ಕಲಿಯುವ ವೃತ್ತಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಮೇಲೆ ಬಗ್ಗೆ ಅಪಾರ ಭಾವವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಪಾಠಕ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಕು. ಪ್ರಾರ್ಥನಾ ಮಹೇಶ ಪಾಠಕ

ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಪಾಠಕ (ವಯಸ್ಸು ೧೧ ವರ್ಷ) ಇವಳಿಗೆ ಒಂದು ಸಲ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗ ಲಭಿಸಿತು. ಆ ಸಮಯದಲ್ಲಿ ಅವರಲ್ಲಿ ಆದ ಸಂಭಾಷಣೆಯನ್ನು ಮುಂದೆ ಕೊಡಲಾಗಿದೆ.

೧. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸತ್ಸಂಗವು ದೈವಿ ಭಂಡಾರವಾಗಿದೆ’, ಎಂಬ ಭಾವವಿರುವ ಕು. ಪ್ರಾರ್ಥನಾ ಪಾಠಕ !

ಕು. ಪ್ರಾರ್ಥನಾ ಪಾಠಕ : ಪರಮ ಪೂಜ್ಯ, ನಿಮ್ಮ ಸತ್ಸಂಗವು ನನಗೆ ‘ದೈವಿ ಭಂಡಾರವೇ’ (ಖಜಾನೆಯೇ) ಆಗಿದೆ. ಈ ಸತ್ಸಂಗದಲ್ಲಿ ಕಲಿಯಲು ಸಿಕ್ಕಿದ ಅಂಶಗಳನ್ನು ನಾನು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತೇನೆ. ನಾನು ಈ ಭಂಡಾರವನ್ನು ನನ್ನ ಮನಸ್ಸಿನ ಮೇಲೆ ಕೊರೆದಿಟ್ಟಿದ್ದೇನೆ ಮತ್ತು ಈ ಪುಸ್ತಕದಲ್ಲಿ ತುಂಬಿಟ್ಟಿದ್ದೇನೆ. ನೀವು ಸತ್ಸಂಗಕ್ಕೆ ಬಂದ ಮೇಲೆ ‘ಈ ಭಂಡಾರ ಮತ್ತು ಈ ಪುಸ್ತಕ’ ಇವುಗಳ ಬಗ್ಗೆ ನನಗೆ ಮರಾಠಿಯಲ್ಲಿ ಮುಂದಿನ ಒಂದು ಕವಿತೆ ಹೊಳೆಯಿತು.

ಇದಾಗಿದೆ ದೈವೀ ತಿಜೋರಿ, ಶ್ರೀವಿಷ್ಣುವಿನ ಸತ್ಸಂಗದ ತಿಜೋರಿ |

ಶಬ್ದಗಳ ಮಾಣಿಕ್ಯಮುತ್ತುಗಳನ್ನು ತುಂಬಿ, ಅಲಂಕರಿಸೋಣ ಈ ತಿಜೋರಿ || (ಕನ್ನಡ ಅನುವಾದ)

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಶಬ್ಬಾಸ್ ! ‘ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಚಪ್ಪಾಳೆಗಳನ್ನು ತಟ್ಟಬಾರದು’, ಎಂದು ನಾನು ಹೇಳಿದ್ದೇನೆ; ಹಾಗಾಗಿ ನಾನು ಚಪ್ಪಾಳೆಗಳನ್ನು ತಟ್ಟುವುದಿಲ್ಲ, ಇಲ್ಲದಿದ್ದರೆ ನಾನು ತಟ್ಟುತ್ತಿದ್ದೆ. ತುಂಬಾ ಚೆನ್ನಾಗಿದೆ !

