ಉತ್ತರ ಪ್ರದೇಶ ಸರಕಾರದ ರಾಜ್ಯ ಸಚಿವ ಸಂಜಯ ಗಂಗವಾರ ಇವರ ದಾವೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಸುವಿನ ಬೆನ್ನಿನ ಮೇಲೆ ಕೈಯಾಡಿಸಿದರೆ ರಕ್ತದೊತ್ತಡ ಅರ್ಧದಷ್ಟು ಕಡಿಮೆಯಾಗುತ್ತದೆ. 10 ದಿನ ಹಸುವಿನ ಸೇವೆ ಮಾಡಿದರೆ ಒಟ್ಟು 20 ಮಿಲಿಗ್ರಾಂ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಅವರು 10 ಮಿಲಿಗ್ರಾಂನಷ್ಟು ತೆಗೆದುಕೊಳ್ಳ ಬೇಕಾಗುವುದು. ನೀವು ಕ್ಯಾನ್ಸರ್ ರೋಗಿಯಾಗಿದ್ದರೆ, ಕೊಟ್ಟಿಗೆಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿ. ಅಲ್ಲಿಯೇ ಉಳಿದರೆ ಕ್ಯಾನ್ಸರ್ ಕೂಡ ವಾಸಿಯಾಗಬಹುದು. ಇದು ಸಂಪೂರ್ಣ ಪರೀಕ್ಷಿಸಿದ ವಿಷಯವಾಗಿದೆ, ನಾನು ನಿಮಗೆ ಹೇಳುತ್ತಿದ್ದೇನೆ ಎಂದು ಉತ್ತರ ಪ್ರದೇಶ ಸರಕಾರದ ರಾಜ್ಯಸಚಿವ ಸಂಜಯ ಗಂಗವಾರ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ.
ಗಂಗವಾರ್ ಜನರಲ್ಲಿ ಮನವಿ ಮಾಡುವಾಗ, ಗೋವಿನ ಸೇವೆಯೇ ಎಲ್ಲಕ್ಕಿಂತ ಶ್ರೇಷ್ಠಸೇವೆ ಇದೆ. ಜನರು ಕೊಟ್ಟಿಗೆಯಲ್ಲಿರುವ ಗೋವುಗಳಿಗಾಗಿ ದಾನ ಮಾಡಬೇಕು. ನಿಮ್ಮ ಮಕ್ಕಳ ಜನ್ಮದಿನಗಳನ್ನು ಕೊಟ್ಟಿಗೆಯಲ್ಲಿ ಆಚರಿಸಿ. ಇದರಿಂದ ಒಳ್ಳೆಯ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!