India Mourns Death of Iran’s President: ಇರಾನ್ ರಾಷ್ಟ್ರಾಧ್ಯಕ್ಷ ರೈಸಿ ಅವರ ನಿಧನದಿಂದ ಭಾರತದಲ್ಲಿ 1 ದಿನದ ರಾಜಕೀಯ ಶೋಕಾಚರಣೆ !

ನವ ದೆಹಲಿ : ಹೆಲಿಕಾಪ್ಟರ್ ಪತನದಲ್ಲಿ ಇರಾನ್ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವರು ಸಾವನ್ನಪ್ಪಿದ್ದಾರೆ. ಈ ನಿಮಿತ್ತ ಭಾರತ ಸರ್ಕಾರವು ಮೇ 21 ರಂದು ದೇಶದಲ್ಲಿ ಒಂದು ದಿನದ ರಾಜಕೀಯ ಶೋಕಾಚರಣೆ ಪಾಲಿಸಿತು. ಗೃಹ ಇಲಾಖೆಯು, ಭಾರತದಾದ್ಯಂತ ಒಂದು ದಿನದ ರಾಜಕೀಯ ಶೋಕಾಚರಣೆಯ ದಿನವನ್ನು ಪಾಲಿಸಲು ನಿರ್ಧರಿಸಲಾಗಿದೆ. ಈ ದಿನದಂದು ಭಾರತದ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು ಹಾಗೆಯೇ ಯಾವುದೇ ಅಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂದಿದೆ.

1. ಇರಾನ್ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ರೈಸಿ ಮೇ 19 ರಂದು ನಿಧನರಾದರು. ಅವರು ಅಜೆರ್ಬೈಜಾನದ ರಾಷ್ಟ್ರಾಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರೊಂದಿಗೆ ಒಂದು ಅಣೆಕಟ್ಟನ್ನು ಉದ್ಘಾಟಿಸುವವರಿದ್ದರು; ಆದರೆ ಅಲ್ಲಿಗೆ ಹೋಗುತ್ತಿದ್ದಾಗ ಅವರ ಹೆಲಿಕಾಪ್ಟರ್ ಪತನವಾಯಿತು.

2. ಪ್ರಧಾನಿ ನರೇಂದ್ರ ಮೋದಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

3. ಭಾರತವು ರೈಸಿ ಇವರೊಂದಿಗೆ ಉತ್ತಮ ಸಂಬಂಧ ಹೊಂದಿತ್ತು. ಅವರ ಅಧಿಕಾರಾವಧಿಯಲ್ಲಿ ಭಾರತ ಮತ್ತು ಇರಾನ್ ನಡುವೆ ಅನೇಕ ಒಪ್ಪಂದಗಳಾದವು. ಕೆಲವು ದಿನಗಳ ಹಿಂದೆ, ಭಾರತ ಮತ್ತು ಇರಾನ್ ಈ ಉಭಯ ದೇಶಗಳ ಮಧ್ಯೆ ಚಾಬಹಾರ್ ಬಂದರಿನ ಸಂದರ್ಭದಲ್ಲಿ ಅತ್ಯಂತ ಮಹತ್ವ ಪೂರ್ಣ ಒಪ್ಪಂದ ಆಗಿತ್ತು.