ಕ್ಷೀಣಿಸುತ್ತಿರುವ ಜನಸಂಖ್ಯೆಯಿಂದಾಗಿ ಮದುವೆಯಿಲ್ಲದೆ ಮಕ್ಕಳನ್ನು ಹುಟ್ಟಿಸಲು ಅವಕಾಶ ಮಾಡಿಕೊಡುತ್ತಿರುವ ಚೀನಾ !

ಅತಿವೆಚ್ಚದ ವಿವಾಹಗಳ ಮೇಲೆ ನಿರ್ಬಂಧ

ಬೀಜಿಂಗ – ಒಂದು ಕಾಲದಲ್ಲಿ ಚೀನಾ ಜಗತ್ತಿನ ಅತ್ಯಧಿಕ ಜನಸಂಖ್ಯೆ ಹೊಂದಿದ್ದ ದೇಶವಾಗಿತ್ತು; ಆದರೆ ಕೆಲವು ದಶಕಗಳ ಹಿಂದೆ ಆ ದೇಶದಲ್ಲಿ ಜಾರಿಗೊಳಿಸಿದ್ದ ಕಠಿಣ ಕಾನೂನಿನ ಕಾರಣದಿಂದ ಅದರ ಜನಸಂಖ್ಯೆಯಲ್ಲಿ ಗಮನಾರ್ಹವಾಗಿ ಇಳಿಮುಖವಾಗಿದೆ. ಅಲ್ಲಿಯ ಯುವಕರ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇಳಿಮುಖವಾಗಿದ್ದರೆ, ವೃದ್ಧರ ಸಂಖ್ಯೆ ಅಧಿಕವಾಗಿದೆ. ಕೆಲಸ ಮಾಡಲು ಯುವಕರು ಸಿಗುತ್ತಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಚೀನಾ ಹೆಚ್ಚು ಮಕ್ಕಳನ್ನು ಪಡೆಯಲು ವಿವಾಹದ ಸಮಯದಲ್ಲಿ ನೀಡುವ ವರದಕ್ಷಿಣೆಯನ್ನು ನಿರ್ಬಂಧಿಸಿದೆ. ಇದರೊಂದಿಗೆ ಹೆಚ್ಚು ವೆಚ್ಚವನ್ನು ಮಾಡಿ ವಿವಾಹವಾಗುವುದನ್ನು ಕೂಡ ನಿರ್ಬಂಧಿಸಿದೆ. ವಿವಾಹದಲ್ಲಿ ಹೆಚ್ಚು ವೆಚ್ಚವಾಗುತ್ತಿರುವುದರಿಂದ ಅನೇಕ ಜನರು ವಿವಾಹವಾಗುತ್ತಿರಲಿಲ್ಲ. ಈಗ ಈ ನಿರ್ಬಂಧದಿಂದ ಜನರು ವಿವಾಹವಾಗಬಹುದು. ಇದಕ್ಕಾಗಿ ಸರಕಾರ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲು ಪ್ರಯತ್ನಿಸುತ್ತಿದೆ. ಇಷ್ಟೇ ಅಲ್ಲ, ವಿವಾಹವಾಗದೆಯೂ ಮಕ್ಕಳನ್ನು ಹುಟ್ಟಿಸಲು ಸಹ ಚೀನಾ ಅನುಮತಿ ನೀಡಿದೆ.