ಇಸ್ಲಾಮಾಬಾದ (ಪಾಕಿಸ್ತಾನ) – ಚೀನಾ ಪಾಕಿಸ್ತಾನಕ್ಕೆ ಮತ್ತೊಮ್ಮೆ ಸಾಲ ನೀಡಲಿದೆಯೆಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ ದಾರ್ ಈ ಮಾಹಿತಿಯನ್ನು ನೀಡಿದ್ದಾರೆ. ದಾರ್ ತಮ್ಮ ಮಾತನ್ನು ಮುಂದುವರಿಸುತ್ತಾ, ಇಂಡಸ್ಟ್ರಿಯಲ್ ಅಂಡ್ ಕಮರ್ಶಿಯಲ್ ಬ್ಯಾಂಕ ಆಫ್ ಚೈನಾವು 4 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ನೀಡಲು ಒಪ್ಪಿದೆ. ಇದರಿಂದ ಪಾಕಿಸ್ತಾನದ ಕುಸಿಯುತ್ತಿರುವ ವಿದೇಶಿ ವಿನಿಮಯ ಸಂಗ್ರಹ ಪುನಃ ವೃದ್ಧಿಸಲು ಸಹಾಯವಾಗಲಿದೆ. ಈ ಹಣವನ್ನು 3 ವಾರಗಳಲ್ಲಿ ನೀಡಲಿದೆ. ನಾವು ಎಂದಿಗೂ ನಿರ್ಗತಿಕರಾಗಿರಲಿಲ್ಲ ಮತ್ತು ಎಂದಿಗೂ ಆಗುವುದಿಲ್ಲ. ವಿದೇಶಿ ವಿನಿಮಯ ಸಂಗ್ರಹ ‘ಸೆಂಟ್ರಲ್ ಬ್ಯಾಂಕ ಆಫ್ ಪಾಕಿಸ್ತಾನ’ದಲ್ಲಿ ಕೇವಲ 3 ವಾರಗಳ ಆಮದಿಗಾಗಿ ಬಾಕಿ ಉಳಿದಿದೆ. ಈ ಹಿಂದೆಯೂ ಚೀನಾ ನಮಗೆ ವಿದೇಶಿ ವಿನಿಮಯ ಸಂಗ್ರಹ ಹೆಚ್ಚಿಸಲು ಸಾಲವನ್ನು ನೀಡಿತ್ತು ಎಂದು ಹೇಳಿದ್ದಾರೆ.
Amid Pakistan economic crisis, China gives loan of $700mn to Pakistan, US expresses concern #pakistancrisis #unitedstate #china #ITVideo @PoojaShali pic.twitter.com/SmSJMkLpHs
— IndiaToday (@IndiaToday) February 25, 2023
ಸಂಪಾದಕೀಯ ನಿಲುವುಪಾಕಿಸ್ತಾನ ಈಗ ಇದೇ ರೀತಿ ಭಿಕ್ಷೆಯಿಂದ ಬದುಕುವ ದೇಶವೆಂದು ಕೆಲವು ತಿಂಗಳು ಗುರುತಿಸಲ್ಪಡಲಿದೆ ಮತ್ತು ಬಳಿಕ ಅದರ ಅಸ್ತಿತ್ವ ಜಗತ್ತಿನ ನಕಾಶೆಯಿಂದ ಅಳಿಸಿ ಹೋಗಲಿದೆಯೆಂದು ಹೇಳಲು ಈಗ ಯಾವುದೇ ಜ್ಯೋತಿಷಿಗಳ ಆವಶ್ಯಕತೆಯಿಲ್ಲ ! |