ಕಳೆದ ಕೆಲವು ತಿಂಗಳುಗಳಿಂದ ಎಲ್ಲೆಡೆ ಕೇವಲ ‘ಶ್ರದ್ಧಾ ವಾಲಕರ-ಆಫ್ತಾಬ್ ಪೂನಾವಾಲಾ ಪ್ರಕರಣ ಅಂದರೆ ‘ಶ್ರದ್ಧಾ ವಾಲಕರಳ ಹತ್ಯೆಯ ಪ್ರಕರಣ ಇದೊಂದೇ ಪ್ರಕರಣದ ಚರ್ಚೆ ನಡೆದಿದೆ. ಏನು ನಡೆಯಿತೋ ಅದು ಅತ್ಯಂತ ಭಯಾನಕವಾಗಿತ್ತು, ಇದರಿಂದಲೂ ನಾವು ಇಂದು ಪಾಠವನ್ನು ಕಲಿಯದಿದ್ದರೆ, ಇಂದು ಒಬ್ಬ ಹುಡುಗಿಯ ೩೫ ತುಂಡುಗಳು ಸಿಕ್ಕವು, ಮುಂದೆ ಎಷ್ಟು ಹುಡುಗಿಯರ ಎಷ್ಟು ತುಂಡುಗಳು ನಮಗೆ ಸಿಗುವವು ಎಂಬುದು ನಮಗೆ ಗೊತ್ತಿಲ್ಲ ? ಇದನ್ನು ಕೇಳಿಯೇ ಮೈಝುಮ್ಮೆನ್ನುತ್ತದೆ; ಆದರೆ ‘ಲವ್ ಜಿಹಾದ್ ಈ ಭೀಕರ ಸತ್ಯವನ್ನು ಸ್ವೀಕರಿಸುವುದು ಮತ್ತು ಅದಕ್ಕೆ ಕೂಡಲೇ ಪರಿಹಾರೋಪಾಯವನ್ನು ಮಾಡುವುದು ಅತ್ಯಾವಶ್ಯಕವಾಗಿದೆ. ಆದುದರಿಂದ ನಿಮ್ಮ ದೇಹದ ತುಂಡುಗಳಾಗಬಾರದೆಂದು ಅನಿಸುತ್ತಿದ್ದರೆ, ನರಾಧಮರ (ಕೊಲೆಗಡುಕರ) ಮೇಲೆ ‘ಶ್ರದ್ಧೆ ಇಡುವುದನ್ನು ನಿಲ್ಲಿಸಿ ಮತ್ತು ಹಿಂದೂ ಹುಡುಗಿಯರೇ, ಕೂಡಲೇ ಜಾಗರೂಕರಾಗಿ !
೧. ಆಫ್ತಾಬ್‌ನನ್ನು ಪ್ರೀತಿಸುವ ‘ಸ್ವತಂತ್ರ ವಿಚಾರಸರಣಿಯ ಶ್ರದ್ಧಾ !
ಶ್ರದ್ಧಾ ವಾಲಕರ… ! ೨೭ ವರ್ಷದ ಯುವತಿ. ನೌಕರಿಯನ್ನು ಮಾಡುವ, ಸಂಪಾದಿಸುವ, ಇಂದಿನ ಜಗತ್ತಿನಲ್ಲಿ ‘ಇಂಡಿಪೆಂಡೆಂಟ್ (ಸ್ವತಂತ್ರ), ತನ್ನದೇ ಆದ ಅಭಿಪ್ರಾಯ ಮತ್ತು ಅನೇಕ ಬಾರಿ ಪರಾಕಾಷ್ಠೆಯ ಅಭಿಪ್ರಾಯಗಳನ್ನು ಹೊಂದಿರುವ ಹುಡುಗಿ. ಶ್ರದ್ಧಾ ೨೫ ವರ್ಷದವಳಿರುವಾಗ ಪಾಲಘರದಲ್ಲಿನ ತನ್ನ ಮನೆಯನ್ನು ಬಿಟ್ಟು ಮುಂಬಯಿಗೆ ನೌಕರಿಯನ್ನು ಹುಡುಕಿ ಬರುತ್ತಾಳೆ. ಒಂದು ಬಹುರಾಷ್ಟ್ರೀಯ ಕಂಪನಿಯ ‘ಕಾಲ್ ಸೆಂಟರ್ನಲ್ಲಿ ಅವಳಿಗೆ ನೌಕರಿ ಸಿಗುತ್ತದೆ ಮತ್ತು ಅಲ್ಲಿಯೇ ಅವಳಿಗೆ ಅವನ ಭೇಟಿಯಾಗುತ್ತದೆ. ಈ ೨೮ ವರ್ಷದ ಯುವಕ ಆಫ್ತಾಬ್ ಆಮಿನ್ ಪೂನಾವಾಲಾನೊಂದಿಗೆ ಅವಳ ಸ್ನೇಹವಾಗುತ್ತದೆ. ಕ್ರಮೇಣ ಈ ಸ್ನೇಹವು ಪ್ರೇಮದಲ್ಲಿ ರೂಪಾಂತರವಾಗುತ್ತದೆ ಮತ್ತು ಇಬ್ಬರೂ ಒಟ್ಟಿಗಿರಲು ನಿರ್ಧರಿಸುತ್ತಾರೆ.
೨. ತನ್ನ ತಾಯಿ-ತಂದೆಯರ ವಿರೋಧವನ್ನು ದುರ್ಲಕ್ಷಿಸುವುದು, ಅವರಿಗೆ ‘ನನ್ನ ಅಬ್ದುಲ್ ಬೇರೆ ಆಗಿದ್ದಾನೆ ಎಂದು ಉತ್ತರಿಸುವುದೇ ಮುಂದೆ ಅವಳ ದುರ್ದಶೆಗೆ ಕಾರಣವಾಗುವುದು !
ಅನಂತರ ಶ್ರದ್ಧಾ ತನ್ನ ಮನೆಗೆ ಹೋಗುತ್ತಾಳೆ. ತನ್ನ ತಾಯಿಗೆ ತನ್ನ ಈ ಪ್ರೇಮಪ್ರಕರಣದ ಬಗ್ಗೆ ಹೇಳುತ್ತಾಳೆ, ಅವಳ ತಾಯಿ ಈ ಪ್ರೇಮಪ್ರಕರಣವನ್ನು ತೀವ್ರವಾಗಿ ವಿರೋಧಿಸುತ್ತಾಳೆ. ‘ಹುಡುಗ ಮುಸಲ್ಮಾನನಾಗಿದ್ದಾನೆ, ನಮ್ಮಲ್ಲಿ ಇದೆಲ್ಲ ನಡೆಯು ವುದಿಲ್ಲ, ಎಂದು ತಾಯಿಯು ಅವಳಿಗೆ ಸ್ಪಷ್ಟವಾಗಿ ಹೇಳುತ್ತಾಳೆ; ಆದರೆ ಶ್ರದ್ಧಾ ಕೇಳುವುದಿಲ್ಲ. ಶ್ರದ್ಧಾಳ ತಂದೆ ಅವಳ ಕುಟುಂಬ ದಿಂದ ಬೇರೆ ಇರುತ್ತಾರೆ. ಅವರಿಗೂ ಈ ಪ್ರಕರಣದ ಕಲ್ಪನೆಯನ್ನು ನೀಡಲಾಗುತ್ತದೆ. ಅವರು ಸಹ ಇದನ್ನು ಅಷ್ಟೇ ತೀವ್ರವಾಗಿ ವಿರೋಧಿಸುತ್ತಾರೆ. ಆಗ ಶ್ರದ್ಧಾ ಸೊಕ್ಕಿನಿಂದ ‘ನಾನು ೨೫ ವರ್ಷದವಳಾಗಿದ್ದು ನನಗೆ ನನ್ನ ನಿರ್ಣಯಗಳನ್ನು ತೆಗೆದುಕೊಳ್ಳಲು ಬರುತ್ತದೆ. ನಿಮಗೆ ಒಪ್ಪಿಗೆ ಇರದಿದ್ದರೆ, ಇಂದಿನಿಂದ ನಿಮ್ಮ ಮಗಳು ಸತ್ತಳೆಂದು ತಿಳಿಯಿರಿ, ಎಂದು ಅತ್ಯಂತ ಉದ್ಧಟತನದಿಂದ ಉತ್ತರಿಸುತ್ತಾಳೆ ಮತ್ತು ಹೊರಟು ಹೋಗುತ್ತಾಳೆ. ಮುಂಬರುವ ಸ್ವಲ್ಪ ಸಮಯದಲ್ಲಿಯೇ ತನ್ನ ಮಾತುಗಳು ಸತ್ಯವಾಗಲಿದೆ ಎಂಬ ಕಲ್ಪನೆಯೇ ಅವಳಿಗಿರಲಿಲ್ಲ.
೩. ಶ್ರದ್ಧಾಳಿಗೆ ಮದುವೆ ಬೇಕಿತ್ತು ಮತ್ತು ಆಫ್ತಾಬ್‌ನಿಗೆ ಮದುವೆ ಬೇಡವಾಗಿತ್ತು, ಇದೇ ಶ್ರದ್ಧಾಳ ದೇಹದ ತುಂಡುಗಳಾಗುವುದರ ಹಿಂದಿನ ಕಾರಣ!