೨. ಕು. ಪ್ರಾರ್ಥನಾ ಸತ್ಸಂಗದಲ್ಲಿ ಆಗಿರುವ ಮಾತುಕತೆಗಳ ವರ್ಗೀಕರಣ ಮಾಡಿ ಅವುಗಳನ್ನು ಸಂಬಂಧಿತ ಸ್ತಂಭದಲ್ಲಿ (ಕಾಲಂನಲ್ಲಿ) ಬರೆಯುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಿನ್ನ ಪುಸ್ತಕವನ್ನು ತೋರಿಸು. (ಪರಮ ಪೂಜ್ಯರು ಹೀಗೆ ಹೇಳಿದ ಮೇಲೆ ನಾನು ಅವರಿಗೆ ನನ್ನ ಪುಸ್ತಕವನ್ನು ತೋರಿಸಿದೆ.) ನೀನು ಪುಸ್ತಕದಲ್ಲಿ ಮಾಡಿರುವ ಸ್ತಂಭಗಳ ಬಗ್ಗೆ ಎಲ್ಲರಿಗೂ ಹೇಳು.

ಕು. ಪ್ರಾರ್ಥನಾ ಪಾಠಕ : ಮೊದಲನೇಯ ಸ್ತಂಭದಲ್ಲಿ (ಕಾಲಂನಲ್ಲಿ) ‘ಪ್ರಶ್ನೆಗಳನ್ನು ಕೇಳುವ ಅಥವಾ ವಿಷಯಗಳನ್ನು ಹೇಳುವ ಸಾಧಕರ ಹೆಸರು’ ಮತ್ತು ‘ಅವರು ಏನು ಹೇಳಿದರು ಅಥವಾ ಏನು ಕೇಳಿದರು ?’, ಎಂಬುದನ್ನು ಬರೆದಿದ್ದೇನೆ. ಎರಡನೇ ಸ್ತಂಭದಲ್ಲಿ ಪ.ಪೂ. ಗುರುದೇವರು ಆ ಸಾಧಕನಿಗೆ ಏನು ಮಾರ್ಗದರ್ಶನ ಮಾಡಿದರು, ಅದನ್ನು ಬರೆದಿದ್ದೇನೆ ಮತ್ತು ಮೂರನೇ ಸ್ತಂಭದಲ್ಲಿ ‘ನನಗೆ ಅದರಿಂದ ಏನು ಕಲಿಯಲು ಸಿಕ್ಕಿತು ?’, ಎಂಬುದನ್ನು ಬರೆದಿದ್ದೇನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ಹೀಗೆ ಬರೆಯಬೇಕೆಂದು’, ದೊಡ್ಡವರಲ್ಲಿನ ಒಬ್ಬರಿಗಾದರೂ ಹೊಳೆಯಿತಾ ? (ಪ.ಪೂ ಗುರುದೇವರು ಆ ಪುಸ್ತಕವನ್ನು ಎಲ್ಲರಿಗೂ ತೋರಿಸಿದರು.)

೩. ಪ್ರಾರ್ಥನಾಳಲ್ಲಿ ಭಕ್ತಿಯೋಗ ಮತ್ತು ಜ್ಞಾನಯೋಗ ಇವುಗಳ ಸುಂದರ ಸಂಗಮವಿದೆ

ಓರ್ವ ಸಾಧಕಿ : ಪ್ರಾರ್ಥನಾ ಜ್ಞಾನಯೋಗಿ ಆಗಿದ್ದಾಳೆ, ಆದುದರಿಂದ ಅವಳಿಗೆ ಈ ರೀತಿ ಹೊಳೆದಿರಬಹುದಲ್ಲ ?

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅವಳಲ್ಲಿ ಭಾವವೂ ಇದೆಯಲ್ಲ ! ಅವಳಲ್ಲಿ ಭಕ್ತಿ ಮತ್ತು ಜ್ಞಾನ ಎರಡೂ ಇವೆ. (ಪ್ರಾರ್ಥನಾಳನ್ನು ಉದ್ದೇಶಿಸಿ) ತುಂಬ ಸುಂದರ !’

– ಕು. ಪ್ರಾರ್ಥನಾ ಪಾಠಕ, ಪುಣೆ