ಪೂ. ಭಸ್ಮೆ ಮಹಾರಾಜರ ಬಗ್ಗೆ ಅವರ ಶಿಷ್ಯರು ಹೇಳಿದ ಗುಣವೈಶಿಷ್ಟ್ಯಗಳು

ಶಿಷ್ಯ ಶ್ರೀ. ಶಿವಾನಂದ

ಪೂ. ಭಸ್ಮೆ ಮಹಾರಾಜರು

೧. ಸರಳ ಜೀವನಶೈಲಿ ಮತ್ತು ಚಿಕ್ಕಂದಿನಿಂದಲೇ ಭಕ್ತಿಯ ಒಲವು

‘ಪೂ. ಭಸ್ಮೆ ಮಹಾರಾಜರ ಜೀವನಶೈಲಿ ಮತ್ತು ಉಡುಗೆತೊಡುಗೆ ಅತ್ಯಂತ ಸರಳವಾಗಿದೆ. ಅವರು ಜನಿಸುವ ಮೊದಲೇ ಅವರ ತಾಯಿ ಅನುಸೂಯಾ ಮತ್ತು ಅವರ ತಂದೆ ರಘುನಾಥ ಇವರಿಗೆ ಅವರ ಗುರುಗಳು, ‘ನಿಮಗೆ ಒಬ್ಬ ಮಗನು ಹುಟ್ಟುವನು, ಅವನು ಪಲ್ಲಕ್ಕಿಯನ್ನು ನಡೆಸುವನು’, ಎಂದು ಹೇಳಿದ್ದರು. ಆ ಸಮಯದಲ್ಲಿ ಅವರ ಆರ್ಥಿಕ ಸ್ಥಿತಿಯು ಚೆನ್ನಾಗಿರಲಿಲ್ಲ; ಆದರೆ ಭಕ್ತಿಯೇ ಜೀವನದ ಅಂಗವಾಗಿತ್ತು. ಮಹಾರಾಜರು ಚಿಕ್ಕಂದಿನಿಂದಲೇ ಶಾಲೆಯಲ್ಲಿ ಸ್ನೇಹಿತರಿಗೆ ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದರು, ಇದರಿಂದ ಅವರ ಭಕ್ತಿಯು ಕಂಡು ಬರುತ್ತದೆ. ಆ ಸಮಯದಲ್ಲಿ ಅವರ ಶಿಕ್ಷಕರು, ಇವನು (ಪೂ. ಭಸ್ಮೆ ಮಹಾರಾಜರು) ಎಲ್ಲ ಮಕ್ಕಳನ್ನು ಸಾಧುಗಳನ್ನಾಗಿ ಮಾಡುವನು, ಎಂದು ಹೇಳುತ್ತಿದ್ದರು.

ಶ್ರೀ. ರಾಮ ಹೊನಪ

೨. ಗುರುಭೇಟಿಯ ತಳಮಳ

ಅತ್ಯಂತ ಬಡತನದ ಪರಿಸ್ಥಿತಿಯಲ್ಲಿ ಪೂ. ಭಸ್ಮೆ ಮಹಾರಾಜರು ತಮ್ಮ ಸಹೋದರನೊಂದಿಗೆ ಇಚಲಕರಂಜಿಗೆ (ಜಿಲ್ಲಾ ಕೊಲ್ಹಾಪುರ) ಹೋಗಿ ಒಂದು ವ್ಯವಸಾಯವನ್ನು ಪ್ರಾರಂಭಿಸಿದರು; ಆದರೆ ಅದರಲ್ಲಿ ಅವರಿಗೆ ಯಶಸ್ಸು ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ವಿಜಾಪುರದ ಸ್ವಾಮಿ ರಂಗರಾವ ಮಹಾರಾಜರಿಗೆ ಪೂ. ಭಸ್ಮೆ ಮಹಾರಾಜರು ಒಂದು ಪತ್ರವನ್ನು ಬರೆದು ತಮ್ಮ ಸ್ಥಿತಿಯನ್ನು ತಿಳಿಸಿದ್ದರು. ಆ ಪತ್ರದ ಬಗ್ಗೆ ಸ್ವಾಮಿ ರಂಗರಾವ ಮಹಾರಾಜರಿಗೆ ಸೂಕ್ಷ್ಮದಿಂದ ಮೊದಲೇ ತಿಳಿದಿತ್ತು ಮತ್ತು ಮಹಾರಾಜರು ಪೂ. ಭಸ್ಮೆ ಮಹಾರಾಜರಿಗೆ ಪತ್ರ ಕಳುಹಿಸಿ ವಿಜಾಪುರಕ್ಕೆ ಕರೆಯಿಸಿಕೊಂಡರು. ಮಹಾರಾಜರು ಕಳುಹಿಸಿದ ಪತ್ರವನ್ನು ಓದಿ ಅವರ ತಳಮಳವು ಜಾಗೃತವಾಯಿತು ಮತ್ತು ಅದರ ನಂತರ ಅವರು ಮತ್ತು ಅವರ ಸಹೋದರ ಇವರಿಬ್ಬರೂ ಸೈಕಲ್‌ನಿಂದ ಇಚಲಕರಂಜಿಯಿಂದ ವಿಜಾಪುರದ ವರೆಗೆ ಪ್ರವಾಸ ಮಾಡಿ ಮಹಾರಾಜರನ್ನು ಭೇಟಿಯಾದರು. ಇದರಿಂದ ಪೂ. ಭಸ್ಮೆ ಮಹಾರಾಜರ ಗುರುಭೇಟಿಯ ತಳಮಳವು ಕಂಡುಬರುತ್ತದೆ.

೩. ಸಂತ ತುಕಾರಾಮ ಮಹಾರಾಜರ ಚರಿತ್ರೆಯನ್ನು ಬರೆಯುವ ತಳಮಳ

ಪೂ. ಭಸ್ಮೆ ಮಹಾರಾಜರು ಸಂತ ತುಕಾರಾಮ ಮಹಾರಾಜರ ಚರಿತ್ರೆಯನ್ನು ಬರೆಯಲು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅವರ ಬಗ್ಗೆ ಲಭ್ಯವಿರುವ ಅನೇಕ ಚರಿತ್ರೆಗಳನ್ನು ಮತ್ತು ಅಭಂಗಗಳನ್ನು ೬ ವರ್ಷಗಳ ಕಾಲ ಅಧ್ಯಯನ ಮಾಡಿದರು. ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿರಾಜೆ ಇವರು ಮಾಡಿದ ಸಂಘರ್ಷ, ಅವರ ಕೊನೆಯ ಕ್ಷಣಗಳು ಈ ಎಲ್ಲ ವಿಷಯಗಳ ಬಗ್ಗೆಯೂ ಅದರಲ್ಲಿ ವಿಸ್ತಾರವಾಗಿ ಕೊಡಲಾಗಿದೆ.

೪. ಸ್ವಾಮಿ ರಂಗರಾವ ಮಹಾರಾಜರ ಜೀವನಚರಿತ್ರೆಯನ್ನು ದಾಸಬೋಧದ ಆಧಾರದಲ್ಲಿ ಭಾವಪೂರ್ಣವಾಗಿ ಬರೆಯುವುದು

ಪೂ. ಭಸ್ಮೆ ಮಹಾರಾಜರು ತಮ್ಮ ಗುರುಗಳಾದ ಸ್ವಾಮಿ ರಂಗರಾವ ಮಹಾರಾಜರ ಜೀವನಚರಿತ್ರೆಯನ್ನು ಬರೆದರು. ಅದಕ್ಕಾಗಿ ಅವರು ಬೇರೆ ಬೇರೆ ಸ್ಥಳಗಳಲ್ಲಿದ್ದ ಶಿಷ್ಯರನ್ನು ಭೇಟಿಯಾಗಿ ಗುರುಗಳ ಮಾಹಿತಿಯನ್ನು ಸಂಗ್ರಹಿಸಿದರು. ಅವರ ಜೀವನಚರಿತ್ರೆಯನ್ನು ದಾಸಬೋಧದ ಆಧಾರದಲ್ಲಿ ಸಿದ್ಧಪಡಿಸಿದರು. ಆ ಜೀವನಚರಿತ್ರೆಯನ್ನು ಓದಿ ಅನೇಕರ ಭಾವಜಾಗೃತಿಯಾಗುತ್ತದೆ. ಅನೇಕರಿಗೆ ಈ ಚರಿತ್ರೆಯನ್ನು ಓದಿ ಪ್ರತ್ಯಕ್ಷ ಸ್ವಾಮಿ ರಂಗರಾವ ಮಹಾರಾಜರನ್ನು ಅನುಭವಿಸಿದಂತಾಗುತ್ತದೆ. ಕರ್ನಾಟಕದ ಸಂತರಾದ ಸ್ವಾಮಿ ವಿರಜಾನಂದರಿಗೆ ಅವರ ಓರ್ವ ಭಕ್ತರು ಈ ಚರಿತ್ರೆಯ ಗ್ರಂಥವನ್ನು ನೀಡಿದರು, ಆಗ ಅವರು ಅದನ್ನು ಸಂಪೂರ್ಣ ಓದಿದ ನಂತರವೇ ಬದಿಗಿಟ್ಟರು. ಆ ಗ್ರಂಥವನ್ನು ಓದಿದ ಮೇಲೆ ಸ್ವಾಮಿ ವಿರಜಾನಂದರು ತಾವಾಗಿಯೇ ಪೂ. ಭಸ್ಮೆ ಮಹಾರಾಜರನ್ನು ಭೇಟಿಯಾಗಲು ರಾಮಪುರಕ್ಕೆ ಬಂದು ಅವರನ್ನು ಆಲಂಗಿಸಿದರು.