‘ಮೇರಾ ಅಬ್ದುಲ್ ಅಲಗ್ ಹೈ |, (ನನ್ನ ಅಬ್ದುಲ್ ಇತರರಿಗಿಂತ ಬೇರೆ ಆಗಿದ್ದಾನೆ) ಈ ರೀತಿಯ ಉತ್ತರವನ್ನು ಅವಳು ನೀಡುವುದು. ಚಿಕ್ಕಂದಿನಿಂದಲೇ ‘ಮಜಹಬ್ ನಹಿ ಸಿಖಾತಾ ಆಪಸ ಮೆ ಬೈರ ರಖನಾ, ಎಂಬುದನ್ನು ನಂಬಿದ ಶ್ರದ್ಧಾಳು ಆಫ್ತಾಬ್‌ನ ಮೇಲೆ ಅಂಧಶ್ರದ್ಧೆಯನ್ನಿಟ್ಟಳು ಮತ್ತು ಮುಂದೆ ಇದೇ ಅಂಧಶ್ರದ್ಧೆ ಅವಳನ್ನು ಅಕ್ಷರಶಃ ತುಂಡು ಗಳನ್ನಾಗಿ ಮಾಡಿತು. ಅದರ ಒಂದೇ ಒಂದು ಕಾರಣ ಶ್ರದ್ಧಾಳಿಗೆ ಮದುವೆ ಬೇಕಿತ್ತು ಮತ್ತು ಆಫ್ತಾಬ್‌ನಿಗೆ ಮದುವೆ ಬೇಡವಾಗಿತ್ತು. ಇದೊಂದೇ ಕಾರಣ ಆಫ್ತಾಬ್‌ನಿಗೆ ಶಾಂತ ರೀತಿಯಿಂದ ಶ್ರದ್ಧಾಳ ಕೊಲೆ ಮಾಡಲು ಸಾಕಾಗಿತ್ತು. ಅವಳನ್ನು ಕೊಲ್ಲುವುದು ಮತ್ತು ಕಟುಕನಂತೆ ಅವಳ ೩೫ ತುಂಡುಗಳನ್ನು ಮಾಡುವುದು, ಇದು ನಿಜವಾಗಿಯೂ ಭಯಂಕರವಾಗಿದೆ.
೪. ಶ್ರದ್ಧಾಳ ಹತ್ಯೆಯ ಹಿಂದೆ ‘ಧರ್ಮವೇ ಮುಖ್ಯ ಕಾರಣ !
ದೆಹಲಿಯಲ್ಲಿ ನಡೆದ ಶ್ರದ್ಧಾಳ ಹತ್ಯೆಯ ಪ್ರಕರಣದಲ್ಲಿನ ಧಾರ್ಮಿಕ ಅಂಗವನ್ನು ಸ್ವಲ್ಪವೂ ದುರ್ಲಕ್ಷಿಸುವಂತಿಲ್ಲ್ಲ; ಏಕೆಂದರೆ ಧರ್ಮವೇ ಈ ಅಪರಾಧಕ್ಕೆ ಮುಖ್ಯ ಕಾರಣವಾಗಿದೆ. ಅದನ್ನು ನಿರಾಕರಿಸುವಂತಿಲ್ಲ. ಆದುದರಿಂದ ‘ಎಲ್ಲ ಮುಸ್ಲಿಂ ಹುಡುಗರು ಒಂದೆ ತರಹ ಇರುವುದಿಲ್ಲ, ‘ಹಿಂದೂ ಹುಡುಗಿ ಯರನ್ನು ಮದುವೆ ಮಾಡಿಕೊಂಡ ನಂತರ ಮುಸ್ಲಿಂ ಹುಡುಗರದ್ದು ಮುಂದೆ ಏನಾಗುತ್ತದೆ ?, ಅದೆಲ್ಲಿ ಹೊರಗೆ ಬರುತ್ತದೆ, ಇತ್ಯಾದಿಗಳನ್ನು ಹೇಳುವವರಿಗೆ ಈ ಪ್ರಕರಣ ಕೆನ್ನೆಗೆ ಹೊಡೆದಂತಿದೆ. ಈ ಹತ್ಯೆಯಲ್ಲಾದ ಪರಿಣಾಮಗಳಿಗಿಂತಲೂ ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಇಲ್ಲಿ ಮಹತ್ವದ್ದಾಗಿದೆ ಎಂಬುದನ್ನು ಗಮನಿಸಬೇಕು.
೫. ಅನೇಕ ಪ್ರಶ್ನೆಗಳಿಗೆ ಉತ್ತರವಿಲ್ಲ !
ಈ ಸಂಪೂರ್ಣ ಪ್ರಕರಣದಿಂದ ಮುಂದಿನ ಪ್ರಶ್ನೆಗಳು ಉದ್ಭವಿಸುತ್ತದೆ –
೫ ಅ. ಆಫ್ತಾಬ್‌ನು ನಿರಂತರ ಥಳಿಸಿದರೂ (ಶ್ರದ್ಧಾಳ ತಂದೆ ದಾಖಲಿಸಿದ ಪ್ರಥಮ ವರ್ತಮಾನ ವರದಿಗನುಸಾರ (ಎಫ್.ಐ.ಆರ್)) ಶ್ರದ್ಧಾ ತನ್ನ ತಾಯಿ-ತಂದೆಯರ ಬಳಿ ಹೋಗದೇ, ಮನೆಗೆ ಹಿಂದಿರುಗದೇ ಆ ಕೊಲೆಗಡುಕನೊಂದಿಗೆ ವಾಸಿಸಲು ಏಕೆ ಬಯಸಿರಬಹುದು ?
