ಉತ್ತರ ಪ್ರದೇಶದ ರಾಜು ಪಾಲ ಕೊಲೆಯ ಪ್ರಕರಣದಲ್ಲಿನ ಮುಖ್ಯ ಸಾಕ್ಷಿ ಮತ್ತು ಪೊಲೀಸ ಸಿಬ್ಬಂದಿಯ ಹತ್ಯೆ

ಕುಖ್ಯಾತ ರೌಡಿ ಆತೀಕ ಅಹಮದ್ ಸಹಿತ ೭ ಜನರ ಮೇಲೆ ದೂರು !

ಆತಿಕ್ ನ ಪತ್ನಿ ಮತ್ತು ಮಕ್ಕಳು ಸಹಭಾಗಿ

ಪ್ರಯಾಗರಾಜ (ಉತ್ತರ ಪ್ರದೇಶ) – ಇಲ್ಲಿ ೨೦೦೫ ರಲ್ಲಿ ರಾಜು ಪಾಲ ಕೊಲೆ ಪ್ರಕರಣದಲ್ಲಿನ ಮುಖ್ಯ ಸಾಕ್ಷಿ ಉಮೇಶ ಪಾಲ ಮತ್ತು ಅವರ ರಕ್ಷಣೆಗಾಗಿ ಇದ್ದ ಪೊಲೀಸ್ ಸಿಬ್ಬಂದಿಯ ಹತ್ಯೆಯ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಕುಖ್ಯಾತ ರೌಡಿ ಆತಿಕ ಅಹಮದ್, ಅವನ ಸಹೋದರ ಅಶ್ರಫ, ಆತಿಕ್ ನ ಪತ್ನಿ ಶಾಯಿಸ್ತಾ ಮತ್ತು ಅವರ ಇಬ್ಬರು ಮಕ್ಕಳ ಮೇಲೆ ದೂರು ದಾಖಲಿಸಲಾಗಿದೆ. ಎರಡು ಮಕ್ಕಳ ಜೊತೆ ೭ ಜನರನ್ನು ಪೊಲೀಸರು ವಶಕ್ಕೆ ಪಡೆದು ಪತ್ನಿ ಶಾಹಿಸ್ತಾ ಏಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆತಿಕ ಮತ್ತು ಅಶ್ರಫ ಜೈಲಿನಲ್ಲಿದ್ದಾರೆ. ಭಾಜಪದ ಅಲ್ಪಸಂಖ್ಯಾತ ಶಾಖೆಯ ಜಿಲ್ಲಾಧ್ಯಕ್ಷ ರಾಹಿಲ್ ಹಸನ ಇವನನ್ನು ಕೂಡ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಫೆಬ್ರವರಿ ೨೪ ರಂದು ಉಮೇಶ ಪಾಲ ಇವನು ರಾಜು ಪಾಲ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸಾಕ್ಷಿ ನೀಡಿ ಪೊಲೀಸರ ಭಧ್ರತೆಯಲ್ಲಿ ವಾಹನದ ಹೋಗುತ್ತಿರುವಾಗ ವಾಹನ ಅಡ್ಡಗಟ್ಟಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದರು. ಇದರಲ್ಲಿ ಪೊಲೀಸು ಕೂಡ ಹತನಾದನು. ಉಮೇಶ ಪಾಲರ ಡ್ರೈವರ್ ಪ್ರದೀಪ್ ಶರ್ಮ ಇವರ ವರ್ತನೆಯ ಬಗ್ಗೆ ಪೊಲೀಸರಿಗೆ ಅನುಮಾನ ತಂದಿದೆ. ಪೊಲೀಸರು ತಡ ರಾತ್ರಿ ಪ್ರದೀಪನ ವಿಚಾರಣೆ ನಡೆಸಿದರು. ಹತ್ಯೆಯ ಘಟನೆ ನಂತರ ಪ್ರದೀಪ ಓಡಿ ಹೋಗಿದ್ದನು. ಈ ಹತ್ಯೆಯ ಸಿಸಿಟಿವಿಯ ಚಿತ್ರೀಕರಣ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ.