ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖನೌ ಖಂಡ ಪೀಠದ ನ್ಯಾಯಮೂರ್ತಿ ಶಮೀಮ ಅಹಮದ್ ಇವರ ಅಪೇಕ್ಷೆ !
ಲಕ್ಷ್ಮಣಪುರಿ (ಉತ್ತರಪ್ರದೇಶ) – ಗೋವು ಅತ್ಯಂತ ಪವಿತ್ರವಾಗಿದ್ದು ಗೋ ಹತ್ಯೆ ಮಾಡುವವರು ನರಕದಲ್ಲಿ ಕೊಳೆಯುತ್ತಾರೆ, ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖನೌ ಖಂಡ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಶಮೀಮ ಅಹಮದ್ ಇವರು ಗೋ ಹತ್ಯೆಗೆ ಸಂಬಂಧ ಪಟ್ಟ ಪ್ರಕರಣದ ವಿಚಾರಣೆ ನಡೆಸುವಾಗ ಮಹಮ್ಮದ್ ಅಬ್ದುಲ್ ಖಾಲಿಕ ಇವರ ಮನವಿ ತಿರಸ್ಕರಿಸಿದ್ದಾರೆ. ಅವನಿಗೆ ಗೋಮಾಂಸ ಸಹಿತ ಬಂಧಿಸಲಾಗಿತ್ತು. ನ್ಯಾಯಮೂರ್ತಿ ಶಮೀಮ ಅಹಮದ್ ಇವರು, ಕೇಂದ್ರ ಸರಕಾರ ದೇಶದಲ್ಲಿ ಗೋ ಹತ್ಯೆ ತಡೆಯುವುದಕ್ಕಾಗಿ ಯೋಗ್ಯ ನಿರ್ಣಯ ತೆಗೆದು ಕೊಂಡು ಗೋವನ್ನು ಸುರಕ್ಷಿತ ರಾಷ್ಟ್ರೀಯ ಪಶು ಎಂದು ಘೋಷಣೆ ಮಾಡುವುದು ಎಂದು ನಂಬಿಕೆ ಇದೆ ಎಂದು ಹೇಳಿದರು.
Allahabad High Court: ಗೋ ಹತ್ಯೆ ಮಾಡುವವರು ನರಕದಲ್ಲಿ ಕೊಳೆಯುತ್ತಾರೆ!: ಅಲಹಾಬಾದ್ ಹೈಕೋರ್ಟ್
#cowslaughterban https://t.co/EiI0Cre90J— vijaykarnataka (@Vijaykarnataka) March 4, 2023
ನ್ಯಾಯಮೂರ್ತಿ ಶಮೀಮ ಅಹಮದ್ ಇವರು ವಿಚಾರಣೆಯ ಸಮಯದಲ್ಲಿ ಮಂಡಿಸಿರುವ ಅಂಶಗಳು
೧. ಗೋವುಗಳಿಗೆ ಹಿಂದೂ ಧರ್ಮದಲ್ಲಿ ಎಲ್ಲಾ ಪ್ರಾಣಿಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಪವಿತ್ರ ಎಂದು ನಂಬುತ್ತಾರೆ. ಅದನ್ನು ಕಾಮದೇನು ಅಥವಾ ದಿವ್ಯ ಗೋವು ಹಾಗೂ ‘ಎಲ್ಲಾ ಇಚ್ಛೆಗಳನ್ನು ಪೂರೈಸುವವಳು’, ಎಂದು ಹೇಳುತ್ತಾರೆ.