೫ ಆ. ಶ್ರದ್ಧಾ ಆಫ್ತಾಬ್ ಪೂನಾವಾಲಾನಲ್ಲಿ ಅಂತಹದ್ದೇನು ನೋಡಿರಬಹುದು, ಇದರಿಂದಾಗಿ ಅವಳಿಗೆ ತನ್ನ ಕುಟುಂಬ, ಸ್ನೇಹಿತರು ಮತ್ತು ಒಂದು ‘ಸುರಕ್ಷಿತ ಜೀವನವೂ ಬೇಡವಾಗಿರಬಹುದು ? ಅವಳು ಆ ೨ ವರ್ಷಗಳಿಂದ ಪರಿಚಯವಿರುವ ಆಫ್ತಾಬ್‌ನೊಂದಿಗೆ ದೆಹಲಿಯ ಮೆಹರೌಲಿ ಈ ಅತಿ ಅಪರಿಚಿತ ಸ್ಥಳಕ್ಕೆ ಬಂದಿರಲು ಏಕೆ ಒಪ್ಪಿಕೊಂಡಿರಬಹುದು ?
೫ ಇ. ಅವಳಿಗೆ ತನ್ನ ಕುಟುಂಬದ ಬಗ್ಗೆ ವಿಶ್ವಾಸ ಅನಿಸಲಿಲ್ಲವೇ ?
ಅವಳಿಗೆ ಕುಟುಂಬ ಸುರಕ್ಷಿತವೆನಿಸದೇ ಆ ಮನುಷ್ಯನೊಂದಿಗೆ (ಆಫ್ತಾಬ್‌ನ ಜೊತೆಗೆ) ತಾನು ಸುರಕ್ಷಿತವೆಂದು ಅವಳಿಗೆ ಹೇಗೆ ಅನಿಸಿರಬಹುದು ? ಯಾವ ಶೀತಕಪಾಟಿನಿಂದ (ಫ್ರಿಡ್ಜ್ ನಿಂದ) ನೀರು ಮತ್ತು ಹಾಲು ತೆಗೆದು ಅವನು ಚಹಾ ತಯಾರಿಸುತ್ತಿದ್ದನೋ, ಅದೇ ಶೀತಕಪಾಟಿನಲ್ಲಿ ಅವಳ ಶರೀರದ ತುಂಡುಗಳನ್ನು ಇಟ್ಟಿದ್ದನು. ಎಷ್ಟೊಂದು ಭಯಂಕರವಾಗಿದೆ ಇದು ! ಅವಳಿಗೆ ಈ ಮನುಷ್ಯ ತನ್ನ ಜೀವಕ್ಕೆ ಅಪಾಯಕಾರಿಯಾಗಿದ್ದಾನೆ ಎಂದು ಸ್ವಲ್ಪವೂ ಕಲ್ಪನೆ ಬಂದಿರಲಿಕ್ಕಿಲ್ಲವೇ ?
೫ ಈ. ನಮ್ಮ ಹುಡುಗಿಯರು ಹುಚ್ಚರಾಗಿ ತಮ್ಮನ್ನು ಮತಾಂತರ ಗೊಳಿಸುವುದರಿಂದ ಹಿಡಿದು ತಮ್ಮ ಪ್ರಾಣವನ್ನೂ ಬಲಿಕೊಡಲು ಧೈರ್ಯವನ್ನು ತೋರಿಸುತ್ತಾರೆ ? ಮುಸಲ್ಮಾನ ಹುಡುಗರ ಬಗ್ಗೆ ಅಂತಹ ಏನು ಆಕರ್ಷಣೆ ಇರಬಹುದು?
ಪ್ರಶ್ನೆಗಳ ಪಟ್ಟಿ ದೊಡ್ಡದಿದೆ ಮತ್ತು ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಈ ವಿಷಯದ ಬಗ್ಗೆ ಮೊದಲಿನಿಂದಲೇ ಮನೆಮನೆಗಳಲ್ಲಿ ಯಾವ ರೀತಿಯ ಕಾಳಜಿ ವಹಿಸುವುದು ಆವಶ್ಯಕವಾಗಿದೆ ? ಎಂಬುದನ್ನು ನೋಡೋಣ.
೬. ಶ್ರದ್ಧಾ ವಾಲಕರ ಹತ್ಯೆಯಂತಹ ಘಟನೆಗಳನ್ನು ತಡೆಗಟ್ಟಲು ಮುಂದಿನ ಉಪಾಯಯೋಜನೆ ಆವಶ್ಯಕ !
