೬ ಮಾರ್ಚ್ ೨೦೨೩ ರಂದು ‘ಹೋಳಿ ಹುಣ್ಣಿಮೆ’ ಇದೆ. ಆ ನಿಮಿತ್ತ….
ಅಸ್ಮಾಭಿರ್ಭಯಸನ್ತ್ರಸ್ತೈಃ ಕೃತಾ ತ್ವಂ ಹೋಲಿಕೇ ಯತಃ |
ಅತಸ್ತ್ವಾಂ ಪೂಜಯಿಷ್ಯಾಮೋ ಭೂತೇ ಭೂತಿಪ್ರದಾ ಭವ || – ಸ್ಮೃತಿಕೌಸ್ತುಭ
ಅರ್ಥ : ಹೇ ಹೋಲಿಕಾ ದೇವಿ (ಒಣಗಿದ ಕಟ್ಟಿಗೆಗಳು ಮತ್ತು ಬೆರಣಿಗಳನ್ನು ಒಟ್ಟುಗೂಡಿಸಿ ಹಚ್ಚಿದ ಅಗ್ನಿ), ನಾವು ಭಯಭೀತರಾಗಿದ್ದೆವು; ಆದ್ದರಿಂದ ನಾವು ನಿನ್ನನ್ನು ಸಂಗ್ರಹಿಸಿದ್ದೇವೆ. ಇದರಿಂದ ಈಗ ನಾವು ನಿನ್ನ ಪೂಜೆಯನ್ನು ಮಾಡುತ್ತೇವೆ. ಹೇ ಹೋಳಿಯ ವಿಭೂತಿಯೇ ! ನೀನು ನಮಗೆ ಸುಖಸಮೃದ್ಧಿಯನ್ನು ನೀಡುವಂತವಳಾಗು.
ಹೋಲಿಕಾ ವಿಭೂತಿಗೆ ನಮಸ್ಕಾರವನ್ನು ಮಾಡುವಾಗ ಹೇಳುವ ಮಂತ್ರ
ವನ್ದಿತಾಸಿ ಸುರೇನ್ದ್ರೇಣ ಬ್ರಹ್ಮಣಾ ಶಙ್ಕರೇಣ ಚ |
ಅತಸ್ತ್ವಂ ಪಾಹಿ ನೋ ದೇವಿ ಭೂತೇ ಭೂತಿಪ್ರದಾ ಭವ || – ‘ಸ್ಮೃತಿಕೌಸ್ತುಭ’
ಅರ್ಥ : ಹೇ ವಿಭೂತಿ ದೇವಿ ! ನಿನಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರೂ ನಮಸ್ಕಾರ ಮಾಡುತ್ತಾರೆ. ಆದ್ದರಿಂದ, ನೀನು ನಮ್ಮ ರಕ್ಷಣೆ ಮಾಡು. ನಮಗೆ ಸುಖ-ಸಮೃದ್ಧಿಯನ್ನು ನೀಡುವಂತವಳಾಗು.