ರಾಮಪುರದ ಕೀರ್ತನಕಾರ ಹಾಗೂ ರಾಮಭಕ್ತ ಸದಾನಂದ ಭಸ್ಮೆ ಮಹಾರಾಜರು (೭೮ ವರ್ಷ) ಸಂತ ಪದವಿಯಲ್ಲಿ ವಿರಾಜಮಾನ !
ರಾಮನಾಥಿ (ಫೋಂಡಾ, ಗೋವಾ) – ರಾಮಪುರದ ಕೀರ್ತನಕಾರರು ಮತ್ತು ರಾಮಭಕ್ತರಾದ ಸದಾನಂದ ಭಸ್ಮೆ ಮಹಾರಾಜರು ೨೫ ನವೆಂಬರ್ ೨೦೨೦ ರಂದು ಸಂತಪದವಿಯಲ್ಲಿ ವಿರಾಜಮಾನರಾದರು. ಇಲ್ಲಿನ ಸನಾತನದ ಆಶ್ರಮದಲ್ಲಿ ಪ.ಪೂ. ದಾಸ ಮಹಾರಾಜರು ಪೂ. ಸದಾನಂದ ಭಸ್ಮೆ ಮಹಾರಾಜರಿಗೆ ಪುಷ್ಪಹಾರ, ಶಾಲು, ಶ್ರೀಫಲ ಮತ್ತು ಉಡುಗೊರೆಗಳನ್ನು ನೀಡಿ ಸನ್ಮಾನ ಮಾಡಿದರು. ತೀವ್ರ ಶಾರೀರಿಕ ತೊಂದರೆಯಿದ್ದರೂ ಪರಾತ್ಪರ ಗುರು ಡಾ. ಆಠವಲೆಯವರು ಪೂ. ಭಸ್ಮೆ ಮಹಾರಾಜರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು. ಈ ಸಮಯದಲ್ಲಿ ಪೂ. ಭಸ್ಮೆ ಮಹಾರಾಜರ ಶಿಷ್ಯರಾದ ಸರ್ವಶ್ರೀ ಶಿವಾನಂದ, ಶ್ರೀರಂಗ, ಶಂಕರ, ಪ್ರಹ್ಲಾದ ಮುಂತಾದವರು ಉಪಸ್ಥಿತರಿದ್ದರು. ಈ ಪ್ರಸಂಗದಲ್ಲಿ ಪೂ. ಭಸ್ಮೆ ಮಹಾರಾಜರ ಶಿಷ್ಯರು ಅವರ ಗುಣವೈಶಿಷ್ಟ್ಯಗಳನ್ನು ಹೇಳಿದರು.
ಸಂತ ಸಹವಾಸದಿಂದ ನಮ್ಮ ಉದ್ಧಾರವಾಗುತ್ತದೆ ! – ಪೂ. ಸದಾನಂದ ಭಸ್ಮೆ ಮಹಾರಾಜರು
ಗುರುದೇವರು (ಪರಾತ್ಪರ ಗುರು ಡಾ. ಆಠವಲೆಯವರು) ವಿಶ್ವದಲ್ಲಿ ಬಹುದೊಡ್ಡ ಕಾರ್ಯವನ್ನು ಮಾಡುತ್ತಿದ್ದಾರೆ. ಇಂದಿನ ದಿನವು ನನ್ನ ಜೀವನವನ್ನು ಧನ್ಯ ಮಾಡಿತು, ಏಕೆಂದರೆ ಇಂದು ನನಗೆ ಸಂತರ ದರ್ಶನವಾಯಿತು, ಇದು ನನ್ನ ಭಾಗ್ಯವೇ ಆಗಿದೆ. ಈ ಕ್ಷಣವು ಹಬ್ಬದಂತಿದೆ; ಏಕೆಂದರೆ ಸಂತಸಹವಾಸ ದೊರಕುವುದು ಬಹಳ ದುರ್ಲಭ ಮತ್ತು ಅಮೂಲ್ಯವಾಗಿರುತ್ತದೆ. ಇಂತಹ ಕ್ಷಣಗಳಿಂದಲೇ ನಮ್ಮ ಉದ್ಧಾರವಾಗುತ್ತದೆ. ಯಾವ ರೀತಿ ಸ್ಪಶ (ಪಾರೀಸ) ಮಣಿ ಕಬ್ಬಿಣವನ್ನು ಸ್ಪರ್ಶಿಸಿದಾಗ ಕಬ್ಬಿಣವು ಬಂಗಾರವಾಗುತ್ತದೋ, ಅದೇ ರೀತಿ ನನ್ನದಾಯಿತು. ಸನಾತನ ಸಂಸ್ಥೆಯು ಮಾಡುತ್ತಿರುವ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ನಮ್ಮ ಸಹಭಾಗವಿರುವುದು, ಹಾಗೆಯೇ ರಾಮರಾಜ್ಯವು ಬೇಗನೇ ಬರುವುದು, ಎಂದು ಪೂ. ಸದಾನಂದ ಭಸ್ಮೆ ಮಹಾರಾಜರು ಉದ್ಗರಿಸಿದರು.
