ಕೀರ್ತನಕಾರ ಪೂ. ಸದಾನಂದ ಭಸ್ಮೆ ಮಹಾರಾಜರು ಇವರ ದೇಹತ್ಯಾಗ

ಪೂ. ಸದಾನಂದ ಭಸ್ಮೆ ಮಹಾರಾಜರು

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕು ಅಷ್ಟೇ ಅಲ್ಲದೆ ಬೆಂಗಳೂರು, ಶಿವಮೊಗ್ಗ, ಗೋವಾ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಭಕ್ತಗಣ ಹೊಂದಿದ್ದ ರಾಮಪೂರದ ಶಿವಾನಂದ ಕುಟೀರದ ಸದಾನಂದ ಭಸ್ಮೆ(82) ಮಹಾರಾಜರು ಬುಧವಾರ ಮಧ್ಯಾಹ್ನ ದೇಹತ್ಯಾಗ ಮಾಡಿದರು.

ಇವರು ಕುಬಕಡ್ಡಿಯ ರಂಗರಾವ್ ಮಹಾರಾಜರ ಶಿಷ್ಯರಾಗಿ, ಸತತ 60 ವರ್ಷಗಳಿಂದ ರಾಮಪೂರದಲ್ಲಿ ಶಿವಾನಂದ ಕುಟೀರವನ್ನು ಸ್ಥಾಪಿಸುವ ಮೂಲಕ ರಾಜ್ಯವಷ್ಟೇ ಅಲ್ಲದೆ ಗೋವಾ ರಾಜ್ಯದಲ್ಲಿಯೂ ಸತ್ಸಂಗದ ಕಂಪು ಸೂಸುವಲ್ಲಿ ಕಾರಣರಾಗಿ, ಗೋವಾದಲ್ಲಿರುವ ಸನಾತನ ಸಂಸ್ಥೆಯಿಂದ ಸಂತರೆಮದು ಘೋಷಿಸಲ್ಪಟ್ಟಿದ್ದಾರೆ. ಪಂಢರಪೂರದ ಪಂಡರಿನಾಥನ ಸಾಕಷ್ಟು ಭಕ್ತರ ಮೇಲೆ ಕೃತಿಗಳನ್ನು ರಚಿಸುವ ಮೂಲಕ ಧಾರ್ಮಿಕ ಕೃಷಿ ಮಾಡುವಲ್ಲಿ ನೆಮ್ಮದಿ ಕಂಡು, `ತುಕಾರಾಮ ಚೈತನ್ಯ ಗ್ರಂಥ’ ಹಾಗು `ಚೈತನ್ಯ ಧಾರೆ’ ಎಂಬ ಮಹಾ ಗ್ರಂಥಗಳನ್ನು ಬರೆದ ಕೀರ್ತಿ ಇವರದು.

ಈ ಭಾಗದ ಸಾವಿರಾರು ಜನರಿಗೆ ನಿರಂತರ ಸತ್ಸಂಗದ ಮೂಲಕ ಬದುಕು ಹಸನಾಗಿಸುವಲ್ಲಿ ಯಶಸ್ಸು ಕಂಡು ದಿನಂಪ್ರತಿ ಸಂಜೆ ಹೊತ್ತು ಆಧ್ಯಾತ್ಮ ಹಾಗು ಧಾರ್ಮಿಕತೆ ಕಡೆ ಜನರನ್ನು ಸೆಳೆಯುವಲ್ಲಿ ಯಶಸ್ಸು ಕಂಡವರು ಭಸ್ಮೆ ಮಹಾರಾಜರಾಗಿದ್ದರು.

ಸನಾತನ ಸಂಸ್ಥೆಯ ಇತಿಹಾಸದಲ್ಲಿ ಪ್ರಥಮಬಾರಿ ಕೀರ್ತನಕಾರರನ್ನು ‘ಸಂತ’ರೆಂದು ಘೋಷಿಸಿದ ಆನಂದದ ಕ್ಷಣ !

ರಾಮಪುರದ ಕೀರ್ತನಕಾರರು ಮತ್ತು ರಾಮಭಕ್ತರಾದ ಸದಾನಂದ ಭಸ್ಮೆ ಮಹಾರಾಜರು ೨೫ ನವೆಂಬರ್ ೨೦೨೦ ರಂದು ಸಂತಪದವಿಯಲ್ಲಿ ವಿರಾಜಮಾನರಾದರು. ಇಲ್ಲಿನ ಸನಾತನದ ಆಶ್ರಮದಲ್ಲಿ ಪ.ಪೂ. ದಾಸ ಮಹಾರಾಜರು ಪೂ. ಸದಾನಂದ ಭಸ್ಮೆ ಮಹಾರಾಜರಿಗೆ ಪುಷ್ಪಹಾರ, ಶಾಲು, ಶ್ರೀಫಲ ಮತ್ತು ಉಡುಗೊರೆಗಳನ್ನು ನೀಡಿ ಸನ್ಮಾನ ಮಾಡಿದ್ದರು.

ಅವರ ಗುಣವೈಶಿಷ್ಟ್ಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ :