ಸಾಧಕರಿಗೆ ಸಾಧನೆಗಾಗಿ ಸ್ಫೂರ್ತಿ ನೀಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಮಾಡಿದ ಅಮೂಲ್ಯ ಮಾರ್ಗದರ್ಶನ !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

೧. ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆಯಾಗಿ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಸ್ವಲ್ಪವಾದರೂ ಕಷ್ಟವನ್ನು ಸಹಿಸಲೇಬಾಕಾಗುತ್ತದೆ

‘ಆಶ್ರಮದಲ್ಲಿದ್ದು ಪೂರ್ಣವೇಳೆ ಸಾಧನೆ ಮಾಡುವ ಸಾಧಕನೊಬ್ಬನು ಅವನಿಗಾಗುವ ಆಧ್ಯಾತ್ಮಿಕ ತೊಂದರೆಗಳಿಂದ ಮನೆಗೆ ಹೋಗುವ ವಿಚಾರ ಮಾಡಿದನು. ಅದನ್ನು ಅವನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ಹೇಳಿದನು. ಆಗ ಅವರು ಅವನಿಗೆ ಮುಂದಿನಂತೆ ಹೇಳಿದನು, “ನೀವು (ಸಾಧಕನು) ಎಲ್ಲೇ ಇದ್ದರೂ ಆನಂದದಲ್ಲಿ ಮತ್ತು ಸಾಧನೆಯಲ್ಲಿ ಇರಬೇಕು, ಇದೇ ದೇವರಿಗೆ ಅಪೇಕ್ಷಿತವಿದೆ. ‘ನಾವು ಆಶ್ರಮದಲ್ಲಿರಬೇಕೋ ಮನೆಯಲ್ಲಿರಬೇಕೋ ?, ಇದನ್ನು ಅವರವರೇ ನಿರ್ಧರಿಸಬೇಕು. ಜೀವನದಲ್ಲಿ ಪ್ರತಿಯೊಬ್ಬರಿಗೂ ಏನಾದರೂ ಒಳ್ಳೆಯದನ್ನು ಪಡೆಯಲು ಸಂಘರ್ಷವನ್ನು ಮಾಡಲೇಬೇಕಾಗುತ್ತದೆ. ವ್ಯವಹಾರದಲ್ಲೂ ದಿನನಿತ್ಯದ ಜೀವನವನ್ನು ನಡೆಸುವುದಕ್ಕಾಗಿ ಮನುಷ್ಯನಿಗೆ ತೀವ್ರ ಸಂಘರ್ಷವನ್ನು ಮಾಡಬೇಕಾಗುತ್ತದೆ. ನಮಗಂತೂ ಜನ್ಮ-ಮೃತ್ಯುವಿನ ಚಕ್ರದಿಂದ ನಮ್ಮನ್ನು ಬಿಡುಗಡೆ ಮಾಡಿಕೊಂಡು ಈಶ್ವರಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ, ಹಾಗಾದರೆ ಸ್ವಲ್ಪವಾದರೂ ಕಷ್ಟವನ್ನು ಅನುಭವಿಸಲೇಬೇಕಾಗುತ್ತದೆ.

೨. ಮನೆಯಲ್ಲಿದ್ದು ಮತ್ತು ಆಶ್ರಮದಲ್ಲಿದ್ದು ಮಾಡುವ ಸಾಧನೆಯಲ್ಲಿನ ವ್ಯತ್ಯಾಸ

೨ ಅ. ಮನೆಯಲ್ಲಿರುವುದರಿಂದ ಆಗುವ ಸಂಘರ್ಷದಿಂದ ಮನಸ್ಸಿಗೆ ಅಸಹನೀಯ ನೋವು ಮತ್ತು ದುಃಖವಾಗುವುದು; ಆದರೆ ಅದೇ ಸಂಘರ್ಷವು ಆಶ್ರಮದ ದೈವೀ ವಾತಾವರಣದಲ್ಲಿ ಮತ್ತು ಸಂತರ ಆಶ್ರಯದಲ್ಲಿ ಸಹಿಸಲು ಆಗುವುದು : ಯಾರಿಗೆ ಸಾಧ್ಯವಿದೆ ಅವರು ಆಶ್ರಮದಲ್ಲಿದ್ದು ಸಾಧನೆ ಮಾಡಿದರೆ, ಅವರಿಗೆ ಅದರ ಅಧ್ಯಾತ್ಮಿಕವಾಗಿ ಹೆಚ್ಚು ಲಾಭವನ್ನು ಮಾಡಿಕೊಳ್ಳಲು ಬರುತ್ತದೆ. ಮನೆಯಲ್ಲಿದ್ದು ಪ್ರಾರ್ಥನೆ ಮಾಡುವುದು ಮತ್ತು ಅದೇ ಕೃತಿಯನ್ನು ಒಂದು ದೇವಸ್ಥಾನಕ್ಕೆ ಹೋಗಿ ಮಾಡುವುದು, ಇದರಲ್ಲಿ ಎಷ್ಟು ವ್ಯತ್ಯಾಸವಿರುತ್ತದೆಯಲ್ಲ ! ಸ್ವಂತ ಮನಸ್ಸಿನಿಂದ ಔಷಧಿ ತೆಗೆದುಕೊಳ್ಳುವುದು ಮತ್ತು ಅದನ್ನೇ ಒಬ್ಬ ವೈದ್ಯನ ಸಲಹೆ ಪಡೆದು ತೆಗೆದುಕೊಳ್ಳುವುದು, ಇದರಲ್ಲಿ ಎಷ್ಟು ವ್ಯತ್ಯಾಸವಿದೆ !

