ಜಿಹಾದಿ ಭಯೋತ್ಪಾದಕ ಸಂಘಟನೆ ಹಿಜಬುಲ್ ಮುಜಾಹಿದ್ದೀನ್ ನ ಕಮಾಂಡರ್ ಬಶಿರ ಅಹಮದ್ ಪಾಕಿಸ್ತಾನದಲ್ಲಿ ಹತ !

ಕಾಬೂಲ್ (ಅಫ್ಘಾನಿಸ್ತಾನ) – ಹಿಜಬುಲ್ ಮುಜಾಹಿದ್ದೀನ್ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಪ್ರಮುಖ ಕಮಾಂಡರ್ ಬಶೀರ್ ಅಹಮದ್ ಪೀರ್ ಇವನನ್ನು ಪಾಕಿಸ್ತಾನದ ರಾವಳಪಿಂಡಿಯಲ್ಲಿನ ಒಂದು ಅಂಗಡಿಯ ಹೊರಗೆ ನಿಂತಿರುವಾಗ ಬೈಕ್ ನಿಂದ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಭಯೋತ್ಪಾದಕ ಚಟುವಟಿಕೆಯಲ್ಲಿ ಸಹಭಾಗಿಯಾಗಿರುವುದರಿಂದ ಅವನಿಗೆ ಕಳೆದ ವರ್ಷ ಅಕ್ಟೋಬರ್ ೪ ರಂದು ಭಯೋತ್ಪಾದಕನೆಂದು ಘೋಷಿಸಿದ್ದರು. ಜಮ್ಮು-ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಯಲ್ಲಿ ಆತನ ಕೈವಾಡವಿತ್ತು. ಹಾಜಿ, ಪೀರ್ ಮತ್ತು ಇಮ್ತಿಯಾಜ್ ಈ ಸಾಂಕೇತಿಕ ಹೆಸರಿನಲ್ಲಿ ಅವನು ಜಮ್ಮು ಕಾಶ್ಮೀರದಲ್ಲಿ ಅನೇಕ ಚಟುವಟಿಕೆ ಮಾಡುತ್ತಿದ್ದನು. ಬಶೀರ್ ಕಳೆದ ಕೆಲವು ವರ್ಷಗಳಿಂದ ರಾವಳಪಿಂಡಿಯಲ್ಲಿ ವಾಸವಾಗಿದ್ದನ್ನು. ಪಾಕಿಸ್ತಾನ ಸರಕಾರವು ಅವನ ಅಲ್ಲಿನ ಪೌರತ್ವ ನೀಡಿತ್ತು.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ಯು ಬಶೀರನಿಗೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ನುಸುಳಿಸುವ ಜವಾಬ್ದಾರಿಯನ್ನು ನೀಡಿತ್ತು. ಜಮ್ಮು ಕಾಶ್ಮೀರದಲ್ಲಿ ಹಿಜಬುಲ್ ಮುಜಾಹಿದ್ದನ್ ಮತ್ತು ಲಷ್ಕರ್ ಎ ತೋಯ್ಬಾದ ಮಾಜಿ ಭಯೋತ್ಪಾದಕರನ್ನು ಮತ್ತೆ ಸಕ್ರಿಯ ಗೊಳಿಸುವುದರಲ್ಲಿ ಅವನ ಕೈವಾಡವಿತ್ತು. ಅವನು ಸತತವಾಗಿ ಇಂಟರ್ ನೆಟ್ ಮೂಲಕ ಜನರಿಗೆ ಕಾಶ್ಮೀರದ ವಿರುದ್ಧ ಪ್ರಚೋದನೆ ನೀಡುತ್ತಿದ್ದನು.