ಕೊರೋನಾ ವಿಷಾಣುವು ಚೀನಾದ ವುಹಾನಿನಲ್ಲಿರುವ ಪ್ರಯೋಗಶಾಲೆಯಲ್ಲಿ ಜನಿಸಿದೆ ! – ಕ್ರಿಸ್ಟೋಫರ ವ್ರೆಯ, ಸಂಚಾಲಕ, ಎಫ್‌.ಬಿ.ಆಯ್‌

ಎಫ್‌.ಬಿ.ಐ.ನ ಸಂಚಾಲಕರ ಹೇಳಿಕೆ

ಕ್ರಿಸ್ಟೋಫರ ವ್ರೆಯ

ವಾಶಿಂಗ್ಟನ (ಅಮೇರಿಕಾ) – ಕೊರೋನಾದ ಉತ್ಪತ್ತಿಯ ಬಗ್ಗೆ ನಾವು ಕಳೆದ ಕೆಲವು ವರ್ಷಗಳಿಂದ ಸಂಶೋಧನೆ ಮಾಡುತ್ತಿದ್ದೇವೆ. ಇದರಲ್ಲಿ ನಾವು ನೊಂದಾಯಿಸಿದ ನಿರೀಕ್ಷಣೆಗಳ ಅನುಸಾರ ಕೊರೋನಾ ವಿಷಾಣುವು ಚೀನಾದ ವಯಹಾನಿನಲ್ಲಿರುವ ಪ್ರಯೋಗಶಾಲೆಯಲ್ಲಿ ಜನಿಸಿರುವ ಸಾಧ್ಯತೆಯು ಹೆಚ್ಚಿದೆ ಎಂಬ ಹೇಳಿಕೆಯನ್ನು ಅಮೇರಿಕಾದ ಗುಪ್ತಚರ ತನಿಖಾ ವಿಭಾಗದ (ಎಫ್‌.ಬಿ.ಆಯ್‌.ನ) ಸಂಚಾಲಕರಾದ ಕ್ರಿಸ್ಟೋಫರ ವ್ರೆಯವರು ನೀಡಿದ್ದಾರೆ. ಅವರು ಒಂದು ವಾರ್ತಾವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ‘ವಿಶೇಷವೆಂದರೆ ಈ ಸಂದರ್ಭದಲ್ಲಿ ಯಾರೇ ಸಂಶೋಧನೆ ಮಾಡುತ್ತಿದ್ದರೂ ಚೀನಾದ ಸರಕಾರದಿಂದ ಅವರ ಕಾರ್ಯದಲ್ಲಿ ಅಡಚಣೆಗಳು ಬರುತ್ತಿವೆ, ಎಂಬ ಹೇಳಿಕೆಯನ್ನೂ ಅವರು ಈ ಸಂದರ್ಭದಲ್ಲಿ ನೀಡಿದ್ದಾರೆ.