ಆಕಳ ಶರೀರದಿಂದ ಹೊರಗೆ ಬಂದ ದಿವ್ಯ ಆಹಾರ !

೧. ಆಕಳು ಅಥವಾ ಎತ್ತಿನ ಸೆಗಣಿಯಿಂದ ಹೊರಗೆ ಬಂದ ಜವೆಗೋದಿ ಅಥವಾ ಗೋದಿಯಿಂದ  ಮಾಡಿದ ಆಹಾರ ಪದಾರ್ಥಗಳು ಅತ್ಯಂತ ಸಾತ್ತ್ವಿಕವಾಗಿರುವುದು

‘ದೇಶಿ ಆಕಳಿಗೆ ಅಥವಾ ಎತ್ತಿಗೆ ಜವೆಗೋದಿ ಅಥವಾ ಗೋದಿಯನ್ನು ತಿನ್ನಲು ಕೊಟ್ಟರೆ, ಅದು ಸೆಗಣಿಯ ಜೊತೆಗೆ ಹೊರಗೆ ಬರುತ್ತದೆ. ಸೆಗಣಿಯನ್ನು ತೊಳೆದು, ಒಣಗಿಸಿ, ನಂತರ ಬೀಸಿ ಅದರ ಹಿಟ್ಟು ಮಾಡಿ ಮತ್ತು ಆ ಹಿಟ್ಟಿನ ಚಪಾತಿ, ಸಜ್ಜಿಗೆ (ಶಿರಾ) ಮುಂತಾದುವುಗಳನ್ನು ಮಾಡಿ ತಿಂದರೆ, ಚರ್ಮ ರೋಗ, ಹೊಟ್ಟೆಯಲ್ಲಿನ ಹುಣ್ಣು (ಅಲ್ಸರ) ಇತ್ಯಾದಿ ರೋಗಗಳು ದೂರವಾಗುತ್ತವೆ. ಆಕಳಿನ ಶರೀರದಿಂದ ಹೊರಗೆ ಬಂದಿದ್ದರಿಂದ ಜವೆಗೋದಿ ಅಥವಾ ಗೋದಿಯ ಸಾತ್ತ್ವಿಕತೆ ಬಹಳ ಹೆಚ್ಚಾಗುತ್ತದೆ ಮತ್ತು ಅದರಿಂದ ಆಧ್ಯಾತ್ಮಿಕ ಲಾಭಗಳೂ ಆಗುತ್ತವೆ.

೨. ಬ್ರಹ್ಮಹತ್ಯೆಯಂತಹ ಪಾಪದಿಂದ ಮುಕ್ತವಾಗಲು ಆಕಳಿನ ಸೆಗಣಿಯಿಂದ ತೆಗೆದ ಗೋದಿಯ ಗಂಜಿಯನ್ನು ಒಂದು ತಿಂಗಳು ಸೇವಿಸಬೇಕು.

ಇದು ಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ಬರುತ್ತದೆ. ಅದರಲ್ಲಿ ಮುಂದಿನಂತೆ ಹೇಳಲಾಗಿದೆ,

ನಿರ್ಹೃತೈಶ್ಚ ಯವೈರ್ಗೋಭಿರ್ಮಾಸಂ ಪ್ರಶ್ರಿತಯಾವಕಃ |

ಬ್ರಹ್ಮಹತ್ಯಾಸಮಂ ಪಾಪಂ ಸರ್ವಮೇತೇನ ಶುಧ್ಯತೇ ||

– ಮಹಾಭಾರತ, ಪರ್ವ ೧೩, ಅಧ್ಯಾಯ ೧೧೬, ಶ್ಲೋಕ ೩೯

ಅರ್ಥ : ಆಕಳಿನ ಸೆಗಣಿಯಂದ ತೆಗೆದ ಗೋದಿಯ ಗಂಜಿಯನ್ನು ಒಂದು ತಿಂಗಳು ಸೇವಿಸಬೇಕು. ಇದರಿಂದ ಮನಷ್ಯನು ಬ್ರಹ್ಮಹತ್ಯೆಯಂತಹ ಪಾಪಗಳಿಂದ ಮುಕ್ತನಾಗುತ್ತಾನೆ.

