ಐ.ಎ.ಎಸ್. ಅಧಿಕಾರಿ ರೋಹಿಣಿ ಮತ್ತು ಐ.ಪಿ.ಎಸ್. ಅಧಿಕಾರಿ ರೂಪ ಇವರ ವರ್ಗಾವಣೆ !

ಖಾಸಗಿ ಛಾಯಾ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವ ಪ್ರಕರಣ

ಬೆಂಗಳೂರು – ರಾಜ್ಯದಲ್ಲಿನ ಭಾರತೀಯ ಪೊಲೀಸ್ ಸೇವೆಯಲ್ಲಿನ (ಐ.ಪಿ.ಎಸ್.) ಅಧಿಕಾರಿ ರೂಪ ಮೌದಗಿಲ ಇವರು, ಭಾರತೀಯ ಸರಕಾರಿ ಸೇವೆಯಲ್ಲಿನ (ಐ.ಎ.ಎಸ್.) ಅಧಿಕಾರಿ ರೋಹಿಣಿ ಸಿಂಧೂರಿ ಇವರು ಅನೇಕ ಪುರುಷ ಐ.ಎ.ಎಸ್. ಅಧಿಕಾರಿಗಳ ಜೊತೆ ಆಕೆಯ ಖಾಸಗಿ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಬಗ್ಗೆ ಸರಕಾರಕ್ಕೆ ತಿಳಿಸಿದ್ದು ಸರಕಾರದಿಂದ ರೋಹಿಣಿಯವರ ಮೇಲೆ ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ.

೧. ಈ ಬಗ್ಗೆ ಐ.ಎ.ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಇವರು, ಶಿಷ್ಠಾಚಾರದ ಪ್ರಕಾರ ಸರಕಾರಿ ಅಧಿಕಾರಿಗಳು ಪ್ರಸಾರ ಮಾಧ್ಯಮದೆದರು ಹೋಗಬಾರದು, ಆದ್ದರಿಂದ ನಾನು ಈ ಆರೋಪದ ಬಗ್ಗೆ ಮಾತನಾಡಲಿಲ್ಲ. ರೂಪಾ ಇವರು ನನ್ನ ಬಗ್ಗೆ ಆಧಾರವಿಲ್ಲದ ಅನೇಕ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯ ಸಚಿವರ ಬಳಿ ದೂರು ನೀಡಿದ್ದೇನೆ ಎಂದು ಹೇಳಿದರು.

೨. ಇಬ್ಬರು ಮಹಿಳಾ ಸರಕಾರಿ ಅಧಿಕಾರಿಗಳಲ್ಲಿನ ವಿವಾದ ಬಹಿರಂಗವಾಗಿದ್ದರಿಂದ ರಾಜ್ಯ ಸರಕಾರವು ರೂಪ ಮೌದಲಗಿ ಮತ್ತು ರೋಹಿಣಿ ಸಿಂಧೂರಿ ಇವರಿಗೆ ಯಾವುದೇ ಸ್ಥಾನ ನೀಡದೆ ವರ್ಗಾವಣೆ ಮಾಡಿದ್ದಾರೆ.

(ಸೌಜನ್ಯ – Tv9 Kannada)