|
ಉದಯಪುರ (ರಾಜಸ್ಥಾನ) – ಇಲ್ಲಿನ ರಾವಲಿಯಾ ಖುರ್ದ ಎಂಬ ಊರಿನಲ್ಲಿ ಫೆಬ್ರುವರಿ ೨೦ರಂದು ಇಲ್ಲಿನ ಒಂದು ದೇವಸ್ಥಾನದಲ್ಲಿ ಭಗವಾನ ಪರಶುರಾಮರ ಮೂರ್ತಿಯನ್ನು ಧ್ವಂಸಗೊಳಿಸಲಾಯಿತು. ಭಗವಾನ ಪರಶುರಾಮರ ಮೂರ್ತಿ ಇದ್ದ ಈ ದೇವಸ್ಥಾನದಲ್ಲಿ ಗ್ರಾಮಸ್ಥರು ನಿತ್ಯವೂ ಬಂದು ಪೂಜಾರ್ಚನೆಗಳನ್ನು ಮಾಡುತ್ತಿದ್ದರು. ಫೆಬ್ರುವರಿ ೨೦ರಂದು ಗ್ರಾಮಸ್ಥರು ಎಂದಿನಂತೆ ದೇವಸ್ಥಾನಕ್ಕೆ ಬಂದಾಗ ಅವರಿಗೆ ಭಗವಾನ ಪರಶುರಾಮರ ೨ ಕೈಗಳು ಮುರಿದಿರುವುದು, ಕಾಲನ್ನು ಮುರಿದು ಹತ್ತಿರದ ಮೆಟ್ಟಿಲಿನ ಮೇಲೆ ಎಸೆದಿರುವುದು ಕಂಡುಬಂದಿತು. ಈ ವಾರ್ತೆಯು ಊರಿನಲ್ಲಿ ಗಾಳಿಯಂತೆ ಹಬ್ಬಿದ ನಂತರ ಹಿಂದೂಗಳು ದೇವಸ್ಥಾನದ ಬಳಿ ತಕ್ಷಣ ಸೇರಿದರು. ಅನಂತರ ಪೊಲೀಸರನ್ನು ಕರೆಯಿಸಲಾಯಿತು. ಪೊಲೀಸರು ಹಿಂದೂಗಳಿಗೆ ಸಮಾಧಾನಪಡಿಸಲು ಪ್ರಯತ್ನಿಸಿದರು ಆದರೂ ಸಿಟ್ಟಾದ ಹಿಂದೂಗಳು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆರೋಪಿಗಳನ್ನು ಬಂಧಿಸುವಂತೆ ಮನವಿ ಮಾಡಿದರು. ಅನಂತರ ಈ ಪ್ರಕರಣದಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್. ಐ. ಆರ್.)ನ್ನು ದಾಖಲಿಸಿ ಆರೋಪಿಗಳ ಶೋಧಕಾರ್ಯವನ್ನು ಆರಂಭಿಸಿದ್ದಾರೆ. ಆದರೂ ೩ ದಿನಗಳ ನಂತರವೂ ಅವರಿಗೆ ಆರೋಪಿಗಳನ್ನು ಹುಡುಕಲು ಸಾಧ್ಯವಾಗಲಿಲ್ಲ.
https://t.co/mtwJYO6wvp via @eNewsBharati
— News Bharati (@eNewsBharati) February 23, 2023
ರಾಜಸ್ಥಾನದಲ್ಲಿನ ಪರಿಸ್ಥಿತಿಯು ಇರಾಕ ಮತ್ತು ಸಿರಿಯಾದಷ್ಟು ಕೆಟ್ಟದಾಗಿದೆ ! – ಭಾಜಪಈ ಘಟನೆಯ ವಿಷಯದಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತ ಭಾಜಪದ ಸಂಸದರಾದ ಅರ್ಜುನ ಲಾಲ ಮೀಣಾರವರು ಮಾತನಾಡುತ್ತ, ಕಾಂಗ್ರೆಸ್ಸಿನ ಆಡಳಿತವಿರುವ ರಾಜಸ್ಥಾನದ ಪರಿಸ್ಥಿತಿಯು ಇರಾಕ ಮತ್ತು ಸಿರಿಯಾದಲ್ಲಿ ಸ್ಥಿತಿಗಿಂತಲೂ ಕೆಟ್ಟದಾಗಿದೆ. ಮುಖ್ಯಮಂತ್ರಿ ಅಶೋಕ ಗೆಹಲೋಟರವರು ಅವಲಂಬಿಸಿರುವ ಓಲೈಕೆಯ ಧೋರಣೆಯಿಂದಾಗಿ ರಾಜಸ್ಥಾನದಲ್ಲಿ ಹಿಂದೂಗಳು ವಾಸಿಸುವುದು ಕಠಿಣವಾಗುತ್ತಿದೆ. ಸಮಾಜಕಂಟಕರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಬೇಕು, ಎಂದು ಹೇಳಿದರು. |
Lord Parashuram idol broken in Udaipur temple, angry villagers block road https://t.co/EbMhDi2M4b
— YET NEWS (@YETNEWS1) February 20, 2023
ಸಂಪಾದಕೀಯ ನಿಲುವು
|