‘ಭಾರತದ ಸಂಸತ್ತಿನಲ್ಲಿ ವಿರೋಧಿ ಪಕ್ಷದ ನಾಯಕರ ಮೈಕ್ ಬಂದ್ ಮಾಡಲಾಗುತ್ತದೆ !’ (ಅಂತೆ)

ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಇವರು ಬ್ರಿಟಿಷ ಸಂಸತ್ತಿನಲ್ಲಿ ಭಾರತದ ವಿರುದ್ಧ ವಿಷಕಾರಿದರು !

ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಇವರು ಬ್ರಿಟಿಷ ಸಂಸತ್ತಿನಲ್ಲಿ ಮಾತನಾಡುತ್ತಿರುವಾಗ

ಲಂಡನ್ – ಭಾರತದ ಸಂಸತ್ತಿನಲ್ಲಿ ವಿರೋಧಿ ಪಕ್ಷದ ನಾಯಕರ ಮೈಕ್ ಬಂದ್ ಮಾಡಲಾಗುತ್ತದೆ, ಅವರಿಗೆ ಮಾತನಾಡಲು ಬಿಡುವುದಿಲ್ಲ, ಈ ರೀತಿಯಲ್ಲಿ ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿಯವರು ಭಾರತದ ವಿರುದ್ಧ ವಿಷಕಾರಿದ್ದಾರೆ. ಅವರು ಬ್ರಿಟಿಷ ಸಂಸತ್ತಿನಲ್ಲಿ ‘ಗ್ರಾಂಡ್ ಕಮೀಟಿ ರೂಮ್’ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅನೇಕ ಬ್ರಿಟಿಷರ ಸಂಸದರು, ಪ್ರಾಧ್ಯಾಪಕರು, ಪತ್ರಕರ್ತರು ಮತ್ತು ಸಾಮಾನ್ಯ ನಾಗರೀಕರು ಉಪಸ್ಥಿತರಿದ್ದರು. ಬ್ರಿಟನಿನಲ್ಲಿ ವಿರೋಧಿ ಕಾರ್ಮಿಕ ಪಕ್ಷದ ಭಾರತೀಯ ಮೂಲದ ಸಂಸದ ವೀರೇಂದ್ರ ಶರ್ಮ ಇವರು ಈ ಕಾರ್ಯಕ್ರಮದ ಆಯೋಜನೆ ಮಾಡಿದ್ದರು.

ರಾಹುಲ ಗಾಂಧಿ ಮಾತು ಮುಂದುವರಿಸಿ, ನೋಟ್ ಬಂದಿ ಇದು ಕೂಡ ಭಾರತದಲ್ಲಿನ ಒಂದು ವಿನಾಷಕಾರಿ ಆರ್ಥಿಕ ನಿರ್ಣಯವಾಗಿತ್ತು; ಆದರೆ ನಮಗೆ ಅದರ ಬಗ್ಗೆ ಚರ್ಚಿಸಲು ಅನುಮತಿ ಇರಲಿಲ್ಲ. ನಮಗೆ ‘ವಸ್ತು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಈ ಕಾನೂನಿನ ಬಗ್ಗೆ ಕೂಡ ಚರ್ಚಿಸಲು ಅನುಮತಿ ಇರಲಿಲ್ಲ. ಇಷ್ಟೇ ಏಕೆ, ಚೀನಾದ ಸೈನ್ಯ ಭಾರತದ ಗಡಿಯಲ್ಲಿ ಪ್ರವೇಶ ಮಾಡಿರುವ ಅಂಶಗಳ ಬಗ್ಗೆ ನಾವು ಮಾತನಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ನಮಗೆ ಕಸಿವಿಸಿ ಆಗುತ್ತದೆ. ಭಾರತದ ಪ್ರಜಾಪ್ರಭುತ್ವ ಇದು ಅಮೆರಿಕಾ ಮತ್ತು ಯುರೋಪಕ್ಕಿಂತ ಮೂರು ಪಟ್ಟು ಇರುವುದು. ಆದ್ದರಿಂದ ಈ ಪ್ರಜಾಪ್ರಭುತ್ವ ಕುಸಿದು ಬಿದ್ದರೆ ಜಗತ್ತಿನಲ್ಲಿನ ಪ್ರಜಾಪ್ರಭುತ್ವಕ್ಕೆ ದೊಡ್ಡ ಆಘಾತ ಆಗುವುದು. ರಾಹುಲ್ ಗಾಂಧಿ ಇವರು ಇತರ ಸ್ಥಳಗಳಲ್ಲಿ ಭಾಷಣ ಮಾಡಿದಾಗ ಭಾರತದಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ಕೂಡ ಅದು ‘ಫೇಸಿಸ್ಟ್ ‘ಇರುವ ಆರೋಪ ಮಾಡಿದರು.

ಸಂಪಾದಕೀಯ ನಿಲುವು

ವಿಶ್ವದಲ್ಲಿ ಭಾರತದ ಪ್ರತಿಮೆ ಕಲಂಕಿತಗೊಳಿಸುವ ಇಂತಹ ಜನರಲ್ಲಿ ‘ರಾಷ್ಟ್ರಭಕ್ತಿ ಎಷ್ಟು ಇದೆ ?’ ಇದು ಸ್ಪಷ್ಟವಾಗುತ್ತದೆ ! ಇಂತಹ ಮಾನಸಿಕತೆ ಇರುವ ಜನರನ್ನು ತುಂಬಿರುವ ಕಾಂಗ್ರೆಸ್ ಪಕ್ಷ ಭಾರತದ ಮೇಲೆ ಎಲ್ಲಕ್ಕಿಂತ ಹೆಚ್ಚಿನ ಸಮಯ ಆಡಳಿತ ನಡೆಸಿರುವುದು ಭಾರತೀಯರ ದುರ್ಭಾಗ್ಯವೇ ಸರಿ !