ಪೂರ್ಣ ವಿಚಾರ ಮಾಡಿ ಕೆಲವು ಅತಿ ಮಹತ್ವದ ಅಂಶಗಳನ್ನು ಇಲ್ಲಿ ಮಂಡಿಸುವುದು ಆವಶ್ಯಕವಾಗಿದೆ.
೬ ಅ. ತಾಯಿ-ತಂದೆ ಮತ್ತು ಮಕ್ಕಳ ನಡುವೆ ಮನಮುಕ್ತ ಸಂವಾದವಿರಬೇಕು ! : ಪ್ರತಿಯೊಂದು ಮನೆಯಲ್ಲಿ ಸಂವಾದ ನಡೆಯುವುದು ಅತ್ಯಾವಶ್ಯಕವಾಗಿದೆ. ತಾಯಿ-ತಂದೆ ಮತ್ತು ಮಕ್ಕಳ ನಡುವೆ ಮನಮುಕ್ತವಾಗಿ ಮಾತುಕತೆ ನಡೆಯಬೇಕು. ತಮ್ಮ ಮನೆ ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಗೆ ಎಲ್ಲಕ್ಕಿಂತ ಸುರಕ್ಷಿತ ಸ್ಥಳವಾಗಿರುತ್ತದೆ. ‘ನಾವು ತಪ್ಪು ನಿರ್ಣಯ ತೆಗೆದುಕೊಂಡರೂ ಮನೆಯಲ್ಲಿನ ಕುಟುಂಬದವರು ನಮ್ಮನ್ನು ಅದರಿಂದ ಹೊರಗೆ ತೆಗೆಯಲು ಖಂಡಿತವಾಗಿಯೂ ಸಹಾಯ ಮಾಡುತ್ತಾರೆ, ಪರ್ಯಾಯವಾಗಿ ಅವರೇ ನಮ್ಮನ್ನು ಇದರಿಂದ ಹೊರ ತೆಗೆಯುವರು, ಎಂಬ ವಿಶ್ವಾಸ ಮಕ್ಕಳಲ್ಲಿರುವುದು ಆವಶ್ಯಕವಾಗಿದೆ. – ನಿಹಾರಿಕಾ ಪೋಳ-ಸರ್ವಟೆ
೬ ಆ. ಶ್ರದ್ಧಾ ವಾಲಕರಳ ಹತ್ಯೆಯಂತಹ ಘಟನೆಗಳನ್ನು ಮತ್ತು ಅದರಲ್ಲಿನ ಸತ್ಯವನ್ನು, ಯೋಗ್ಯ ವಯಸ್ಸಿನ ಹುಡುಗಿಯರಿಗೆ ಹೇಳುವುದು ಆವಶ್ಯಕ ! : ನಾವು ನಮ್ಮ ಮಕ್ಕಳಿಗೆ ಎಷ್ಟೇ ‘ಸರ್ವಧರ್ಮಸಮಭಾವ ಅಥವಾ ‘ಮಜಹಬ್ ನಹಿ ಸಿಖಾತಾ ಆಪಸ ಮೆ ಬೈರ ರಖನಾ, ಇದನ್ನು ಕಲಿಸಿದರೂ, ಅದರಲ್ಲಿನ ಮೋಸ, ಹಾಗೆಯೇ ಶ್ರದ್ಧಾ ವಾಲಕರಳ ಹತ್ಯೆಯಂತಹ ಘಟನೆಗಳು, ಅದರಲ್ಲಿನ ಸತ್ಯ ಮುಂತಾದ ಎಲ್ಲವುಗಳನ್ನು ಯೋಗ್ಯ ವಯಸ್ಸಿನಲ್ಲಿ ಹುಡುಗಿಯರಿಗೆ ಹೇಳುವುದು ಆವಶ್ಯಕವಾಗಿದೆ. ಈ ಸಂವಾದ ವನ್ನು ತಾಯಿ-ತಂದೆಯರು ನಿಸ್ಸಂಕೋಚದಿಂದ ಮಾಡಲೇಬೇಕು. ನಮ್ಮಲ್ಲಿ ಇಂದಿಗೂ ಪ್ರೀತಿ, ಆಕರ್ಷಣೆ ಮುಂತಾದ ವಿಷಯಗಳ ಬಗ್ಗೆ ಮನೆಯಲ್ಲಿ ತಾಯಿ-ತಂದೆಯರೊಂದಿಗೆ ಮನಮುಕ್ತವಾಗಿ ಸಂವಾದ ನಡೆಯುವುದಿಲ್ಲ. ಅದು ಆಗಬೇಕು.
೬ ಇ. ಹುಡುಗಿಯರು ಇಂತಹ ಗಂಡಾಂತರವನ್ನು ಸ್ವೀಕರಿಸ ಬಾರದು ! : ಹುಡುಗಿಯರು ತಾವಾಗಿಯೇ ಅತ್ಯಂತ ಚುರುಕಾಗಿ ಈ ಎಲ್ಲ ಘಟನೆಗಳ ಬಗ್ಗೆ ವಿಚಾರ ಮಾಡಬೇಕು. ಜಗತ್ತಿನಲ್ಲಿ ಯಾರಾದರೊಬ್ಬ ಯುವಕ ಲವ್ ಜಿಹಾದ್ ಹೆಸರಿನಲ್ಲಿ ಪ್ರೀತಿಸದೇ, ನಿಜವಾಗಿ ಪ್ರೀತಿಸುತ್ತಿದ್ದರೂ, ಅವರ ‘ಧರ್ಮವು ಅತ್ಯಂತ ಕಠೋರ ಧರ್ಮವಾಗಿದೆ ಮತ್ತು ಇಂತಹ ಪ್ರೇಮವನ್ನು ಸ್ವೀಕರಿಸುವುದೆಂದರೆ ಜೀವನದಲ್ಲಿ ಎಲ್ಲಕ್ಕಿಂತ ದೊಡ್ಡ ಗಂಡಾಂತರವನ್ನು ಎಳೆದುಕೊಂಡಂತಾಗಿದೆ, ಇದನ್ನು ಎಂದಿಗೂ ಸ್ವೀಕರಿಸಬಾರದು. ‘ಇದರಿಂದ ನಾನು ನನ್ನ ತಾಯಿ-ತಂದೆಯರಿಂದ ದೂರ ಹೋಗುವೆನು, ಎಂಬ ಅರಿವು ಹುಡುಗಿಯಲ್ಲಿರುವುದು ಆವಶ್ಯಕ.
೬ ಈ. ‘ಲವ್ ಜಿಹಾದ್ನ ಬಗ್ಗೆ ಹುಡುಗಿಯರಿಗೆ ಯೋಗ್ಯ ವಯಸ್ಸಿನಲ್ಲಿ ಯೋಗ್ಯ ಮಾಹಿತಿಯನ್ನು ತಿಳಿಸಿ ಹೇಳಿರಿ ! : ‘ಲವ್ ಜಿಹಾದ್ ಬಗ್ಗೆ ಹುಡುಗಿಯರಿಗೆ ಯೋಗ್ಯ ವಯಸ್ಸಿನಲ್ಲಿ ಯೋಗ್ಯ ಮಾಹಿತಿಯನ್ನು ತಲುಪಿಸಬೇಕು.ಹುಡುಗಿಯರನ್ನು ವಶಪಡಿಸಿಕೊಳ್ಳುವ ಇತರ ಧರ್ಮದ ಹುಡುಗರ ಪದ್ಧತಿ, ಅದರ ದುಷ್ಪರಿಣಾಮಗಳು ಮತ್ತು ‘ಮುಂದೆ ನಾವು ಯಾವುದಾದರೊಂದು ಸೂಟಕೇಸ್‌ನಲ್ಲಿ ಅಥವಾ ಶೀತಕಪಾಟಿನಲ್ಲಿ ಭೀಬತ್ಸ ಅವಸ್ಥೆಯಲ್ಲಿ ಸಿಗಬಹುದು, ಇದರ ಬಗ್ಗೆ ಮೈಜುಮ್ಮೆನಿಸುವಂತಹ ಭಯ ಹುಡುಗಿಯರ ಮನಸ್ಸಿನಲ್ಲಿ ಇರಬೇಕು, ಇದರಿಂದ ಅವರು ಈ ದಾರಿಗೆ ಹೋಗುವುದೇ ಇಲ್ಲ ಮತ್ತು ಆ ಪರಿಸ್ಥಿತಿಯನ್ನು ಎದುರಿಸುವುದೇ ಬೇಡವೆಂದು ಈ ಎಲ್ಲವುಗಳಿಂದ ದೂರವಿರುವರು.
೭. ಲವ್ ಜಿಹಾದ್‌ಗೆ ಬಲಿಯಾದ ಅನೇಕ ‘ಶ್ರದ್ಧಾಗಳ ದೊಡ್ಡ ಪಟ್ಟಿಯೇ ಇದೆ !
