚಿಯನ್ ರೈಟ್ಸ’, `ಒವರ್ಸೀಸ ಪಾಕಿಸ್ತಾನ ಕ್ರಿಶ್ಚಿಯನ್ ಅಲಾಯನ್ಸ’ ಮತ್ತು `ಗ್ಲೋಬಲ ಹ್ಯೂಮನ ರೈಟ್ಸ ಡಿಫೆನ್ಸ’ ಈ ಸಂಘಟನೆಗಳು ಭಾಗವಹಿಸಿದ್ದವು.

ಈ ಸಂಘಟನೆಗಳು, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲೆ ಬಲಾತ್ಕಾರ, ಹತ್ಯೆ, ಕೌಟುಂಬಿಕ ಕಲಹ, ಬಲವಂತದ ವಿವಾಹ, ಮತಾಂತರ ಇತ್ಯಾದಿ ವಿಷಯಗಳು ಸಾಮಾನ್ಯವಾಗಿವೆ. ಮತಾಂತರ ಮತ್ತು ಬಲವಂತದ ವಿವಾಹದ ಸಂದರ್ಭದ ಘಟನೆಗಳು ಅಲ್ಪಸಂಖ್ಯಾತರ ವಿಷಯದಲ್ಲಿ ಅಧಿಕವಾಗಿರುತ್ತದೆ. ಪಾಕಿಸ್ತಾನದಲ್ಲಿ ಹಿಂದೂ ಮತ್ತು ಕ್ರೈಸ್ತರ ಸ್ಥಿತಿ ಅತ್ಯಂತ ದಯನೀಯವಾಗಿದೆ. ಅವರನ್ನು ಅಪಹರಿಸಿ ಮತಾಂತರಗೊಳಿಸಿ ವಿವಾಹ ಮಾಡಲಾಗುತ್ತದೆ. ಈ ಯುವತಿಯರ ಪೋಷಕರು ನ್ಯಾಯಾಲಯದ ಹೋರಾಟದಲ್ಲಿ ಸೋಲುತ್ತಾರೆ ಎಂದು ಹೇಳಿದೆ.