ಪರಾಭವಾರ್ಥಂ ದೈತ್ಯಾನಾಂ ದೆವೈಃ ಶೌಚಮಿದಂ ಕೃತಮ್ |

ತೆ ದೇವತ್ವಮಪಿ ಪ್ರಾಪ್ತಾಃ ಸಂಸಿದ್ಧಾಶ್ಚ ಮಹಾಬಲಾಃ ||

– ಮಹಾಭಾರತ, ಪರ್ವ ೧೩, ಅಧ್ಯಾಯ ೧೧೬, ಶ್ಲೋಕ ೪೦

ಅರ್ಥ : ಯಾವಾಗ ದೈತ್ಯರು ದೇವತೆಗಳನ್ನು ಸೋಲಿಸಿದರೋ, ಆಗ ದೇವತೆಗಳು ಇದೇ ಪ್ರಾಯಶ್ಚಿತ್ತದ ಅನುಷ್ಠಾನವನ್ನು ಮಾಡಿದರು. ಅದರಿಂದ ಅವರಿಗೆ ಪುನಃ (ನಷ್ಟವಾದ) ದೇವತ್ವ ಪ್ರಾಪ್ತವಾಯಿತು ಮತ್ತು ಅವರು ಮಹಾಬಲಶಾಲಿ ಮತ್ತು ಪರಮ ಸಿದ್ಧರಾದರು.

೩. ರಾಜ ಋತಂಭರನು ಆಕಳ ಸೆಗಣಿಯಿಂದ ಹೊರಬಂದ ಜವೆಗೋದಿಯನ್ನು ತೊಳೆದು ಪ್ರಸಾದ ರೂಪದಲ್ಲಿ ಗ್ರಹಣ ಮಾಡಿದುದರಿಂದ ಸತ್ಯವಾನ ಎಂಬ ಪುತ್ರನ ಪ್ರಾಪ್ತಿಯಾಗುವುದು

‘ಪದ್ಮಪುರಾಣದಲ್ಲಿ ತೇಜಃಪುರದ ರಾಜ ಋತುಂಭರರ ಕಥೆ ಬರುತ್ತದೆ, ಅವರಿಗೆ ಪುತ್ರ ಪ್ರಾಪ್ತಿಯ ಇಚ್ಛೆಯಿತ್ತು; ಆದರೆ ಪುತ್ರ ಲಾಭವಾಗುತ್ತಿರಲಿಲ್ಲ. ಆಗ ಅವರು ಜಬಾಲಿಮುನಿಗಳ ಆಜ್ಞೆಯಂತೆ ಆಕಳುಗಳ ಸೇವೆಯನ್ನು ಮಾಡಲು ಪ್ರಾರಂಭಿಸಿದರು. ಆಕಳುಗಳಿಗೆ ಜವೆಗೋದಿಯನ್ನು ತಿನ್ನಲು ಕೊಟ್ಟು ಅವುಗಳ ಸೆಗಣಿಯಿಂದ ಹೊರಬಂದ ಜವೇಗೋದಿಯನ್ನು ತೊಳೆದು ಪ್ರಸಾದ ರೂಪದಲ್ಲಿ ಗ್ರಹಣ ಮಾಡುತ್ತಾ ಸಾತ್ತ್ವಿಕ ಜೀವನವನ್ನು ಜೀವಿಸತೊಡಗಿದರು. ಈ ಮಹಾ ಪುಣ್ಯದಿಂದ ಅವರಿಗೆ ಸತ್ಯವಾನ ಎಂಬ ಹೆಸರಿನ ಶ್ರೇಷ್ಠ ಭಗವದ್ಭಕ್ತ, ಹಾಗೆಯೇ ಇಂದ್ರನಂತಹ ಪರಾಕ್ರಮಿ ಪುತ್ರನ ಪ್ರಾಪ್ತಿಯಾಯಿತು.’

(ಆಧಾರ : ಮಾಸಿಕ ‘ಲೋಕ ಕಲ್ಯಾಣ ಸೇತು’, ಜುಲೈ ೨೦೧೭)