ಪಾಕಿಸ್ತಾನದ ೨ ಭಾಗದಲ್ಲಿ ವಿಭಜಿಸುವ ಸಿದ್ಧತೆಯಲ್ಲಿ ‘ತೆಹರಿಕ-ಎ-ತಾಲಿಬಾನ್ ಪಾಕಿಸ್ತಾನ’ ಸಂಘಟನೆ ! – ಅಮೇರಿಕಾ

ಇಸ್ಲಾಮಾಬಾದ (ಪಾಕಿಸ್ತಾನ) – ‘ತೆಹರಿಕ-ಎ-ತಾಲಿಬಾನ್ ಪಾಕಿಸ್ತಾನ’ (ಟಿಟಿಪಿ) ಈ ತಾಲಿಬಾನಿ ಭಯೋತ್ಪಾದಕ ಸಂಘಟನೆ ಪಾಕಿಸ್ತಾನದ ೨ ಭಾಗವಾಗಿ ವಿಭಜಿಸುವ ಸಿದ್ಧತೆಯಲ್ಲಿದೆ, ಎಂದು ಅಮೆರಿಕ ಮಾಹಿತಿ ನೀಡಿದೆ.

೧. ಅಮೇರಿಕಾದ ವಿದೇಶಾಂಗ ಸಚಿವಾಲಯದ ವರದಿಯಲ್ಲಿ, ಖೈಬರ್ ಪಖ್ಟುನಖ್ವಾ ಪ್ರಾಂತ್ಯದಲ್ಲಿ ‘ತೆಹರಿಕ-ಎ-ತಾಲಿಬಾನ್ ಪಾಕಿಸ್ತಾನ’ ಅದರ ದಾಳಿಗಳು ಹೆಚ್ಚು ತೀವ್ರವಾಗಿದೆ. ಇದರ ಹಿಂದೆ ಅಲ್ಲಿಯ ಸರಕಾರ ಬದಲಾಯಿಸಿ ಶರಿಯತ್ ಜಾರಿಗೊಳಿಸುವ ಉದ್ದೇಶ ಇದೆ. ಈ ಸಂಘಟನೆ ತನ್ನ ಭಯೋತ್ಪಾದಕರಿಗೆ ಪ್ರಶಿಕ್ಷಣ ಮತ್ತು ನೇಮಕಕ್ಕಾಗಿ ಪಾಕಿಸ್ತಾನ ಅಫಘಾನಿಸ್ತಾನ್ ಗಡಿಯಲ್ಲಿ ಎರಡು ಬದಿಯ ಆದಿವಾಸಿ ಪ್ರದೇಶದ ಉಪಯೋಗ ಮಾಡುತ್ತಿದೆ. ಟಿಟಿಪಿ ವೈಚಾರಿಕ ಮಾರ್ಗದರ್ಶನವನ್ನು ಅಲ್ ಕಾಯ್ದಾದಿಂದ ಪಡೆಯುತ್ತಿದೆ. ಟಿಟಿಪಿ, ಬಲುಚಿಸ್ತಾನ್ ಲಿಬ್ರೇಶನ್ ಆರ್ಮಿ ಮತ್ತು ಇಸ್ಲಾಮಿಕ್ ಸ್ಟೇಟ್ ಖೂರಾಸಾನ್ ಪ್ರದೇಶಸಹಿತ ಇತರ ಭಯೋತ್ಪಾದಕ ಸಂಘಟನೆ ಅಪಘಾನಿಸ್ತಾನದ ಗಡಿಯಲ್ಲಿ ಆದಿವಾಸಿ ಪ್ರದೇಶದ ಲಾಭ ಪಡೆಯುತ್ತಿದೆ.

೨. ಅಮೇರಿಕಾದ ಈ ವರದಿಯಲ್ಲಿ ಪಾಕಿಸ್ತಾನವನ್ನು ಟೀಕಿಸಿದೆ. ಪಾಕಿಸ್ತಾನವು ತನ್ನ ಭೂಮಿಯ ಉಪಯೋಗಿಸಲು ಭಯೋತ್ಪಾದಕ ಸಂಘಟನೆಗೆ ನೀಡುವುದಿಲ್ಲ; ಎಂದು ಹೇಳಿತ್ತು; ಆದರೆ ಪಾಕಿಸ್ತಾನ ತಾನು ಹೇಳಿದಂತೆ ವರ್ತಿಸುವುದಿಲ್ಲ, ಎಂದು ಈ ವರದಿಯಲ್ಲಿ ಹೇಳಿದೆ.