ಇಷ್ಟೇ ಅಲ್ಲದೆ, ಆಶ್ರಮದಲ್ಲಿದ್ದು ಸಂತರ ಸತ್ಸಂಗದಲ್ಲಿ ಸಾಧನೆ ಮಾಡುವುದರ ಲಾಭವೂ ಅಷ್ಟೇ ಹೆಚ್ಚಿದೆ. ಯಾವ ಸಂಘರ್ಷವು ಮನೆಯಲ್ಲಿದ್ದು ಮನಸ್ಸಿಗೆ ಸಹಿಸಲಾಗದ ನೋವು ಮತ್ತು ದುಃಖವನ್ನು ಕೊಡುತ್ತದೆಯೋ, ಅದೇ ಸಂಘರ್ಷವು ಆಶ್ರಮದಲ್ಲಿದ್ದು ಅಲ್ಲಿಯ ದೈವೀ ವಾತಾವರದಲ್ಲಿ ಮತ್ತು ಸಂತರ ಆಶ್ರಯದಲ್ಲಿ ಸಹಿಸಲು ಆಗುತ್ತದೆ.

೨ ಆ. ಗುರುಗಳ ಆಶ್ರಯದಲ್ಲಿ ನಮ್ಮ ಪ್ರಾರಬ್ಧಭೋಗಗಳು ಬೇಗನೆ ತೀರಲು ಸಹಾಯವಾಗುತ್ತದೆ

೨ ಇ. ಆಶ್ರಮದ ದೈವೀ ಊರ್ಜೆಯಿಂದ ನಮ್ಮ ತೊಂದರೆ ಮತ್ತು ನೋವುಗಳು ನಮಗೆ ತಿಳಿಯದೆ ತನ್ನಷ್ಟಕ್ಕೆ ಕಡಿಮೆಯಾಗುತ್ತಾ ಹೋಗುತ್ತವೆ.

೨ ಈ. ಆಶ್ರಮದ ಸಾಧಕರು ಸಹ ನಮ್ಮ ಅಡಚಣೆಯಲ್ಲಿ ನಮಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ.

ಸಾಧಕರಿಗೆ ಗುರುಕೃಪೆಯಿಂದ ಈಶ್ವರೀ ಕಾರ್ಯದಲ್ಲಿ ಪಾಲ್ಗೊಂಡು ಅಳಿಲು ಸೇವೆ ಮಾಡುವ ಮಹದ್ಭಾಗ್ಯವು ದೊರಕಿದೆ, ಅದಕ್ಕಾಗಿ ಎಷ್ಟೇ ಸಂಘರ್ಷ ಮಾಡಬೇಕಾದರೂ, ಸಾಧನೆಯನ್ನು ಬಿಡದಿರುವುದು ಮತ್ತು ಮನುಷ್ಯಜನ್ಮವನ್ನು ಸಾರ್ಥಕ ಮಾಡುವ ದೃಢ ನಿಶ್ಚಯವನ್ನು ಸಾಧಕರು ಮಾಡುವ ಅವಶ್ಯಕವಾಗಿರುವುದು

ಈಗ ಕಾಲದ ಅವಶ್ಯಕತೆಯನ್ನು ನೋಡಿದರೆ ರಾಷ್ಟ್ರ ಮತ್ತು ಧರ್ಮದ ಉತ್ಕರ್ಷಕ್ಕಾಗಿ ತನು, ಮನ, ಮತ್ತು ಧನ ಇವುಗಳ ತ್ಯಾಗ ಮಾಡಿ ಸಾಧನೆ ಮಾಡುವವರ ಅವಶ್ಯಕತೆಯು ಬಹಳ ಇದೆ. ಈಶ್ವರೀ ಕಾರ್ಯದಲ್ಲಿ ಪಾಲ್ಗೊಂಡು ಅಳಿಲು ಸೇವೆ ಮಾಡುವ ಯಾವ ಮಹದ್ಭಾಗ್ಯವು ನಮಗೆ ಗುರುಕೃಪೆಯಿಂದ ದೊರಕಿದೆಯೋ, ಆ ಅವಕಾಶವನ್ನು ಸಾಧಕರು ಎಂದಿಗೂ ಬಿಡಬಾರದು. ಸಾಧಕರು ‘ಎಷ್ಟೇ ಅಡೆತಡೆಗಳು ಬಂದರು, ಕಷ್ಟವಾದರೂ ಅಥವಾ ಸಂಘರ್ಷ ಮಾಡಬೇಕಾದರೂ ನಾನು ಸಾಧನೆಯನ್ನು ಬಿಡುವುದಿಲ್ಲ. ದೇವರ ಚರಣಗಳನ್ನು ಬಿಡುವುದಿಲ್ಲ, ಎಂಬ ಮನಸ್ಸಿನಲ್ಲಿ ದೃಢ ನಿಶ್ಚಯವನ್ನು ಮಾಡುವ ಸಮಯ ಈಗ ಬಂದಿದೆ. ಸಾಧಕರು ಈ ಸತ್ಯವನ್ನು ತಿಳಿದುಕೊಳ್ಳಬೇಕು ಮತ್ತು ‘ಸಾಧಕರ ಜನ್ಮವು ಈಶ್ವರಪ್ರಾಪ್ತಿಗಾಗಿ ಇದೆ. ಮಾಯೆಯಲ್ಲಿ ಮಗ್ನರಾಗಿ ಆಯುಷ್ಯವನ್ನು ವ್ಯರ್ಥಮಾಡುವುದಕ್ಕಾಗಿ ಅಲ್ಲ’, ಎಂಬುದನ್ನು ತಮ್ಮ ಮನಸ್ಸಿನಲ್ಲಿ ಅಂಕಿತ ಮಾಡಬೇಕು.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೨೬.೩.೨೦೨೦)