ಪಾಕಿಸ್ತಾನ ಚೀನಾದಿಂದ ಖರೀದಿಸಿರುವ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಯಾಸ್ತ್ರಗಳು ನಿಷ್ಪರಿಣಾಮಕಾರಿ !

ನವ ದೆಹಲಿ – ಪಾಕಿಸ್ತಾನ ಚೀನಾದೀಂದ ಮಾನವರಹಿತ ಉಪಯೋಗಿಸುವ ಶಸ್ತ್ರಾಸ್ತ್ರಗಳನ್ನು ಮತ್ತು ಕ್ಷಿಪಣಿಯಾಸ್ತ್ರಗಳನ್ನು ಖರೀದಿಸಿತ್ತು. ಅದರಲ್ಲಿರುವ ಅನೇಕ ಉಪಕರಣಗಳು ತುಂಡಾಗಿದ್ದು, ಅನೇಕ ಬೆಲೆಬಾಳುವ ಮಹತ್ವದ ಉಪಕರಣಗಳು ದೋಷಪೂರಿತವಾಗಿರುವುದು ಕಂಡು ಬಂದಿದೆ. `ಚೀನಾಗೆ ದೊಡ್ಡ ಬೆಲೆ ತೆತ್ತು ಖರೀದಿಸಿರುವ ಶಸ್ತ್ರಾಸ್ತ್ರಗಳು ನಿರುಪಯುಕ್ತವಾಗಿರುವುದರಿಂದ ನಮಗೆ ದೊಡ್ಡ ಆಘಾತವಾಗಿದೆ’’, ಎಂದು ಪಾಕಿಸ್ತಾನ ಸೈನ್ಯ ಹೇಳಿದೆ. ಈಗ ಪಾಕಿಸ್ತಾನಿ ಸೈನ್ಯವು ಎಲ್ಲ ಶಸ್ತ್ರಾಸ್ತ್ರಗಳನ್ನು ಮತ್ತು ಕ್ಷಿಪಣಿಗಳನ್ನು ದುರಸ್ತಿಗೊಳಿಸುವ ಅಥವಾ ಬದಲಾಯಿಸಿ ಕೊಡುವಂತೆ ಕೋರಿದೆ. `ಚೀನಾ ನಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳದಿದ್ದರೆ ನಮಗೆ ಇನ್ನುಮುಂದೆ ಪಾಶ್ಚಿಮಾತ್ಯ ದೇಶದಿಂದ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಬೇಕಾಗುವುದು’ ಎಂದೂ ಪಾಕಿಸ್ತಾನ ಸ್ಪಷ್ಟಗೊಳಿಸಿದೆ.

1. ಪಾಕಿಸ್ತಾನಕ್ಕೆ ನೀಡಲಾಗಿರುವ ಈ ಶಸ್ತ್ರಾಸ್ತ್ರಗಳ ನಿರ್ವಹಣೆಯ ಜವಾಬ್ದಾರಿ ಚೀನಾದ `ಎಲಿಟ್’ ಹೆಸರಿನ ಕಂಪನಿಗೆ ನೀಡಲಾಗಿದೆ. ಈ ಕಂಪನಿಯು ಶಸ್ತ್ರಾಸ್ತ್ರಗಳ ತಪಾಸಣೆಯನ್ನು ಮಾಡಿದಾಗ ಬಹುತೇಕ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳ ಉಪಕರಣಗಳು ತುಂಡಾಗಿರುವ ಅವಸ್ಥೆಯಲ್ಲಿದ್ದವು.

2. ಒಂದು ಮಾನವರಹಿತ ವಿಮಾನದ ಟರ್ಬೊಚಾರ್ಜರ (ಈ ಉಪಕರಣದ ಮೂಲಕ ಇಂಜಿನ ಕ್ಷಮತೆ ಹೆಚ್ಚಿಸಲಾಗುತ್ತದೆ) ಸೀಳಿದೆ. ಶತ್ರುದೇಶಗಳ ಸೈನ್ಯ ಮತ್ತು ಶಸ್ತ್ರಾಸ್ತ್ರ ಭಂಡಾರ ಎಲ್ಲಿದೆಯೆಂದು ನೋಡಲು ಮಾನವರಹಿತ ವಿಮಾನವನ್ನು ಉಪಯೋಗಿಸಲಾಗುತ್ತದೆ.

3. `ಏಯರ-2’ ಈ ಭೂಮಿಯಿಂದ ಗಾಳಿಯಲ್ಲಿ ಹೊಡೆಯುವ ಕ್ಷಿಪಣಿಯಾಸ್ತ್ರಗಳ ತಪಾಸಣೆಯನ್ನು ನಡೆಸಿದಾಗ ಇದರಲ್ಲಿರುವ ಕೆಲವು ಕ್ಷಿಪಣಿಗಳು ನಿರುಪಯುಕ್ತವಾಗಿರುವುದು ಕಂಡು ಬಂದಿದೆ. ಅವುಗಳು ಹೊಡೆಯುವ ಸ್ಥಿತಿಯಲ್ಲಿರಲಿಲ್ಲ.

ಸಂಪಾದಕೀಯ ನಿಲವು

ಚೀನಾದ ಇತಿಹಾಸ ಇದೇ ಆಗಿದೆ. ಆದ್ದರಿಂದ ಪಾಕಿಸ್ತಾನಕ್ಕೆ ನೀಡಲಾಗಿರುವ ಶಸ್ತ್ರಾಸ್ತ್ರಗಳಲ್ಲಿ ಬೇರೆ ಏನು ಇರುವುದು ? ಪಾಕಿಸ್ತಾನಕ್ಕೆ ಚೀನಾಕ್ಕೆ ಉತ್ತರ ಕೇಳುವ ಧೈರ್ಯವಾದರೂ ಇದೆಯೇ ?