ಕಾಂಗ್ರೆಸ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಶಿವರಾತ್ರಿ ಮಹೋತ್ಸವದಲ್ಲಿ `ಅಲ್ಲಾಹು’ ಹಾಡು !

  • ಭಾಜಪದಿಂದ ಖಂಡನೆ !

  • ಹಿಮಾಚಲ ಪ್ರದೇಶದಲ್ಲಿ ಖೇದಕರ ಕೃತ್ಯ !

ಮಂಡಿ (ಹಿಮಾಚಲ ಪ್ರದೇಶ) – ಇಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಶಿವರಾತ್ರಿ ಮಹೋತ್ಸವದ ಮೊದಲ ದಿನ ಅಂದರೆ ಫೆಬ್ರವರಿ 19 ರಂದು ವ್ಯಾಸಪೀಠದಿಂದ `ಸಾಬರಿ ಬ್ರದರ್ಸ’ ಹೆಸರಿನ ಸೂಫಿ ಕಲಾವಿದರು `ಅಲ್ಲಾಹು’ ಹೆಸರಿನ ಹಾಡು ಹಾಡಿದರು. ಈ ಸಮಯದಲ್ಲಿ ಬಿಲಾಸಪುರದ ರಾಖಿ ಗೌತಮ ಹೆಸರಿನ ಒಬ್ಬ ಗಾಯಕಿಯು ಹಿಂದಿ ಚಲನಚಿತ್ರದ ಕೆಲವು ಅಶ್ಲೀಲ ಹಾಡುಗಳನ್ನು ಹಾಡಿದರು. ಈ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ ಸುಖವಿಂದರ ಸಿಂಹ ಸುಕ್ಖು ಇವರೂ ಕೂಡ ಉಪಸ್ಥಿತರಿದ್ದರು. ಈ ಒಟ್ಟಾರೆ ಪ್ರಕರಣದ ಮೇಲೆ ಮಹೋತ್ಸವವನ್ನು ಆಯೋಜಿಸಿದ್ದ ಆಡಳಿತಾರೂಢ ಕಾಂಗ್ರೆಸ್ ಸರಕಾರವನ್ನು ಭಾಜಪ ಖಂಡಿಸಿದೆ, ಹಾಗೆಯೇ ಸಾಮಾಜಿಕ ಮಾಧ್ಯಮದಿಂದ ಹಿಂದೂಗಳು ಇದನ್ನು ವಿರೋಧಿಸುತ್ತಿದ್ದಾರೆ.

ಹಿಮಾಚಲ ಪ್ರದೇಶದ ಭಾಜಪ ಕಚೇರಿಯು ಇದನ್ನು ವಿರೋಧಿಸಿ, ಚುನಾವಣೆ ಗೆದ್ದ ಬಳಿಕ ಕಾಂಗ್ರೆಸ್ ನಾಯಕರು, ನಾವು ಹಿಂದುತ್ವವನ್ನು ಸೋಲಿಸಿದ್ದೇವೆ ಎಂದು ಹೇಳಿದ್ದರು. ಈ ಕೃತ್ಯ ಅದರ ಸಾಕ್ಷಿಯಾಗಿದೆಯೇ ? ಯಾವ ದೇವಭೂಮಿಯನ್ನು `ದೇವಕಾಶಿ’ ಎಂದು ಹೇಳಲಾಗುತ್ತದೆಯೋ ಯಾವ ರಾಜ್ಯದ ಶೇ. 97 ರಷ್ಟು ಜನಸಂಖ್ಯೆ ಹಿಂದೂಗಳೇ ಇದ್ದಾರೆಯೋ, ಅಲ್ಲಿಯ `ಶಿವರಾತ್ರಿ ಮಹೋತ್ಸವ’ದಲ್ಲಿ `ಅಲ್ಲಾಹು’ ನ ಕವ್ವಾಲಿ ಹಾಡನಿಂದ ಕಾಂಗ್ರೆಸ್ ಏನನ್ನು ಸಿದ್ಧ ಮಾಡಲು ಇಚ್ಛಿಸುತ್ತಿದೆ ? ಎಂದು ಟ್ವೀಟ್ ಮಾಡಿದೆ. ಭಾಜಪ, ನಾವು ಯಾವುದೇ ಧರ್ಮವನ್ನು ವಿರೋಧಿಸುವುದಿಲ್ಲ; ಆದರೆ ಹಿಂದೂಗಳ ಸಮಾರಂಭದಲ್ಲಿ ವ್ಯಾಸಪೀಠದಿಂದ ಈ ರೀತಿ ಮಾಡುವುದು ಸರಿಯಲ್ಲ. ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಕಾಂಗ್ರೆಸ್ ಹಿಂದೂಗಳ ಕ್ಷಮೆಯಾಚನೆ ಮಾಡಬೇಕೆಂದು ಭಾಜಪ ಸ್ಪಷ್ಟಪಡಿಸಿದೆ.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಕಾಂಗ್ರೆಸ್ಸಿನ ಹಳೆಯ ಚಾಳಿಯಾಗಿದೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದನಂತರ ಅಲ್ಲಿ ಕಾಂಗ್ರೆಸ್ ಸರಕಾರದಿಂದ ಹಿಂದೂ ಧರ್ಮದ ಮೇಲೆ ಇದೇ ರೀತಿ ಆಘಾತ ಆಗುತ್ತಿದ್ದರೆ, ಆಶ್ಚರ್ಯ ಪಡಬಾರದು !