೩೦ ಸಾವಿರ ಕೋಟಿ ನಾಮಜಪವನ್ನು ಮಾಡಿದ ಪೂ. ಭಸ್ಮೆ ಮಹಾರಾಜರು ಅದ್ವಿತೀಯರು ! – ಪ.ಪೂ. ದಾಸ ಮಹಾರಾಜರು
ಇಂದಿನವರೆಗೆ ಇತಿಹಾಸದಲ್ಲಿ ೩೦ ಸಾವಿರ ಕೋಟಿ ನಾಮಜಪವನ್ನು ಯಾರೂ ಮಾಡಿಲ್ಲ. ಹೀಗೆ ಮಾಡುವ ಪೂ. ಭಸ್ಮೆ ಮಹಾರಾಜರು ಏಕೈಕರಾಗಿದ್ದಾರೆ. ಇಷ್ಟು ಪ್ರಮಾಣದಲ್ಲಿ ನಾಮಜಪವನ್ನು ಮಾಡುವ ಪೂ. ಭಸ್ಮೆ ಮಹಾರಾಜರು ಸ್ವತಃ ಅವತಾರವೇ ಆಗಿದ್ದಾರೆ. ಪ.ಪೂ. ದಾಸ ಮಹಾರಾಜರು ಶಿಷ್ಯರಿಗೆ ಮಾಡಿದ ಮಾರ್ಗದರ್ಶನ ‘ಹೇಗೆ ವಾನರ ಸೇನೆಯು ಪ್ರಭು ಶ್ರೀರಾಮನ ಧರ್ಮಧ್ವಜ ವನ್ನು ಕೈಯಲ್ಲಿ ಹಿಡಿದಿತ್ತೋ, ಹಾಗೆಯೇ ನಾವೆಲ್ಲ ಶಿಷ್ಯರೂ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಬೇಕು, ಎಂದು ಪ.ಪೂ. ದಾಸ ಮಹಾರಾಜರು ಪೂ. ಭಸ್ಮೆ ಮಹಾರಾಜರ ಶಿಷ್ಯರಿಗೆ ಮಾರ್ಗದರ್ಶನವನ್ನು ಮಾಡಿದರು. ಆಗ ಪೂ. ಭಸ್ಮೆ ಮಹಾರಾಜರು ಮತ್ತು ಅವರ ಶಿಷ್ಯರು ‘ನಾವು ಪ್ರಭು ಶ್ರೀರಾಮನಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿ ಬರುವ ಅಡಚಣೆಗಳನ್ನು ಮತ್ತು ಸಾಧಕರ ತೊಂದರೆಗಳನ್ನು ದೂರ ಮಾಡಲು ಪ್ರಾರ್ಥನೆಯನ್ನು ಮಾಡುವೆವು’, ಎಂದು ಹೇಳಿದರು.
ಗಮನಾರ್ಹ ಅಂಶಗಳು : ಪೂ. ಭಸ್ಮೆ ಮಹಾರಾಜರನ್ನು ಸಂತರೆಂದು ಸನ್ಮಾನಿಸಿದ ನಂತರ ವಾತಾವರಣದಲ್ಲಿ ಸೂಕ್ಷ್ಮ ಸುಗಂಧ ಹರಡಿತು. ಮಹಾರಾಜರ ಭಕ್ತರೂ ಇದರ ಅನುಭೂತಿಯನ್ನು ಪಡೆದರು.
ಸಂತಪದವಿಯನ್ನು ಘೋಷಿಸಿದ ನಂತರ ಪೂ. ಭಸ್ಮೆ ಮಹಾರಾಜರ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ೪೧ ಮೀಟರ್ ೫೦ ಸೆಂ.ಮೀ. ನಷ್ಟು ಹೆಚ್ಚಳವಾಯಿತು !
ಪೂ. ಭಸ್ಮೆ ಮಹಾರಾಜರ ಸಂತಪದವಿಯನ್ನು ಘೋಷಿಸುವ ಮೊದಲು ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಮೂಲಕ ಅವರ ಪ್ರಭಾವಳಿಯ ನೋಂದಣಿಯನ್ನು ಮಾಡಿದಾಗ ಅವರಲ್ಲಿ ನಕಾರಾತ್ಮಕ ಊರ್ಜೆ ಇರಲಿಲ್ಲ ಮತ್ತು ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ೨೯.೮೦ ಮೀಟರ್‌ನಷ್ಟಿತ್ತು. ಪೂ. ಭಸ್ಮೆ ಮಹಾರಾಜರ ಸಂತಪದವಿಯನ್ನು ಘೋಷಿಸಿದ ನಂತರ ಅವರ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ೭೧.೩೦ ಮೀಟರ್‌ನಷ್ಟಾಯಿತು; ಅಂದರೆ ಮೊದಲಿಗಿಂತ ೪೧ ಮೀಟರ್ ೫೦ ಸೆಂ.ಮೀಟರ್‌ನಷ್ಟು ಹೆಚ್ಚಾಯಿತು.’
ಪೂ. ಸದಾನಂದ ಭಸ್ಮೆ ಮಹಾರಾಜರಿಗೆ ಉಡುಗೊರೆಗಳನ್ನು ನೀಡಿ ಸನ್ಮಾನ ಮಾಡುತ್ತಿರುವ ಪ.ಪೂ. ದಾಸ ಮಹಾರಾಜರು
ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಮತ್ತು ಸಾಧಕರ ತೊಂದರೆಗಳು ದೂರವಾಗಬೇಕೆಂದು ಪೂ. ಭಸ್ಮೆ ಮಹಾರಾಜರ ಚರಣಗಳಲ್ಲಿ ಪಾರ್ಥಿಸುವ ಪ.ಪೂ. ದಾಸ ಮಹಾರಾಜರು !
‘ಸನಾತನ ಸಂಸ್ಥೆಯು ಹಿಂದೂ ರಾಷ್ಟ್ರದ ಸ್ಥಾಪನೆ ಮತ್ತು ಧರ್ಮಜಾಗೃತಿಯ ಕಾರ್ಯವನ್ನು ಮಾಡುತ್ತಿದೆ. ಅದರಲ್ಲಿ ನೀವು ಸನಾತನದ ಗ್ರಂಥಗಳು, ಪಂಚಾಂಗ ಮುಂತಾದವುಗಳ ವಿತರಣೆ ಮಾಡುವುದರೊಂದಿಗೆ ವಿವಿಧ ರೀತಿಯಲ್ಲಿ ಪಾಲ್ಗೊಳ್ಳಿರಿ. ಸನಾತನದ ಸಾಧಕರಿಗಾಗುವ ತೊಂದರೆಗಳು, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಬರುವ ಅಡಚಣೆಗಳನ್ನು ದೂರ ಮಾಡಲು ಪ್ರಭು ಶ್ರೀರಾಮನಲ್ಲಿ ಪ್ರಾರ್ಥನೆಯನ್ನು ಮಾಡಿರಿ, ಎಂದು ತಮ್ಮ (ಪೂ. ಭಸ್ಮೆ ಮಹಾರಾಜರ) ಚರಣಗಳಲ್ಲಿ ಪ್ರಾರ್ಥನೆಯಾಗಿದೆ. ನೀವು ಸಾಧಕರಿಗೆ ಶಕ್ತಿಯನ್ನು ಪ್ರದಾನಿಸಿರಿ’, ಎಂದು ಪ.ಪೂ. ದಾಸ ಮಹಾರಾಜರು ಪೂ. ಭಸ್ಮೆ ಮಹಾರಾಜರ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡಿದರು.
ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ
‘ಇಲ್ಲಿಯವರೆಗೆ ನಾವು ಕೀರ್ತನಕಾರರಾದ ಸದಾನಂದ ಭಸ್ಮೆ ಮಹಾರಾಜರನ್ನು ‘ಕೀರ್ತನಕಾರ’ರೆಂದು ಗುರುತಿಸುತ್ತಿದ್ದೆವು. ಇಂದಿನಿಂದ ನಾವು ಅವರನ್ನು ‘ಸಂತ ಭಸ್ಮೆ ಮಹಾರಾಜರು ಎಂದು ಹೇಳಲಿದ್ದೇವೆ. ಈ ಘಟನೆಯು ಸನಾತನ ಸಂಸ್ಥೆಯ ಇತಿಹಾಸದಲ್ಲಿಯೇ ಪ್ರಥಮಬಾರಿ ಓರ್ವ ಕೀರ್ತನ ಕಾರರನ್ನು ‘ಸಂತ’ರೆಂದು ಘೋಷಿಸಿದ ಮೊದಲ ಅದ್ವಿತೀಯ ಕ್ಷಣವಾಗಿದೆ.’ – (ಪರಾತ್ಪರ ಗುರು) ಡಾ. ಆಠವಲೆ
ಪೂ. ಸದಾನಂದ ಭಸ್ಮೆ ಮಹಾರಾಜರ ಪರಿಚಯ
‘ರಾಮಪುರದ (ಕರ್ನಾಟಕ) ಕೀರ್ತನಕಾರರಾದ ಪೂ. ಸದಾನಂದ ಭಸ್ಮೆ ಮಹಾರಾಜರು ಸಂತ ತುಕಾರಾಮ ಮಹಾರಾಜರ ಅಂತರಂಗದ ಭಕ್ತರಾಗಿದ್ದಾರೆ. ಸಂತ ತುಕಾರಾಮ ಮಹಾರಾಜರು ಸೂಕ್ಷ್ಮದಿಂದ ನೀಡಿದ ಜ್ಞಾನದ ಮೂಲಕ ಪೂ. ಭಸ್ಮೆ ಮಹಾರಾಜರು ೬ ವರ್ಷಗಳಲ್ಲಿ ‘ತುಕಾರಾಮ ಚೈತನ್ಯ’ ಎಂಬ ಹೆಸರಿನ ಕನ್ನಡ ಭಾಷೆಯ ಗ್ರಂಥವನ್ನು ಬರೆದರು. ಪೂ. ಭಸ್ಮೆ ಮಹಾರಾಜರಿಗೆ ಸ್ವಾಮಿ ರಂಗರಾವ ಮಹಾರಾಜರು ‘ಗುರು’ ಎಂದು ಲಭಿಸಿದರು. ಅವರು ಚಿಕ್ಕ ವಯಸ್ಸಿನಿಂದಲೇ ಮೃದಂಗ, ತಬಲಾ, ಸಂವಾದಿನಿಗಳನ್ನು ಬಾರಿಸುತ್ತಾರೆ, ಈ ಕಲೆಗಳು ಅವರಲ್ಲಿ ಜನ್ಮದಿಂದಲೇ ಬಂದಿವೆ. ಅವರು ಹೇಳಿದಂತೆ ಪೂ. ಭಸ್ಮೆ ಮಹಾರಾಜರು ರಾಮನಾಮದ ಅಖಂಡ ಜಪ ಮಾಡುತ್ತಾರೆ, ಹಾಗೆಯೇ ಅವರು ಊರೂರುಗಳಲ್ಲಿ ದಾಸಬೋಧದೊಂದಿಗೆ ಇತರ ಆಧ್ಯಾತ್ಮಿಕ ವಿಷಯಗಳ ಕುರಿತು ಪ್ರವಚನಗಳನ್ನು ನೀಡುತ್ತಾರೆ. ಅವರು ತಮ್ಮ ಶಿಷ್ಯ ವೃಂದದೊಂದಿಗೆ ಇಲ್ಲಿಯವರೆಗೆ ೩೦ ಸಾವಿರ ಕೋಟಿ ರಾಮನಾಮದ ಜಪವನ್ನು ಮಾಡಿದ್ದಾರೆ.’
ಸನಾತನ ಆಶ್ರಮದ ಬಗ್ಗೆ ಪೂ. ಭಸ್ಮೆ ಮಹಾರಾಜರ ಶಿಷ್ಯರು ತೆಗೆದ ಗೌರವೋದ್ಗಾರ
‘ರಾಮನಾಥಿಯ ಆಶ್ರಮದಲ್ಲಿ ಸಾಧಕರ ಜೀವನಶೈಲಿಯು ಸದಾಚಾರಿಯಾಗಿದೆ, ಹಾಗೆಯೇ ಆಶ್ರಮದಲ್ಲಿ ಶಿಸ್ತಿದೆ. ಇದರೊಂದಿಗೆ ಇಲ್ಲಿನ ಸಾಧಕರು ರಾಮರಾಜ್ಯವನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಜೀವನಶೈಲಿಯನ್ನು ನಾವು ಇತರ ಯಾವುದೇ ಆಶ್ರಮದಲ್ಲಿ ನೋಡಿಲ್ಲ. ನಾವು ನಮ್ಮೆಲ್ಲ ಭಕ್ತರಿಗೆ ರಾಮರಾಜ್ಯವು ಬರಬೇಕೆಂದು ಪ್ರಾರ್ಥನೆ ಮಾಡಲು ಹೇಳುವೆವು, ಹಾಗೆಯೇ ಅದಕ್ಕಾಗಿ ಪ್ರಯತ್ನಿಸುವೆವು.’
– ಶ್ರೀ. ಶಿವಾನಂದ, ರಾಮಪೂರ, ಕರ್ನಾಟಕ