ಶ್ರದ್ಧಾ ಈ ಜಾಲದಲ್ಲಿ ಸಿಲುಕಿದ ಒಬ್ಬಳೇ ಹುಡುಗಿ ಆಗಿಲ್ಲ. ನಿಕಿತಾ ತೋಮರ್ ಇವಳು ತೌಸಿಫ್ ಎಂಬ ಹೆಸರಿನ ಯುವಕನನ್ನು ಪ್ರೀತಿಸಿದಳು ಮತ್ತು ತನ್ನ ಪ್ರಾಣವನ್ನು ಕಳೆದುಕೊಂಡಳು, ರೀತು ಇವಳು ಲಾಯಕ ಖಾನನನ್ನು ಪ್ರೀತಿಸಿದಳು, ಪ್ರಿಯಾ ಇವಳು ಶಮಶೆದ್‌ನನ್ನು ಪ್ರೀತಿಸಿದಳು, ಮಾನಸಿ ದೀಕ್ಷಿತ ಇವಳು ಮುಜಮ್ಮಿಲ್‌ನನ್ನು ಪ್ರೀತಿಸಿದಳು, ಶಿವಾನಿ ಇವಳು ಆರಿಫ್ ಖಾನ್‌ನನ್ನು ಮತ್ತು ಖುಶಿ ಪರಿಹಾರ ಇವಳು ಅಶರಫ್ ನನ್ನು ಪ್ರೀತಿಸಿದಳು, ಸೀಮಾ ಸೋನಿ ಇವಳು ನದಿಮ್‌ನನ್ನು ಪ್ರೀತಿಸಿದಳು, ತನಿಷ್ಕಾ ಇವಳು ಮಹಮ್ಮದ ಸಾಹಿಲ್‌ನನ್ನು ಮತ್ತು ಅಂತಿಮಾ ಇವಳು ರಿಝ್ವಾನ್‌ನನ್ನು ಪ್ರೀತಿಸಿದಳು, ಇವರಲ್ಲಿನ ಕೆಲವರು ಅವರು ವಾಸಿಸುವ ಮನೆಗಳಲ್ಲಿ ಮೃತಾವಸ್ಥೆಯಲ್ಲಿ ಸಿಕ್ಕರು, ಇನ್ನೂ ಕೆಲವರು ಸೂಟಕೇಸ್‌ನಲ್ಲಿ ಹೀಗೆ ಅನೇಕರು ಪ್ರಾಣವನ್ನು ಕಳೆದುಕೊಂಡರು ಮತ್ತು ಇನ್ನು ಕೆಲವರು ಆತ್ಮಹತ್ಯೆಯನ್ನು ಮಾಡಿಕೊಂಡರು. ಹೋದ ಜೀವವಂತೂ ಹೋಯಿತು ಮತ್ತು ಕೆಲವರು, ‘ಲವ್ ಜಿಹಾದ್ ಇದು ಒಂದು ಒಳಸಂಚಿನ ಸಿದ್ಧಾಂತ (ಕಾನ್ಸ್‌ಪಿರನ್ಸಿ ಥಿಯರಿ) ವಾಗಿದೆ, ಎಂದು ಹೇಳಬಹುದು, ಆದುದರಿಂದ ಭವಿಷ್ಯದ ಬಗ್ಗೆ ಚಿಂತಿಸದಿರಲು ಸಾಧ್ಯವಿಲ್ಲ.
೮. ‘ಬಾಲಿವುಡ್ ಮತ್ತು ಸಾಮಾಜಿಕ ಮಾಧ್ಯಮಗಳು ಅಪಾಯಕಾರಿ ಆಗಿವೆ ಎಂಬುದನ್ನು ಹಿಂದೂ ಹುಡುಗಿಯರಿಗೆ ಮೇಲಿಂದ ಮೇಲೆ ಹೇಳಬೇಕು !
ಈ ಎಲ್ಲವುಗಳಲ್ಲಿ ಬಾಲಿವುಡ್ ಮತ್ತು ಸಾಮಾಜಿಕ ಮಾಧ್ಯಮಗಳು ಅತ್ಯಂತ ಹಾನಿಕರವಾಗಿವೆ. ನಟ ಶಾಹರೂಖ್ ಖಾನನು ಯಾವ ರೀತಿ ತನ್ನ ಹೆಂಡತಿ ಗೌರಿಯನ್ನು ಗೌರವಿಸುತ್ತಾನೆ ಮತ್ತು ಅವನು ಅವಳ ಹೆಸರನ್ನೂ ಬದಲಾಯಿಸಿಲ್ಲ, ಅವಳನ್ನು ಮತಾಂತರಿಸಲೂ ಇಲ್ಲ ಇತ್ಯಾದಿಗಳನ್ನು ವರ್ಷಾನುವರ್ಷಗಳಿಂದ ಮಾಧ್ಯಮಗಳು ನಮ್ಮ ಮನಸ್ಸಿಗೆ ಬಿಂಬಿಸುತ್ತಿವೆ, ಆದರೆ ನಟ ಆಮೀರ್ ಖಾನ್ ಇವನು ಇಬ್ಬರು ಹಿಂದೂ ಹೆಂಡತಿಯರನ್ನು