೧೨ ಕ್ಕಿಂತಲೂ ಹೆಚ್ಚಿನ ಜಿಹಾದಿ ಭಯೋತ್ಪಾದಕ ಸಂಘಟನೆಯ ಮುಖ್ಯ ಕೇಂದ್ರ ಪಾಕಿಸ್ತಾನ !

ಅಮೇರಿಕಾದಲ್ಲಿನ ಭಾರತೀಯ ಮೂಲದ ನಾಯಕಿ ನಿಕ್ಕಿ ಹೆಲಿ ಇವರ ಸ್ಪಷ್ಟನೆ !

ವಾಷಿಂಗ್ಟನ್ (ಅಮೆರಿಕ) – ಪಾಕಿಸ್ತಾನದಲ್ಲಿ ಕನಿಷ್ಠಪಕ್ಷ ೧೨ ಕ್ಕಿಂತಲೂ ಹೆಚ್ಚಿನ ಜಿಹಾದಿ ಭಯೋತ್ಪಾದಕ ಸಂಘಟನೆಯ ಮುಖ್ಯ ಕೇಂದ್ರಗಳಿವೆ. ಆದ್ದರಿಂದ ಪಾಕಿಸ್ತಾನಕ್ಕೆ ಅಮೆರಿಕದಿಂದ ಯಾವುದೇ ಆರ್ಥಿಕ ಸಹಾಯ ನೀಡಬಾರದು, ಎಂದು ಅಮೇರಿಕಾದಲ್ಲಿನ ರಿಪಬ್ಲಿಕ್ ಪಕ್ಷದಿಂದ ರಾಷ್ಟ್ರಾಧ್ಯಕ್ಷ ಸ್ಥಾನದ ಅಭ್ಯರ್ಥಿ ನಿಕ್ಕಿ ಹೆಲಿ ಇವರು ಹೇಳಿಕೆ ನೀಡಿದ್ದಾರೆ. ಹೆಲಿ ಇವರು ಭಾರತೀಯ ಮೂಲದವರು ಆಗಿದ್ದಾರೆ. ಕೆಲವು ದಿನಗಳ ಹಿಂದೆ ಕೂಡ ಅವರು ರಾಷ್ಟ್ರಾಧ್ಯಕ್ಷವಾದರೆ ಅಮೆರಿಕಾದ ವಿರೋಧದಲ್ಲಿ ಕಾರ್ಯ ಮಾಡುವ ದೇಶಗಳಿಗೆ ಯಾವುದೇ ಸಹಾಯ ನೀಡುವುದಿಲ್ಲ ಎಂದು ಘೋಷಿಸಿದ್ದರು.