ಅವರ ಇನ್ನೋರ್ವ ಭಕ್ತ ಶ್ರೀ. ಶ್ರೀರಂಗ ಇವರು ಹೇಳಿದ ಪೂ. ಭಸ್ಮೆ ಮಹಾರಾಜರ ತಾಯಿ-ತಂದೆ ಮತ್ತು ಅಜ್ಜನವರ ಆಧ್ಯಾತ್ಮಿಕ ವೈಶಿಷ್ಟ್ಯಗಳು

೧. ಅಂತ್ಯಸಮಯದಲ್ಲಿ ನಾಮಜಪ ಮಾಡುವ ಪೂ. ಭಸ್ಮೆ ಮಹಾರಾಜರ ತಾಯಿ !

‘ಪೂ. ಭಸ್ಮೆ ಮಹಾರಾಜರ ತಾಯಿ-ತಂದೆ ರಾಮಭಕ್ತರಾಗಿದ್ದರು. ಅವರ ತಾಯಿ ಮನಃಪೂರ್ವಕ ರಾಮನಾಮವನ್ನು ಜಪಿಸುತ್ತಿದ್ದರು. ತಾಯಿಯ ಅಂತ್ಯಸಮಯದಲ್ಲಿಯೂ ಅವರ ನಾಮಜಪವು ನಡೆದಿತ್ತು. ತಾಯಿಯ ದೇಹತ್ಯಾಗದ ನಂತರ ಪೂ. ಭಸ್ಮೆ ಮಹಾರಾಜರು ಎಲ್ಲರಿಗೂ, ‘ಎಲ್ಲರೂ ದುಃಖಪಡದೇ ಅವರ ಬಾಯಿಯಲ್ಲಿ ಗಂಗಾಜಲವನ್ನು ಹಾಕೋಣ’, ಎಂದು ಹೇಳಿದರು.

೨. ಪೂ. ಭಸ್ಮೆ ಮಹಾರಾಜರ ಅಜ್ಜನವರ ದೇಹತ್ಯಾಗದ ನಂತರವೂ ಅವರ ಕೈಯಲ್ಲಿದ್ದ ಮಾಲೆಯಲ್ಲಿ ಮಣಿಗಳು ಮುಂದೆ ಮುಂದೆ ಸರಿಯುವುದು

ಪೂ. ಭಸ್ಮೆ ಮಹಾರಾಜರ ಅಜ್ಜನವರು ದೇಹತ್ಯಾಗದ ದಿನ, ‘ನಾನು ರಾತ್ರಿ ೧೦.೧೫ ಗಂಟೆಗೆ ದೇಹತ್ಯಾಗವನ್ನು ಮಾಡುವವನಿದ್ದೇನೆ’, ಎಂದು ಹೇಳಿದ್ದರು. ಅದಕ್ಕನುಸಾರ ಅವರ ಪ್ರಾಣ ಹೋದ ನಂತರ ಅವರ ಕೈಯಲ್ಲಿದ್ದ ಜಪಮಾಲೆಯಲ್ಲಿ ಮಣಿಗಳು ತನ್ನಿಂದ ತಾನೆ ಮುಂದೆ ಮುಂದೆ ಸರಿಯುತ್ತಿದ್ದವು. ಆ ಸಮಯದಲ್ಲಿ ಪೂ. ಭಸ್ಮೆ ಮಹಾರಾಜರು, ಅವರ ನಾಮಜಪವು ಒಳಗಿನಿಂದ ನಡೆಯುತ್ತಿದೆ’, ಎಂದು ಹೇಳಿದರು. ಆಧುನಿಕ ವೈದ್ಯರೂ ಅಜ್ಜನವರ ಪಾರ್ಥಿವದ ಕೈಯಲ್ಲಿದ್ದ ಜಪಮಾಲೆಯು ಮುಂದೆ ಸರಿಯುವುದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು.’

