ಪುಣೆಯ ಶ್ರೇಷ್ಠ ಸಂತ ಪ.ಪೂ. ಶ್ರೀಕೃಷ್ಣ ಕರ್ವೆ ಗುರುಜೀ ಇವರ ದೇಹತ್ಯಾಗ ! 

ಪ.ಪೂ. ಶ್ರೀಕೃಷ್ಣ ಕರ್ವೆ ಗುರುಜೀ

ಪುಣೆ – ಧಾರ್ಮಿಕ ಮತ್ತು ಜ್ಯೋತಿಷ್ಯತಜ್ಞ ಪ.ಪೂ. ಶ್ರೀಕೃಷ್ಣ ಕರ್ವೆಗುರುಜಿ ಇವರು ಫೆಬ್ರವರಿ ೨೨ ರಂದು ರಾತ್ರಿ ೨ ಗಂಟೆಗೆ ದೇಹತ್ಯಾಗ ಮಾಡಿದರು ಅವರಿಗೆ ೯೬ ವರ್ಷದವರಾಗಿದ್ದರು. ಮಹಾರಾಷ್ಟ್ರದ ತಳೆಗಾವ ದಾಭಾಡೆಯ ನಿವಾಸದಲ್ಲಿ ಅವರ ಪ್ರಾಣಜ್ಯೋತಿಯು ಆರಿತು. ಇವರ ನಂತರ ಮಗ, ಮಗಳು, ಸೊಸೆ, ಮೊಮ್ಮಕ್ಕಳು ಮತ್ತು ಸಹೋದರ ಹೀಗೆ ಅವರ ಕುಟುಂಬ ಇದೆ. ಫೆಬ್ರವರಿ ೨೩ ರಂದು ಮಧ್ಯಾಹ್ನ ೩ ಗಂಟೆಯವರೆಗೆ ಅವರ ನಿವಾಸಸ್ಥಾನದಲ್ಲಿ ಪ.ಪೂ. ಶ್ರೀಕೃಷ್ಣ ಕರ್ವೆಗುರುಜಿ ಇವರ ಪಾರ್ಥಿವ ಶರೀರವನ್ನು ದರ್ಶನಕ್ಕಾಗಿ ಇಡಲಾಗಿತ್ತು. ಸಂಜೆ ಅಂತ್ಯಸಂಸ್ಕಾರ ಮಾಡಲಾಯಿತು.

ಭಾರತ ಸಹಿತ ವಿದೇಶಗಳಲ್ಲಿಯೂ ಪ.ಪೂ. ಶ್ರೀಕೃಷ್ಣ ಕರ್ವೆಗುರುಜಿ ಇವರ ಭಕ್ತರು ಇದ್ದಾರೆ. ಅಮೇರಿಕಾ ಹಾಲೆಂಡ್, ದುಬೈ ಮತ್ತು ಇಂಗ್ಲೆಂಡ್ ನಲ್ಲಿಯೂ ಇವರ ಭಕ್ತರು ಇದ್ದಾರೆ. | ಶ್ರೀ ವಿಶ್ವದರ್ಶನದೇವತಾಯೈ ನಮಃ |

ಈ ಮಂತ್ರಜಪ ಮಾಡುತ್ತಾ ಅವರ ಮಾರ್ಗದರ್ಶನದಲ್ಲೇ ಪುಣೆಯ ಎಮ್.ಐ.ಟಿ.ಯಲ್ಲಿ ಒಂದು ಭವ್ಯ ದೇವಸ್ಥಾನವನ್ನೂ ನಿರ್ಮಿಸಲಾಗಿದೆ.