೨. ಪುರಾಣಗಳ ಪ್ರಕಾರ, ಗೋವುಗಳ ದಾನ ಅಥವಾ ಉಡುಗೋರೆ ನೀಡುವುದಕ್ಕಿಂತ ಹೆಚ್ಚಿನ ಧಾರ್ಮಿಕತೆಯಿಲ್ಲ. ಭಗವಾನ ಶ್ರೀ ರಾಮನ ಸಮಯದಲ್ಲಿ ಕೂಡ ಗೋವುಗಳನ್ನು ಉಡುಗೊರೆಯಾಗಿ ನೀಡಿದ್ದರು. ಮಹಾಭಾರತ ಭೀಷ್ಮ ಪಿತಾಮಹ ಇವರ ಹೇಳಿಕೆಯ ಪ್ರಕಾರ, ಗೋವು ಜೀವನವಿಡಿ ಮನುಷ್ಯನಿಗೆ ಹಾಲು ನೀಡುತ್ತದೆ. ಅದು ಒಂದು ಮಾತೆಯ ಹಾಗೆ ಕಾರ್ಯ ಮಾಡುತ್ತದೆ. ಆದ್ದರಿಂದ ಆಕೆ ಜಗತ್ತಿನ ಮಾತೇ ಆಗಿದ್ದಾಳೆ ಎಂದು ಹೇಳಿದ್ದರು.
೩. ಗೋವನ್ನು ದೇವತೆಗಳಿಗೆ ಹೋಲಿಸುತ್ತಾರೆ, ವಿಶೇಷವಾಗಿ ಭಗವಾನ ಶಿವ, ಭಗವಾನ ಇಂದ್ರ, ಭಗವಾನ ಕೃಷ್ಣ, ದೇವಿ ಇವರಗಳ ಜೊತೆಗೆ ಜೋಡಿಸಿದ್ದಾರೆ.
೪. ಗೋವು ವೈದಿಕ ಕಾಲದಿಂದಲೂ ಮನುಸ್ಮೃತಿ, ಮಹಾಭಾರತ, ರಾಮಾಯಣ ಮುಂತಾದರಲ್ಲಿ ಧಾರ್ಮಿಕ ಮತ್ತು ಆರ್ಥಿಕ ಮಹತ್ವ ನೀಡಲಾಗಿದೆ. ಗೋವಿನಿಂದ ದೊರೆಯುವ ಪದಾರ್ಥಗಳಿಂದ ಪಂಚಗವ್ಯ ತಯಾರಿಸುತ್ತಾರೆ.
೫. ಯಾರು ಗೋವುಗಳ ಹತ್ಯೆ ಮಾಡುತ್ತಾನೆ ಅಥವಾ ಬೇರೆಯವರಿಗೆ ಹತ್ಯೆ ಮಾಡಲು ಅನುಮತಿ ನೀಡುತ್ತಾನೆ, ಅವನು ಅವನ ಶರೀರದಲ್ಲಿನ ಕೂದಲು ಇರುವವರೆಗೂ ನರಕದಲ್ಲಿ ಕೊಳೆಯುತ್ತಾನೆ. ಗೋವುಗಳ ಹಾಗೆಯೇ ಎತ್ತನ್ನು ಕೂಡ ಭಗವಾನ್ ಶಿವನ ವಾಹನವೆಂದು ನೋಡುತ್ತಾರೆ. ಎತ್ತು ನರ ಪಶುಗಳಲ್ಲಿ ಗೌರವದ ಪ್ರತಿಕವಾಗಿದೆ.
೬. ನಾವು ಒಂದು ಜಾತ್ಯತೀತ ದೇಶದಲ್ಲಿ ವಾಸಿಸುತ್ತೇವೆ. ಇಲ್ಲಿ ಎಲ್ಲಾ ಧರ್ಮಕ್ಕೆ ಗೌರವ ನೀಡಬೇಕು. ಹಿಂದೂ ಧರ್ಮದ ಅಭಿಪ್ರಾಯದ ಪ್ರಕಾರ, ಗೋವು ದೈವಿ ಮತ್ತು ನೈಸರ್ಗಿಕ ಹಿತದ ಪ್ರತಿನಿಧಿ ಆಗಿದೆ. ಆದ್ದರಿಂದ ಆಕೆಯ ಪೂಜೆ ನಡೆಯಬೇಕು ಎಂದು ಹೇಳಿದರು.