ಪೂ. ಭಸ್ಮೆ ಮಹಾರಾಜರ ಬಗ್ಗೆ ಸನಾತನದ ಸಾಧಕರಾದ ಶ್ರೀ. ರಾಮ ಹೊನಪ ಇವರಿಗೆ ಅರಿವಾದ ಗುಣವೈಶಿಷ್ಟ್ಯಗಳು

೧. ‘ಪೂ. ಭಸ್ಮೆ ಮಹಾರಾಜರ ದರ್ಶನಕ್ಕಾಗಿ ಹೋದಾಗ ನಾನು ಅವರ ಪಕ್ಕದಲ್ಲಿ ಕುಳಿತಿದ್ದೆ. ಆಗ ನನಗೆ ಅವರಿಂದ ಚೈತನ್ಯ ಬರುವುದರ ಅರಿವಾಯಿತು. ಆ ಸಮಯದಲ್ಲಿ ನನ್ನಿಂದ ತಾನಾಗಿಯೇ ನಾಮಜಪವಾಗುತ್ತಿತ್ತು.

೨. ಸಾಧನೆಯನ್ನು ಮಾಡುವಾಗ ಮನಸ್ಸನ್ನು ಶಾಂತವಾಗಿಡಲು ಮತ್ತು ಅಂತರ್ಮುಖತೆಯನ್ನು ಸಾಧಿಸಲು ಪ್ರಯತ್ನಿಸಬೇಕಾಗುತ್ತದೆ; ಆದರೆ ಪೂ. ಭಸ್ಮೆ ಮಹಾರಾಜರ ಸಹವಾಸದಿಂದಲೇ ಮನಸ್ಸು ಶಾಂತ ವಾಗಿರುವುದರ ಮತ್ತು ಅಂತರ್ಮುಖತೆಯ ಅನುಭೂತಿಗಳು ಬಂದವು.

೩. ಸಮರ್ಥ ರಾಮದಾಸಸ್ವಾಮಿಗಳು ತಮ್ಮ ಲೇಖನದಲ್ಲಿ, ೧೩ ಕೋಟಿ ನಾಮಜಪವನ್ನು ಮಾಡಿದ ಮೇಲೆ ಪ್ರಭು ಶ್ರೀರಾಮನ ದರ್ಶನವಾಗುತ್ತದೆ, ಎಂದು ಬರೆದಿದ್ದಾರೆ. ಪೂ. ಭಸ್ಮೆ ಮಹಾರಾಜರು ಭಕ್ತರೊಂದಿಗೆ ೩೦ ಸಾವಿರ ಕೋಟಿ ನಾಮಜಪವನ್ನು ಮಾಡಿದ್ದಾರೆ ಮತ್ತು ಅವರು ಅಖಂಡ ರಾಮನ ಅನುಸಂಧಾನದಲ್ಲಿರುತ್ತಾರೆ. ಅವರಿಗೆ ಈಗ ಎಲ್ಲೆಡೆ ಪ್ರಭು ಶ್ರೀರಾಮರೇ ಕಾಣಿಸುತ್ತಾರೆ.

೪. ಪೂ. ಭಸ್ಮೆ ಮಹಾರಾಜರು ಸ್ವತಃ ಸಾಧನೆಯನ್ನು ಮಾಡುತ್ತಾರೆ ಮತ್ತು ಅಧ್ಯಾತ್ಮವನ್ನು ಜೀವಿಸುತ್ತಾರೆ. ಅವರು ಭಕ್ತರಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಾರೆ. ಅವರು ಪ್ರಸಿದ್ಧಿಯಿಂದ ದೂರವಿರುತ್ತಾರೆ.’

– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಹಿಂದೂ ರಾಷ್ಟ್ರವನ್ನು ತರುವುದರ ಬಗ್ಗೆ ಪೂ. ಭಸ್ಮೆ ಮಹಾರಾಜರಿಗಿರುವ ತಳಮಳ

‘ಪೂ. ಭಸ್ಮೆ ಮಹಾರಾಜರು, ಪರಾತ್ಪರ ಗುರು ಡಾ. ಆಠವಲೆಯವರು ಶ್ರೀರಾಮಸ್ವರೂಪರಾಗಿದ್ದಾರೆ ಎಂದು ಹೇಳಿದರು. ಮಹಾರಾಜರಿಗೆ ಸಂಸ್ಥೆಯ ಕಾರ್ಯದ ಬಗ್ಗೆ ತಿಳಿದಾಗ ಅವರು, ‘ನಾನು ಊರೂರುಗಳಿಗೆ ಹೋಗಿ ಹಿಂದೂ ರಾಷ್ಟ್ರದ ಕುರಿತು ಹೇಳುವೆನು. ನನ್ನಲ್ಲಿ ಅಷ್ಟು ಶಕ್ತಿ ಇಲ್ಲ; ಆದರೂ ನಾನು ಪ್ರಯತ್ನಿಸುವೆನು, ಎಂದು ಹೇಳಿದರು.

– ಶ್ರೀ. ಸೋಮನಾಥ ಮಲ್ಯಾ, ಸನಾತನದ ಸಾಧಕ