ಉತ್ತರಾಖಂಡನ ಅರಣ್ಯ ಪ್ರದೇಶದ 2 ಸಾವಿರ ಎಕರೆ ಭೂಮಿ ಅತಿಕ್ರಮಣ

ಮಸೀದಿ, ಮಜಾರ್ (ಮುಸಲ್ಮಾನ ಫಕಿರರ ಗೋರಿ), ಮನೆ ಮುಂತಾದವುಗಳ ಸಮಾವೇಶ

ಡೆಹರಾಡೂನ್ (ಉತ್ತರಖಂಡ) – ಉತ್ತರಾಖಂಡ ರಾಜ್ಯದ ಅರಣ್ಯ ಪ್ರದೇಶದಲ್ಲಿನ ೨೫ ಸಾವಿರ ಎಕರೆ ಭೂಮಿ ಅತಿಕ್ರಮಣ ಮಾಡಲಾಗಿದ್ದೂ ಅಲ್ಲಿ ಮಸೀದಿ, ಮಜಾರ್ ಮತ್ತು ಮನೆಗಳು ಕಟ್ಟಿದ್ದಾರೆ, ಎಂದು ‘ಪಾಂಚಜನ್ಯ ‘ ನಿಯತಕಾಲಿಕೆಯು ಈ ವಾರ್ತೆಯನ್ನು ನೀಡಿದೆ. ಇನ್ನೊಂದು ಕಡೆ ರಾಜ್ಯದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು, ‘ರಾಜ್ಯದಲ್ಲಿ ಒಟ್ಟು ಅತಿಕ್ರಮಣದ ಬಗ್ಗೆ ಉಪಸಮಿತಿ ಸ್ಥಾಪಿಸಿ ಅದನ್ನು ಗುರುತಿಸಲಾಗುವುದು ಎಂದು ಹೇಳಿದ್ದಾರೆ.

೧. ಅರಣ್ಯ ಪ್ರದೇಶದಲ್ಲಿನ ಅತಿಕ್ರಮಣದ ಬಗ್ಗೆ ಬಹಿರಂಗವಾದನಂತರ ಮುಖ್ಯಮಂತ್ರಿ ಧಾಮೀಯವರು ಅರಣ್ಯ ಸಚಿವ ಸಬೋಧ ಉನಿಯಾಲ್ ಇವರು ಅತಿಕ್ರಮಣದ ಮಾಹಿತಿ ಕಲೆಹಾಕಲು ಆದೇಶ ನೀಡಿದ್ದಾರೆ. ಬಹಿರಂಗವಾಗಿರುವ ಮಾಹಿತಿಯ ಪ್ರಕಾರ ಅರಣ್ಯ ಪ್ರದೇಶದಲ್ಲಿನ ಶೇಕಡ ೮೦ ಪಂಚಾಯಿತಿಯ ಗಡಿ ಸ್ಪಷ್ಟವಾಗಿಲ್ಲದ್ದರಿಂದ ಅತಿಕ್ರಮಣ ನಡೆದಿದೆ. ರಾಜ್ಯದ ೧೧ ಜಿಲ್ಲೆಯಲ್ಲಿ ೧೧ ಸಾವಿರ ೩೩೬ ಅರಣ್ಯ ಪಂಚಾಯತಿ ಇದೆ. ಇದರಲ್ಲಿ ೫ ಸಾವಿರ ೪೪೯ ಚದರ ಕಿಲೋಮೀಟರ್ ಗಿಂತಲೂ ಹೆಚ್ಚಿನ ಭೂಮಿ ಇದೆ. ಇದರಲ್ಲಿ ಶೇಕಡ ೯೫ ಗಢವಾಲ್ ಮತ್ತು ಶೇಕಡ ೮೦ ಕುಮಾಯೂ ಜಿಲ್ಲೆಯಲ್ಲಿನ ಅರಣ್ಯ ಪಂಚಾಯತಿಗೆ ಗುರುತಿಸಲಾಗಿಲ್ಲ. ಅಲ್ಲಿಯೇ ಎಲ್ಲಕ್ಕಿಂತ ಹೆಚ್ಚು ಅತಿಕ್ರಮಣ ನಡೆದಿದೆ.

