ಅಫಘಾನಿಸ್ತಾನದಲ್ಲಿ ತಾಲಿಬಾನ ಸರಕಾರದಿಂದ ಭಯೋತ್ಪಾದಕರ ವಿರುದ್ಧ ಚಳುವಳಿ

ಇಸ್ಲಾಮಿಕ ಸ್ಟೇಟ್ ನ ಒಬ್ಬ ಮುಖಂಡನ ಹತ್ಯೆ

ತಾಲಿಬಾನ ವಕ್ತಾರ ಜಬೀಹುಲ್ಲಾಹ ಮುಜಾಹಿದ

ಕಾಬೂಲ – ಅಫಘಾನಿಸ್ತಾನದ ತಾಲಿಬಾನ ಸರಕಾರವು ಭಯೋತ್ಪಾದಕರ ವಿರುದ್ಧ ಚಳುವಳಿ ಪ್ರಾರಂಭಿಸಿದ್ದೂ ಇದರ ಅಡಿಯಲ್ಲಿ ಇಸ್ಲಾಮಿಕ ಸ್ಟೇಟ ಈ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯ ಕಾರಿ ಫತೇಹ ಹೆಸರಿನ ಒಬ್ಬ ಮುಖಂಡನನ್ನು ಹತ್ಯೆ ಮಾಡಿದೆ. ಇವನು ಇಸ್ಲಾಮಿಕ್ ಸ್ಟೇಟ್ ನ ಮಾಜಿ ಯುದ್ಧಮಂತ್ರಿಯಾಗಿದ್ದನು.

ಈ ವಿಷಯದ ಕುರಿತು ತಾಲಿಬಾನ ವಕ್ತಾರ ಜಬೀಹುಲ್ಲಾಹ ಮುಜಾಹಿದನು, ಇಸ್ಲಾಮಿಕ ಸ್ಟೇಟ್ ಸಂಘಟನೆಯು ತಾಲಿಬಾನ ವಿರೋಧಿಯಾಗಿದ್ದು, ಅದು ಕಾಬೂಲಿನಲ್ಲಿ ರಷ್ಯಾ, ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ರಾಜಕೀಯ ಉದ್ದೇಶಗಳಿಗೆ ಅನುಕೂಲವಾಗುವ ಕೆಲಸ ಮಾಡಿದೆ. ಅದು ಅನೇಕ ಮಸೀದಿಗಳ ಮೇಲೆಯೂ ಆಕ್ರಮಣದ ಷಡ್ಯಂತ್ರ ರಚಿಸಿತ್ತು ಎಂದು ಹೇಳಿದ್ದಾನೆ.

ಸಂಪಾದಕೀಯ ನಿಲುವು

ತಾಲಿಬಾನವೇ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯಾಗಿದೆ. ಇಂತಹ ತಾಲಿಬಾನ ಭಯೋತ್ಪಾದಕರ ವಿರುದ್ಧ ಚಳುವಳಿ ನಡೆಸುವುದು ಎಂದರೆ ಹಾಸ್ಯಾಸ್ಪದ ಮತ್ತು ಕೇವಲ ತೋರಿಕೆಯಾಗಿದೆ ! ವಾಸ್ತವವಾಗಿ ತಾಲಿಬಾನ ಸಹಿತ ಎಲ್ಲ ಭಯೋತ್ಪಾದಕರ ನಾಶವಾಗುವುದೇ ಶಾಂತಿಯ ದೃಷ್ಟಿಯಿಂದ ಆವಶ್ಯಕವಾಗಿದೆ !