ರಾಮಮಂದಿರ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಪ್ರಧಾನ ಅರ್ಚಕರಾಗಿದ್ದ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ನಿಧನ

ಉತ್ತರ ಪ್ರದೇಶ – ರಾಮಮಂದಿರ ಪ್ರಾಣ ಪ್ರತಿಷ್ಠೆಯಲ್ಲಿ ತೊಡಗಿದ್ದ 121 ವೈದಿಕ ಬ್ರಾಹ್ಮಣರ ನೇತೃತ್ವ ವಹಿಸಿದ್ದ ಕಾಶಿಯ ಪ್ರಧಾನ ಅರ್ಚಕ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಈ ಸೂಚನೆಯ ನಂತರ ಕಾಶಿಯ ಜನರಲ್ಲಿ ದುಖಃದ ಅಲೆ ಎದ್ದಿತು. ಜನವರಿಯಲ್ಲಿ, ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಪೂಜೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನೇತೃತ್ವದಲ್ಲಿ ಎಲ್ಲ ಪೂಜೆಗಳು ನಡೆದವು. ಮಗ ಮತ್ತು ಕುಟುಂಬದ ಇತರ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ, ಅವರು ಡಿಸೆಂಬರ್ 2021 ರ ಕಾಶಿ ವಿಶ್ವನಾಥ ಧಾಮ್ ಲೋಕಾರ್ಪಣೆ ಪೂಜೆಯಲ್ಲೂ ಭಾಗವಹಿಸಿದ್ದರು.