ಸರ್ಫರಾಜ ಮೆನನ ಹೆಸರಿನ ಅಪಾಯಕಾರಿ ಉಗ್ರ ಮುಂಬಯಿಗೆ ದಾಖಲು

ಮುಂಬಯಿ – ಪಾಕಿಸ್ತಾನ, ಚೀನಾ ಮತ್ತು ಹಾಂಗಕಾಂಗನಲ್ಲಿ ಭಯೋತ್ಪಾದಕ ತರಬೇತಿ ಪಡೆದಿರುವ ಸರ್ಫರಾಜ ಮೆನನ ಹೆಸರಿನ ‘ಅಪಾಯಕಾರಿ’ ಉಗ್ರ ಮುಂಬಯಿಗೆ ಕಾಲಿಟ್ಟಿರುವುದು ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ.ಯು) ಮುಂಬಯಿ ಮತ್ತು ಇಂದೂರ ಪೊಲೀಸರಿಗೆ ತಿಳಿಸಿದೆ. ಅವನು ಮಧ್ಯಪ್ರದೇಶದ ಇಂದೂರಿನಲ್ಲಿ ನಿವಾಸಿಯಾಗಿದ್ದಾನೆ. ಅವನ ಎಲ್ಲ ಗುರುತು ಪತ್ರವನ್ನು ಮುಂಬಯಿ ಪೊಲೀಸರಿಗೆ ಕಳುಹಿಸಲಾಗಿದ್ದು, ಪೊಲೀಸರನ್ನು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಮಹಾರಾಷ್ಟ್ರದ ಇತರೆ ನಗರಗಳಿಗೂ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ.

ಕೆಲವು ದಿನಗಳ ಹಿಂದೆ ತಾಲಿಬಾನ ಸದಸ್ಯನೆಂದು ಹೇಳಿಕೊಳ್ಳುವ ಒಬ್ಬ ವ್ಯಕ್ತಿಯು ಮುಂಬಯಿಯಲ್ಲಿ ದಾಳಿ ನಡೆಸುವ ಬೆದರಿಕೆ ಹಾಕಿದ್ದನು. ತಾಲಿಬಾನ ಮುಖಂಡ ಸಿರಾಜುದ್ದೀನ ಹಕ್ಕಾನಿಯ ಆದೇಶದಂತೆ ಅವನು ಇದನ್ನು ಮಾಡುತ್ತಿರುವುದಾಗಿ ಹೇಳಿದ್ದನು. ಮುಂಬಯಿ ಪೊಲೀಸ ಮತ್ತು ರಾಷ್ಟ್ರೀಯ ತನಿಖಾ ದಳ ಜಂಟಿಯಾಗಿ ತನಿಖೆ ಕೈಕೊಂಡಿದೆ.