ಸನಾತನದ (ಧರ್ಮದ) ವಿರೋಧದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ರೂಪಿಸುತ್ತಿದ್ದಾರೆ ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಪೀಠಾಧೀಶ್ವರ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಟಿಕಮಗಡ್ (ಮಧ್ಯ ಪ್ರದೇಶ) – ಸನಾತನ ಧರ್ಮದ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ರೂಪಿಸುತ್ತಿದ್ದಾರೆ. ಆನೆ ಮಾರುಕಟ್ಟೆಯಲ್ಲಿ ಹೋಗುವಾಗ ಸಾವಿರಾರು ನಾಯಿಗಳು ಬೊಗಳುತ್ತವೆ ! ನೀವು ನಮ್ಮ ಬಗ್ಗೆ ಅಸೂಯೆ ಪಡುತ್ತಿದ್ದೀರಿ; ಆದರೆ ನಾವು ನಮ್ಮ ಕಾರ್ಯ ಮುಂದುವರಿಸುವೆವು ! ನಮಗೆ ಬೆದರಿಕೆ ಬರುತ್ತಿದ್ದು ಹೇದರಿಸುವ ಪ್ರಯತ್ನ ಮಾಡುತ್ತಿದ್ದಾರೆ; ಆದರೆ ನಾವು ಮೈದಾನ ಬಿಟ್ಟು ಓಡುವುದಿಲ್ಲ, ಎಂದು ಬಾಗೇಶ್ವರ ಧಾಮನ ಪೀಠಾಧೀಶ್ವರ ಪಂಡಿತ ಧೀರೇಂದ್ರ ಶಾಸ್ತ್ರಿ ಇವರು ಖಂಡತುಂಡವಾಗಿ ಉತ್ತರಿಸಿದರು. ಬಾಗೇಶ್ವರ ಧಾಮನ ವತಿಯಿಂದ ಇಲ್ಲಿ ೭ ದಿನಗಳ ಕಾಲ ದರಬಾರ ನಡೆಸಿದ್ದರು. ಅದರ ಪ್ರಯುಕ್ತ ಪೀಠಾಧೀಶ್ವರರು ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು. ಅವರ ಮೇಲೆ ಅನೇಕ ರೀತಿಯ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳನ್ನು ಈ ಸಮಯದಲ್ಲಿ ಖಂಡಿಸಿದರು. ಈ ಸಮಯದಲ್ಲಿ ಪೀಠಾಧೀಶ್ವರರು, ಹಿಂದೂ ಮತ್ತು ಮುಸಲ್ಮಾನರಲ್ಲಿನ ಸಂಘರ್ಷ ಮುಗಿಸಲು ನಾವು ಹಿಂದೂ ರಾಷ್ಟ್ರಕ್ಕೆ ಒತ್ತಾಯಿಸುತ್ತಿದ್ದೇವೆ. ನಮ್ಮ ಉದ್ದೇಶ ಭಾರತದಲ್ಲಿ ಸಾಮಾಜಿಕ ಸೌಹಾರ್ದತೆ ನಿರ್ಮಾಣ ಮಾಡುವುದಾಗಿದೆ. ಭಾರತದ ಸಂವಿಧಾನದಲ್ಲಿ ೧೨೫ ಸಾರಿ ಬದಲಾವಣೆ ಮಾಡಿದ್ದಾರೆ, ಹಾಗಾದರೆ ‘ಹಿಂದೂ ರಾಷ್ಟ್ರಕ್ಕಾಗಿ’ ಇನ್ನೊಮ್ಮೆ ಅದನ್ನು ಮಾಡಬಹುದು ಎಂದು ಹೇಳಿದರು.