ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಲಾದ ‘ಭಾರತವಿರೋಧಿ ‘ಬಿಬಿಸಿಯ ಹಿಂದೂದ್ವೇಷ ವಿಷಯದಲ್ಲಿ ವಿಶೇಷ ಸಂವಾದ !
ಮುಂಬೈ – ಯಾವ ಬ್ರಿಟಿಷರು ನಮ್ಮ ಭಾರತ ದೇಶದ ಸಂಪತ್ತನ್ನು ಲೂಟಿ ಮಾಡಿದರೋ, ನಮ್ಮ ಕೊಹಿನೂರ್ ವಜ್ರವನ್ನು ಕದ್ದೊಯ್ದರೋ, ಅಂತಹ ಬ್ರಿಟಿಷರ ಪ್ರಚಾರ ಮಾಡುವ ವಾರ್ತಾವಾಹಿನಿ ಬಿಬಿಸಿ ಯಾಗಿದೆ. ಮಾನ್ಯ ಪ್ರಧಾನಿ ಮೋದಿ ಇವರಿಗೆ ೨೦೦೨ ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಅವರನ್ನು ನಿರ್ದೋಷಿಯಂದು ಸಾಬೀತುಪಡಿಸಿದರೂ, ಮಾನ್ಯ ಮೋದಿ ಯವರನ್ನು ಹೊಣೆಗಾರರನ್ನಾಗಿಸಿ ‘ಬಿಬಿಸಿ’ ಮಾಡಿರುವ ‘ಸಾಕ್ಷ್ಯಚಿತ್ರ’ ಅವರ ಮೇಲಿನ ದಾಳಿ ಮಾತ್ರವಾಗಿದೆ ಎಂಬ ಸಂಕುಚಿತ ದೃಷ್ಟಿಯಿಂದ ನೋಡದೇ ಹಿಂದೂಗಳ ಮೇಲಿನ ದಾಳಿ ಎಂದು ನೋಡಬೇಕು. ‘ಭಾರತದ ವಿಭಜನೆಯ ಸಮಯದಲ್ಲಿ ಹಿಂದೂ ಮಹಿಳೆಯರು ಮತ್ತು ಸಹೋದರಿಯರ ಮೇಲಿನ ದೌರ್ಜನ್ಯಗಳು’, ‘ಮೋಪ್ಲಾ ಹತ್ಯಾಕಾಂಡ’, ‘ಹಿಂದೂ ದೇವಾಲಯಗಳ ಧ್ವಂಸ’ ಈ ವಿಷಯಗಳ ಕುರಿತು ‘ಬಿಬಿಸಿ’ ಎಂದಿಗೂ ‘ಸಾಕ್ಷ್ಯಚಿತ್ರ’ ಮಾಡುವುದಿಲ್ಲ. ಭಾರತ ವಿರೋಧಿ ಶಕ್ತಿಗಳು ಭಾರತವನ್ನು ಮರು-ವಿಭಜನೆ ಮಾಡಲು, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿ ಸುವುದನ್ನು ತಡೆಯಲು ಮತ್ತು ಭಾರತವು ಪ್ರಗತಿಯಾಗದಂತೆ ಅನೇಕ ಷಡ್ಯಂತ್ರಗಳು ನಡೆಯುತ್ತಿದ್ದು, ‘ಬಿಬಿಸಿ’ ಅವುಗಳ ಚಹರೆಯಾಗಿದೆ. ‘ಗೋಬೆಲ್ಸ್ ನೀತಿ’ಯನ್ನು ಅವಲಂಬಿಸಿರುವ ‘ಬಿಬಿಸಿ’ಯ ‘ಸಾಕ್ಷ್ಯಚಿತ್ರ’ದ ಮೇಲೆ ಕೇವಲ ನಿಷೇಧ ಹೇರಿದರೆ ಮಾತ್ರ ಸಾಲದು, ದೇಶದಲ್ಲಿನ ರಾಷ್ಟ್ರಭಕ್ತರೊಂದಿಗೆ ಎಲ್ಲಾ ಸಂಘಟನೆಗಳು ಸೇರಿ ‘ಬಿಬಿಸಿ’ಗೆ ಪಾಠ ಕಲಿಸಬೇಕಿದೆ, ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಶ್ರೀ. ಅಭಯ ವರ್ತಕ ಅವರು ಸ್ಪಷ್ಟಪಡಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಭಾರತವಿರೋಧಿ ‘ಬಿಬಿಸಿ’ಯ ಹಿಂದೂದ್ವೇಷ’ ಕುರಿತು ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
‘ಬಿಬಿಸಿ’ಯ ಮಾಧ್ಯಮದಿಂದ ಭಾರತದ ವಿರುದ್ಧ ‘ಮಾಹಿತಿ ಯುದ್ಧ’ ! – ಶ್ರೀಲಕ್ಷ್ಮೀ ರಾಜಕುಮಾರ, ಪತ್ರಕರ್ತೆ
‘ಬಿಬಿಸಿ’ಯ ‘ಸಾಕ್ಷ್ಯ ಚಿತ್ರ’ದಲ್ಲಿ ಮೋದಿಜಿಯನ್ನು ಪ್ರಶ್ನಿಸಲಾಗಿದೆ. ಈ ಪ್ರಶ್ನಾರ್ಥಕ ಚಿಹ್ನೆ ಮೋದಿಯವರ ಮೇಲೆ ಮಾತ್ರವಲ್ಲದೇ ಭಾರತದ ಜನರ ಮೇಲೂ ಇದೆ; ಏಕೆಂದರೆ ಭಾರತೀಯ ಜನರು ಮೋದಿಜಿ ಯನ್ನು ಆಯ್ಕೆ ಮಾಡಿದ್ದಾರೆ. ‘ಬಿಬಿಸಿ’ಗೆ ಚೀನಾದ ಸಂಸ್ಥೆಗಳು ಹಣಕಾಸು ಒದಗಿಸುತ್ತಿವೆ ಮತ್ತು ಭಾರತದ ವಿರುದ್ಧ ‘ಮಾಹಿತಿ ಯುದ್ಧ’ ನಡೆಸುತ್ತಿವೆ. ೨೦೨೪ ರ ಚುನಾವಣೆಯ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗುತ್ತಿದೆ ಎಂಬ ಸಂದೇಹ ವ್ಯಕ್ತಪಡಿಸಲಾಗುತ್ತಿದೆ. ಭಾರತ ಈಗ ವಿಶ್ವ ನಾಯಕನಾಗುತ್ತಿದೆ ಮತ್ತು ‘ಬಿಬಿಸಿ’ ಮತ್ತು ಅದರ ಬೆಂಬಲಿಗರು ಭಾರತವನ್ನು ದುರ್ಬಲಗೊಳಿಸಲು ಸಂಚು ರೂಪಿಸುತ್ತಿದ್ದಾರೆ.