ಮಾಡಿಕೊಂಡು ಇಬ್ಬರನ್ನೂ ಬಿಟ್ಟಿದ್ದಾನೆ, ಈ ಬಗ್ಗೆ ಯಾರೂ ಏನೂ ಮಾತನಾಡುವುದಿಲ್ಲ. ಇದರ ಜೊತೆಗೆ ನಟ ಸೈಫ್ ಅಲಿ ಖಾನ್ ಇವನ ಬಗ್ಗೆಯೂ ಹೀಗೇ ಆಗಿದೆ. ಒಳ್ಳೆಯದು, ಅವರ ವೈಯಕ್ತಿಕ ಜೀವನವನ್ನು ಬದಿಗಿಡೋಣ. ಆದರೆ ‘ಪಿಕೆಯಂತಹ ಚಲನಚಿತ್ರಗಳಲ್ಲಿ ‘ಸರಫರಾಜ್ನ ಘನತೆಯನ್ನು ರೂಪಿಸಲಾಗುತ್ತದೆ ಮತ್ತು ನಮ್ಮ ಮುಗ್ಧ (ಸರಳ ಸ್ವಭಾವದ) ಹಿಂದೂ ಹುಡುಗಿಯರ ಮನಸ್ಸಿನಲ್ಲಿ ‘ಮೇರಾ ಅಬ್ದುಲ್ ವೈಸಾ ನಹಿ ಹೈ, (ನನ್ನ ಅಬ್ದುಲ್ ಹಾಗಿಲ್ಲ) ಎಂಬುದು ದೃಢವಾಗುತ್ತದೆ ಮತ್ತು ಮುಂದೆ ಅವರ ಸ್ಥಿತಿ ಶ್ರದ್ಧಾಳಂತಾಗುತ್ತದೆ. ಆದುದರಿಂದ ‘ಬಾಲಿವುಡ್ ಮತ್ತು ಸಾಮಾಜಿಕ ಮಾಧ್ಯಮಗಳು ಆಭಾಸದ ಜಗತ್ತಾಗಿವೆ, ಎಂಬುದು ಅಸತ್ಯವಲ್ಲ. ಅವು ವಿಶಿಷ್ಟ ಉದ್ದೇಶದಿಂದ ಕಾರ್ಯವನ್ನು ಮಾಡುವ ‘ಸ್ಲೊ ಪಾಯಸನಿಂಗ್ (ನಿಧಾನವಾಗಿ ನೀಡಲಾಗುವ ವಿಷ) ಆಗಿವೆ, ಇದನ್ನು ಹಿಂದೂ ಹುಡುಗಿಯರಿಗೆ ಮೇಲಿಂದ ಮೇಲೆ ಹೇಳುವುದು ಆವಶ್ಯಕವಾಗಿದೆ.
೯. ‘ಇತರ ಶ್ರದ್ಧಾಗಳ ಹತ್ಯೆಯಾಗಬಾರದೆಂದು ಹಿಂದೂ ಹುಡುಗಿಯರನ್ನು ಸಕಾಲದಲ್ಲಿ ಎಚ್ಚರಿಸಿರಿ !
ಇಂತಹ ಅನೇಕ ಅಂಶಗಳಿವೆ, ಅವುಗಳ ಕುರಿತು ಚರ್ಚೆ ಯಾಗಬೇಕು ಮತ್ತು ಮನೆಮನೆಗಳಲ್ಲಿ ಸಂವಾದ ನಡೆಯಬೇಕು. ಹೀಗಾದರೆ ಮತ್ತು ಹೀಗಾದರೆ ಮಾತ್ರ ಹಿಂದೂ ಹುಡುಗಿಯರ ರಕ್ಷಣೆ ಸಾಧ್ಯವಿದೆ ಮತ್ತು ಆಗಲೇ ನಾವು ಇನ್ನು ಮುಂದೆ ಅನೇಕ ‘ಶ್ರದ್ಧಾಳನ್ನು ಕಾಪಾಡಬಹುದು, ಇಲ್ಲದಿದ್ದರೆ ಇಂದು ಒಬ್ಬ ಶ್ರದ್ಧಾಳ ತುಂಡುಗಳು ಶೀತಕಪಾಟಿನಲ್ಲಿ ಸಿಕ್ಕವು, ನಾಳೆ ಇನ್ನೊಬ್ಬ ‘ಶ್ರದ್ಧಾ ಇನ್ನೊಂದೆಡೆ ಸಿಗುವಳು ಮತ್ತು ನಾವು ಇದರ ಬಗ್ಗೆ ಏನೂ ಮಾಡಲಾರೆವು. ಇಂತಹ ದುರಂತ ಆಗಬಾರದೆಂದು ಇಂದು ಮತ್ತು ಈಗಲೇ ನಮ್ಮ ಹಿಂದೂ ಹುಡುಗಿಯರನ್ನು ಎಚ್ಚರಿಸುವುದು ಆವಶ್ಯಕವಾಗಿದೆ !
– ನಿಹಾರಿಕಾ ಪೋಳ-ಸರ್ವಟೆ
(ಆಧಾರ : ದೈನಿಕ ‘ಮುಂಬಯಿ ತರುಣ ಭಾರತದ ವಾರ್ತಾಜಾಲತಾಣ, ೧೯.೧೧.೨೦೨೨)