ವ್ಯಾಯಾಮದ ಬಗ್ಗೆ ಸಂದೇಹನಿವಾರಣೆ
ಶ್ರೀ. ರಜತ ವಾಣಿ, ಜಳಗಾವ : ಬಹಳಷ್ಟು ಜನರ ಹೊಟ್ಟೆ ಮುಂದೆ ಬರುತ್ತದೆ. ಕೆಲವೊಮ್ಮೆ ಇಂತಹ ವ್ಯಕ್ತಿಗಳು ಬಹಳಷ್ಟು ವ್ಯಾಯಾಮವನ್ನು ಮಾಡಲು ಆಗುವುದಿಲ್ಲ. ಇಂತಹ ಸಮಯದಲ್ಲಿ ಯಾವ ವ್ಯಾಯಾಮವನ್ನು ಮಾಡಬೇಕು ?
ಉತ್ತರ : ‘ಸತತ ಕುಳಿತು ಕೆಲಸ ಮಾಡುವುದು, ಶರೀರದ ಚಟುವಟಿಕೆ ಆಗದಿರುವುದು, ವ್ಯಾಯಾಮವನ್ನು ಮಾಡದಿರುವುದು ಇತ್ಯಾದಿ ಕಾರಣಗಳಿಂದ ಹೊಟ್ಟೆಯ ಸ್ನಾಯುಗಳು ಸಡಿಲಗೊಳ್ಳುತ್ತವೆ. ಕೊಬ್ಬು ಹೆಚ್ಚಾದಾಗ ಅದು ಸಾಮಾನ್ಯವಾಗಿ ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗುತ್ತದೆ ಮತ್ತು ಹೊಟ್ಟೆ ಮುಂದೆ ಬರುತ್ತದೆ. ಆದ್ದರಿಂದ ಬೆನ್ನಿನ ಸ್ನಾಯುಗಳಿಗೆ ಒತ್ತಡ ಬರುತ್ತದೆ ಮತ್ತು ಬೆನ್ನು ನೋಯುತ್ತದೆ. ಬೆನ್ನು, ಸೊಂಟ ಮತ್ತು ಕಾಲು ನೋವಿಗೆ ‘ಮುಂದೆ ಬಂದಿರುವ ಹೊಟ್ಟೆ’ ಇದೊಂದು ಮುಖ್ಯ ಕಾರಣವಾಗಿರಬಹುದು. ಮುಂದೆ ಬಂದಿರುವ ಹೊಟ್ಟೆಯು ಸೌಂದರ್ಯದ ದೃಷ್ಟಿಯಲ್ಲಿಯೂ ಚೆನ್ನಾಗಿ ಕಾಣಿಸುವುದಿಲ್ಲ. ಇಂತಹ ಹೊಟ್ಟೆಯನ್ನು ಕಡಿಮೆ ಮಾಡುವ ಸುಲಭ ಉಪಾಯವೆಂದರೆ ‘ಹೊಟ್ಟೆಯ ಸ್ನಾಯುಗಳಿಗೆ ಶಕ್ತಿ ನೀಡುವ ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದು’,
ಮುಂದಿನ ಸಂಪರ್ಕಕೊಂಡಿಯಲ್ಲಿ ಎಲ್ಲರಿಗೂ ಸಹಜವಾಗಿ ಮಾಡಲು ಬರುವಂತೆ ಹೊಟ್ಟೆಯ ಸ್ನಾಯುಗಳಿಗಾಗಿ ೫ ವ್ಯಾಯಾಮಗಳನ್ನು ಕೊಡಲಾಗಿದೆ. ಉಳಿದ ಯಾವುದೇ ವ್ಯಾಯಾಮಗಳನ್ನು ಮಾಡಲು ಸಮಯ ಸಿಗದಿದ್ದರೂ, ಈ ೫ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು. ಈ ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ಮುಂದೆ ಬಂದಿರುವ ಹೊಟ್ಟೆ ಎದೆಗೆ ಸಮಾಂತರವಾಗಲು ಸಹಾಯವಾಗುವುದು. ಒಮ್ಮಿಂದೊಮ್ಮೆಲೆ ಬಹಳಷ್ಟು ವ್ಯಾಯಾಮವನ್ನು ಮಾಡದೇ ಹಂತಹಂತಗಳಿಂದ ಹೆಚ್ಚಿಸಬೇಕು. ಹೊಟ್ಟೆ ಖಾಲಿ ಇದ್ದಾಗ ದಿನಕ್ಕೆ ೨ ಬಾರಿ ಈ ವ್ಯಾಯಾಮವನ್ನು ಮಾಡಿದರೆ ಬೇಗ ಲಾಭವಾಗುತ್ತದೆ.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೧.೨೦೨೩)
ವ್ಯಾಯಾಮವನ್ನು ತಿಳಿದುಕೊಳ್ಳಲು ಸಂಪರ್ಕ ಕೊಂಡಿ (ಲಿಂಕ್) : bit.ly/vyayampot