ಸೊಲ್ಲಾಪುರ – ಫೆಬ್ರವರಿ ೧೫ ರಂದು ಮಹಾರಾಷ್ಟ್ರದ ಸೊಲ್ಲಾಪುರ ಎಂಬಲ್ಲಿನ ಭವಾನಿ ಪೇಠದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಆಯೋಜಿಸಿತ್ತು. ಈ ಸಭೆಗೆ ೧೮ ಸಾವಿರಕ್ಕೂ ಅಧಿಕ ಹಿಂದೂಗಳು ಉಪಸ್ಥಿತರಿದ್ದು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಘರ್ಜಿಸಿದರು.
ಈ ವೇಳೆ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿ ಪಶ್ಚಿಮ ಮಹಾರಾಷ್ಟ್ರ, ಕೊಂಕಣ, ಗೋವಾ ಮತ್ತು ಗುಜರಾತ್ ರಾಜ್ಯದ ಸಮನ್ವಯಕರಾದ ಶ್ರೀ. ಮನೋಜ ಖಡ್ಯೆಯವರು, ‘ಹಲಾಲ್‌ನ ಆರ್ಥಿಕ ಜಿಹಾದ್ ಮಾದರಿಯಲ್ಲಿಯೇ ಮುಸ್ಲಿಂ ವಕ್ಫ್ ಬೋರ್ಡ್ ನಿಂದ ಲ್ಯಾಂಡ್ ಜಿಹಾದ್ ನಡೆಯುತ್ತಿದೆ. ವಕ್ಫ್ ಬೋರ್ಡ್‌ಗೆ ವಕ್ಫ್ ಕಾಯ್ದೆಯ ಮೂಲಕ ಹಿಂದೂಗಳ ಮನೆ, ಅಂಗಡಿಗಳು, ಕೃಷಿ, ಭೂಮಿ ಮತ್ತು ಧಾರ್ಮಿಕ ಸ್ಥಳಗಳು ಸೇರಿದಂತೆ ಸರ್ಕಾರಿ ಆಸ್ತಿಯನ್ನು ಕಬಳಿಸಲು ಪಾಶವೀ ಅಧಿಕಾರವನ್ನು ನೀಡಲಾಗಿದೆ. ದೇಶದ ಹಲವು ಜಿಲ್ಲೆಗಳಲ್ಲಿ ಹಿಂದೂಗಳ ಭೂಮಿಯನ್ನು ವಕ್ಫ್ ಬೋರ್ಡ್ ಕಬಳಿಸಿದೆ. ೨೦೦೯ ರಲ್ಲಿ ವಕ್ಫ್ ಮಂಡಳಿ ಬಳಿ ೪ ಲಕ್ಷದ ಎಕರೆ ಭೂಮಿ ಇತ್ತು, ಅದು ಈಗ ೮ ಲಕ್ಷದ ೬೦ ಸಾವಿರ ಎಕರೆಗೆ ತಲುಪಿದೆ. ಇಷ್ಟು ಭೂಮಿ ವಕ್ಫ್ ಮಂಡಳಿಗೆ ಹೇಗೆ ಬಂತು ?, ಎಂದು ಪ್ರಶ್ನಿಸಿದರು.
ಸನಾತನ ಸಂಸ್ಥೆಯ ಧರ್ಮಪ್ರಸಾರಕರಾದ ಸದ್ಗುರು ಸ್ವಾತಿ ಖಡ್ಯೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ನ್ಯಾಯವಾದಿ ಸಂಘಟಕರಾದ ನ್ಯಾಯವಾದಿ ನೀಲೇಶ ಸಂಗೋಲಕರ ಸಹ ಈ ಸಭೆಯಲ್ಲಿ ಮಾರ್ಗದರ್ಶನ ಮಾಡಿದರು. ಈ ಸಭೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯ ಹಿಂದೂ ಧರ್ಮೀಯರು ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.