ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
‘ಕೆಲವೊಮ್ಮೆ ಕೆಲವರು ದ್ವಿಚಕ್ರ ವಾಹನದಲ್ಲಿ ಕುಳಿತುಕೊಂಡೇ ಬಾಗಿಲು (ಗೇಟ್) ತೆಗೆಯುತ್ತಾರೆ ಅಥವಾ ಮುಚ್ಚುತ್ತಾರೆ. ಹೀಗೆ ಮಾಡುವುದರಿಂದ ಶರೀರದ ಸ್ನಾಯುಗಳ ಮೇಲೆ ತಪ್ಪಾದ ರೀತಿಯಲ್ಲಿ ಒತ್ತಡ ಬರುತ್ತದೆ. ಒಂದು ಕೃತಿಯನ್ನು ನಿಯಮಿತವಾಗಿ ತಪ್ಪಾಗಿಯೇ ಮಾಡುತ್ತಾ ಹೋದರೆ ಶರೀರದ ಸ್ನಾಯುಗಳೂ ತಪ್ಪಾದ ರೀತಿಯಲ್ಲಿ ಹೊರಳುತ್ತವೆ ಮತ್ತು ಶರೀರದ ಸಂರಚನೆಯು ಬದಲಾಗುತ್ತದೆ. ಇದರಿಂದ ಕೆಲವೊಮ್ಮೆ ಆಕಸ್ಮಿಕವಾಗಿ ಕುತ್ತಿಗೆ, ಬೆನ್ನು, ಸೊಂಟ ಅಥವಾ ಹೆಗಲು ಇವುಗಳ ನೋವು ಅಥವಾ ಉಳುಕು ಬರಬಹುದು. ಹಾಗಾಗಬಾರದೆಂದು, (ಎಷ್ಟೇ ಗಡಿಬಿಡಿ ಇದ್ದರೂ) ದ್ವಿಚಕ್ರವಾಹನದಿಂದ ಇಳಿದು ಬಾಗಿಲು ತೆಗೆಯಬೇಕು ಅಥವಾ ಮುಚ್ಚಬೇಕು.
ವ್ಯಾಯಾಮಕ್ಕೆ ಸಂಬಂಧಿಸಿದ ಕ್ರಮ
೧. ‘ವ್ಯಾಯಾಮವನ್ನು ಹೊಟ್ಟೆ ಖಾಲಿ ಇದ್ದಾಗ ಮಾಡಬೇಕು. ತಿಂದನಂತರ ಕೂಡಲೇ ವ್ಯಾಯಾಮ ಮಾಡಬಾರದು. ತಿಂದ ನಂತರ ವ್ಯಾಯಾಮ ಮಾಡವುದಿದ್ದರೆ ನಡುವೆ ಒಂದೂವರೆಯಿಂದ ೩ ಗಂಟೆಗಳ ಅಂತರವಿರಬೇಕು.
೨. ವ್ಯಾಯಾಮ ಮಾಡಿದ ನಂತರ ಕೂಡಲೇ ತಿನ್ನಬಾರದು. ಕನಿಷ್ಠ ೧೫ ನಿಮಿಷ ಸಮಯವನ್ನಾದರೂ ಬಿಡಬೇಕು. ವ್ಯಾಯಾಮದ ನಂತರ ಸ್ನಾನ ಮಾಡುವುದಿದ್ದರೆ ಅದನ್ನೂ ೧೫ ನಿಮಿಷಗಳ ನಂತರ ಮಾಡಬೇಕು. ‘ವ್ಯಾಯಾಮ, ಸ್ನಾನ ಮತ್ತು ತಿನ್ನುವುದು’, ಈ ರೀತಿ ಕ್ರಮ ಇರಬೇಕು.
೩. ವ್ಯಾಯಾಮದ ಮೊದಲು, ವ್ಯಾಯಾಮ ಮಾಡುವಾಗ ಹಾಗೆಯೇ ವ್ಯಾಯಾಮ ಮಾಡಿದ ನಂತರ ಆವಶ್ಯಕತೆಗನುಸಾರ ೧-೨ ಗುಟುಕು ನೀರು ಕುಡಿಯಬಹುದು; ಆದರೆ ಒಂದೇ ಸಮಯದಲ್ಲಿ ಬಹಳಷ್ಟು ನೀರನ್ನು ಕುಡಿಯಬಾರದು.
‘ಕುತ್ತಿಗೆ, ಭುಜ ಇತ್ಯಾದಿಗಳಿಗಾಗಿ ಸ್ವಲ್ಪ ಸಮಯ ಮಾಡುವ ವ್ಯಾಯಾಮಗಳು ಮತ್ತು ತುಂಬಾ ಶ್ರಮವಾಗದ ವ್ಯಾಯಾಮಗಳು’, ಅಂದರೆ ‘ಸೂಕ್ಷ್ಮ ವ್ಯಾಯಾಮ’. ಸೂಕ್ಷ್ಮ ವ್ಯಾಯಾಮಗಳ ಸಂದರ್ಭದಲ್ಲಿ ಮೇಲಿನ ನಿಯಮವನ್ನು ಪಾಲಿಸುವ ಆವಶ್ಯಕತೆ ಇರುವುದಿಲ್ಲ.’
ಮಧ್ಯಾಹ್ನ ಊಟ ಮಾಡಿ ಮಲಗುವುದಾದರೆ ಹೆಚ್ಚೆಂದರೆ ಅರ್ಧ ಗಂಟೆ ಮಲಗಬೇಕು !
‘ಮಧ್ಯಾಹ್ನ ಊಟ ಮಾಡಿ ಹೆಚ್ಚು ಸಮಯ ಮಲಗಿದರೆ ದೇಹದ ರಕ್ತಪ್ರವಾಹವು ಕೈಕಾಲುಗಳ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಹೊರಳುತ್ತದೆ ಮತ್ತು ಹೊಟ್ಟೆಯ ಕಡೆಗೆ ಹೋಗುವ ರಕ್ತಪ್ರವಾಹವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ಜೀರ್ಣವಾಗದಿದ್ದರೆ ವಿವಿಧ ರೋಗಗಳಾಗುತ್ತವೆ. ಹಾಗೆ ಆಗಬಾರದೆಂದು ಮಧ್ಯಾಹ್ನ ಊಟ ಮಾಡಿದ ನಂತರ ಮಲಗುವ ಅಭ್ಯಾಸ ಇರುವವರು ಮಧ್ಯಾಹ್ಮ ಹೆಚ್ಚೆಂದರೆ ಅರ್ಧ ಗಂಟೆ ಮಲಗಬೇಕು. ಹೀಗೆ ಮಾಡಿದರೆ ಊಟ ಮಾಡಿ ಮಲಗುವುದರಿಂದ ದುಷ್ಪರಿಣಾಮವಾಗದೇ ಶರೀರಕ್ಕೆ ಅಗತ್ಯ ವಿಶ್ರಾಂತಿ ಸಿಗುತ್ತದೆ.
– ವೈದ್ಯ ಮೇಘರಾಜ ಮಾಧವ ಪರಾಡಕರ