‘ಸಂಭಾಜಿ ನಗರ ಹೆಸರಿಗೆ ವಿರೋಧ ಮಾಡುತ್ತಲೇ ಇರುವೆವು !’ (ಅಂತೆ) – ಎಂ.ಐ.ಎಂ. ನ ಇಮ್ತಿಯಾಜ್ ಜಲೀಲ್

  • ಎಂ.ಐ.ಎಂ. ನ ಇಮ್ತಿಯಾಜ್ ಜಲೀಲ್ ನ ಹಿಂದುದ್ವೇಷಿ ಹೇಳಿಕೆ

  • ಛತ್ರಪತಿ ಸಂಭಾಜಿ ಮಹಾರಾಜ ಇವರಿಗೆ ವಿರೋಧ ಇಲ್ಲವೆಂದು ಸ್ಪಷ್ಟೀಕರಣ !

ಎಂ.ಐ.ಎಂ. ನ ಇಮ್ತಿಯಾಜ್ ಜಲೀಲ್

ಸಂಭಾಜಿನಗರ – ನಾವು ಛತ್ರಪತಿ ಸಂಭಾಜಿ ಮಹಾರಾಜ ಇವರಿಗೆ ವಿರೋಧಿಸುತ್ತಿಲ್ಲ; ಆದರೆ ಈ ಹಿಂದೆ ಕೂಡ ನಾನು ಸಂಭಾಜಿ ನಗರ ಹೆಸರಿಗೆ ವಿರೋಧಿಸಿದ್ದೇನೆ ಮತ್ತು ಮುಂದೆ ಕೂಡ ಮಾಡುತ್ತೇನೆ, ಎಂದು ಜಿಲ್ಲೆಯ ಶಾಸಕ ಮತ್ತು ಎಂ.ಐ.ಎಂ. ಪಕ್ಷದ ನಾಯಕ ಇಮ್ತಿಯಾಜ್ ಜಲೀಲ್ ಇವರು ಹಿಂದೂದ್ವೇಷಿ ಹೇಳಿಕೆ ನೀಡಿದರು. ಫೆಬ್ರುವರಿ ೨೪ ರಂದು ಕೇಂದ್ರ ಸರಕಾರವು ಔರಂಗಾಬಾದ ನಗರವನ್ನು ‘ಛತ್ರಪತಿ ಸಂಭಾಜಿ ನಗರ’ ಮತ್ತು ಉಸ್ಮನಾಬಾದದನ್ನು ‘ಧಾರಾಶಿವ’ ಮಾಡುವ ಮಹಾರಾಷ್ಟ್ರ ಸರಕಾರದ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಕಳೆದ ಅನೇಕ ವರ್ಷಗಳ ಕಾಲ ಈ ಮರುನಾಮಕರಣ ಮುಸಲ್ಮಾನರ ಓಲೈಕೆಯಿಂದ ನಿಂತಿತ್ತು.

ಜಲೀಲ್ ಮಾತು ಮುಂದುವರಿಸಿ, ”ನಾವು ಛತ್ರಪತಿ ಶಿವಾಜಿ ಮಹಾರಾಜ, ಛತ್ರಪತಿ ಸಂಭಾಜಿ ಮಹಾರಾಜ, ಮಹಾತ್ಮ ಪುಲೆ, ಶಾಹು ಮಹಾರಾಜ , ಡಾ. ಬಾಬಾ ಸಾಹೇಬ ಅಂಬೇಡ್ಕರ್, ಇವರೆಲ್ಲರನ್ನು ಗೌರವಿಸುತ್ತೇವೆ; ಆದರೆ ಅವರ ಹೆಸರು ಹೇಳಿ ನಾವು ಎಂದೂ ರಾಜಕೀಯ ಮಾಡಲಿಲ್ಲ. ಸರಕಾರವು ನಗರಗಳ ಹೆಸರು ಬದಲಾಯಿಸಿದೆ; ಆದರೆ ಜಿಲ್ಲೆಯ ಹೆಸರು ಇನ್ನೂ ಕೂಡ ಔರಂಗಬಾದವೆ ಇದೆ. ಅದು ಬದಲಾಯಿಸಲು ಆಗುವುದಿಲ್ಲ. ಸರಕಾರ ತೆಗೆದುಕೊಂಡಿರುವ ನಿರ್ಣಯ ನನಗೆ ಒಪ್ಪಿಗೆ ಇಲ್ಲ, ಆಗ ಅದಕ್ಕೆ ನಾನು ವಿರೋಧ ಮಾಡಬಹುದು. ಅದು ನನ್ನ ಅಧಿಕಾರವಾಗಿದೆ.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಛತ್ರಪತಿ ಸಂಭಾಜಿ ಮಹಾರಾಜ ಇವರಿಗೆ ವಿರೋಧ ಇಲ್ಲವೆಂದು ಹೇಳಿ ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡುವ ಔರಂಗಜೇಬನ ಕೃತ್ಯಕ್ಕೆ ಎಂದಾದರೂ ತಪ್ಪು ಎಂದು ಹೇಳುವರೇ, ಇದನ್ನು ತಿಳಿದುಕೊಳ್ಳಿ !