ಜಮಾತ –ಎ- ಇಸ್ಲಾಮಿ ಸಂಘಟನೆಯ ಮುಖಂಡ ಸಿರಾಝುಲ ಹಕ್ ನ ಅಭಿಪ್ರಾಯ !
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿರುವ 18 ಶ್ರೀಮಂತರ ಪಟ್ಟಿ ನನ್ನ ಬಳಿಯಿದೆ. ಅವರ ಬ್ಯಾಂಕ ಖಾತೆಯಲ್ಲಿ 4 ಸಾವಿರ ಕೋಟಿ ರೂಪಾಯಿಗಳಿವೆ. ಈ 18 ಜನರಲ್ಲಿ ರಾಜಕೀಯ ಮುಖಂಡರು, ನ್ಯಾಯಾಧೀಶರು, ಸರಕಾರಿ ಅಧಿಕಾರಿಗಳು, ಸೈನ್ಯಾಧಿಕಾರಿಗಳು ಇದ್ದಾರೆ. ಈ ಎಲ್ಲರೂ ದೇಶಕ್ಕಾಗಿ ತಮ್ಮ ಹಣವನ್ನು ತ್ಯಾಗ ಮಾಡಬೇಕು. ಅವರ ಹಣದಿಂದ ದೇಶದ ಅರ್ಧ ಸಾಲವನ್ನು ತೀರಿಸಬಹುದು, ಎಂದು ಪಾಕಿಸ್ತಾನದ ‘ಜಮಾತ-ಎ-ಇಸ್ಲಾಮಿ’ನ ಮುಖಂಡ ಸಿರಾಜುಲ ಹಕ್ ನು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಆತ ಒಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದನು. ‘ನಮ್ಮ ದೇಶದ ಸಂಸ್ಥೆಗಳಿಗೆ ಈ ಜನರಿಂದ ಹಣ ತೆಗೆಯಲು ಸಮರ್ಥವಿಲ್ಲ’ ಎಂದೂ ಸಹ ಅವನು ಸ್ಪಷ್ಟಪಡಿಸಿದ್ದಾನೆ.
ಸಿರಾಜುಲ್ ಹಕ್ ಮುಂದುವರಿಸುತ್ತಾ, ಒಂದು ವೇಳೆ 1 ಕೆ.ಜಿ. ಗೋಧಿಯ ಹಿಟ್ಟು 160 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದರೆ, 12 ಜನರ ಕುಟುಂಬದ ಮುಖಂಡನು ಅವರನ್ನು ಹೇಗೆ ಪೋಷಣೆ ಮಾಡುತ್ತಿರಬಹುದು ? ಸರಕಾರ ಜನತೆಯ ಮೇಲೆ 650 ಕೋಟಿ ರೂಪಾಯಿಗಳ ತೆರಿಗೆಯನ್ನು ಹೇರಲು ಪ್ರಯತ್ನಿಸುತ್ತಿದೆ. ಮುಂಬರುವ ಕಾಲದಲ್ಲಿ ಉಸಿರಾಡಲೂ ಸಹ ಸರಕಾರ ತೆರಿಗೆ ವಿಧಿಸಬಹುದು ಎಂದು ಹೇಳಿದ.
ಪಾಕಿಸ್ತಾನದ ಶೇ. 20 ರಷ್ಟು ಶ್ರೀಮಂತರ ಬಳಿ ಶೇ. 49.6 ಸಂಪತ್ತು !
ಇತ್ತೀಚೆಗೆ ವಿಶ್ವ ಸಂಸ್ಥೆಯು ಪ್ರಸಾರ ಮಾಡಿರುವ ವರದಿಯನುಸಾರ ಪಾಕಿಸ್ತಾನದ ಶೇ. 1 ರಷ್ಟು ಶ್ರೀಮಂತರ ಬಳಿ ದೇಶದ ಒಟ್ಟು ಸಂಪತ್ತಿನಲ್ಲಿ ಶೇ. 9 ರಷ್ಟು ಸಂಪತ್ತು ಇದೆ, ಬಡವರ ಬಳಿ ಕೇವಲ ಶೇ. 0.15 ರಷ್ಟು ಸಂಪತ್ತಿದೆ. ದೇಶದ ಶೇ. 20 ರಷ್ಟು ಶ್ರೀಮಂತರ ಬಳಿ ಶೇ. 49.6 ರಷ್ಟು ಸಂಪತ್ತಿದ್ದರೆ, ಅಷ್ಟೇ ಬಡವರ ಬಳಿ ಶೇ. 7 ರಷ್ಟು ಸಂಪತ್ತಿದೆ.