೨. ಅತಿಕ್ರಮಣ ನಡೆಸುವವರು ಹೆಚ್ಚಿನವರು ಹೊರ ರಾಜ್ಯದವರಾಗಿದ್ದಾರೆ. ಅವರು ಇಲ್ಲಿ ತಾತ್ಕಾಲಿಕ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚು ಮುಸಲ್ಮಾನರಿದ್ದಾರೆ. ಈಗ ಅವರ ಮೇಲೆ ಅರಣ್ಯ ಇಲಾಖೆಯಿಂದ ಯಾವುದೇ ಕ್ರಮ ಕೈಗೊಂಡಿರುವುದು ಕಂಡು ಬಂದಿಲ್ಲ.

೩. ಅರಣ್ಯ ಇಲಾಖೆಯವರ ಪ್ರಕಾರ, ‘ಅರಣ್ಯ ಪಂಚಾಯತಿಯಿಂದ ಈ ಭೂಮಿ ಪಂಚಾಯತಿಯ ಹೆಸರಿನಲ್ಲಿ ಮಾಡಿರಲಿಲ್ಲ. ಇನ್ನೊಂದು ಕಡೆ ಇದರ ಜವಾಬ್ದಾರಿ ತೆರಿಗೆ ಇಲಾಖೆಯದಾಗಿದೆ ಎಂದು ಹೇಳಲಾಗುತ್ತಿದೆ.

೪. ಅರಣ್ಯ ಸಚಿವ ಸುಬೋಧ ಉನಿಯಾಲ್ ಇವರ ಪ್ರಕಾರ, ಅರಣ್ಯ ಪಂಚಾಯತಿಯ ಗಡಿಯ ನಿರ್ಧಾರ ಮಾಡುವ ಜವಾಬ್ದಾರಿ ತೆರಿಗೆ ಇಲಾಖೆಯದಾಗಿದೆ. ನಾವು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆಗೆ ೩ ಸಭೆ ನಡೆಸಿದ್ದೇವೆ. ನಾವು, ತೆರಿಗೆ ಇಲಾಖೆ ಗಡಿ ನಿರ್ಧಾರ ಮಾಡಿದ ನಂತರ ಆ ಭೂಮಿ ಅರಣ್ಯ ಇಲಾಖೆಗೆ ಒಪ್ಪಿಸುವುದು, ಅದರ ನಂತರ ಅತಿಕ್ರಮಣ ಹುಡುಕಿ ಅದರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬುದರ ಬಗ್ಗೆಯೂ ವಿಚಾರ ಮಾಡಿದ್ದೇವೆ ಎಂದು ಹೇಳಿದರು. ಮಂತ್ರಿ ಮಂಡಲದ ಮುಂದಿನ ಸಭೆಯಲ್ಲಿ ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

 ಸಂಪಾದಕೀಯ ನಿಲುವು

ಇಷ್ಟೊಂದು ದೊಡ್ಡ ಭೂಮಿಯ ಅತಿಕ್ರಮಣವಾಗುವವರೆಗೆ ಅರಣ್ಯ ಇಲಾಖೆ ಮತ್ತು ಸರಕಾರ ನಿದ್ರಿಸುತ್ತಿತ್ತೆ ? ಜಗತ್ತಿನಾದ್ಯಂತ ಸರಕಾರಿ ಭೂಮಿ ಇಷ್ಟೊಂದು ಅತಿಕ್ರಮಣ ಆಗಿರುವುದು ಎಲ್ಲೂ ಇರಲಿಕ್ಕಿಲ್ಲ, ಇದು ಸರಕಾರಕ್ಕೆ ನಾಚಿಕೆಗೇಡು !