‘ಸೈನ್ಯದಲ್ಲಿ ಮುಸಲ್ಮಾನರಿಗೆ ಶೇ. ೩೦ರಷ್ಟು ಮೀಸಲಾತಿಯನ್ನು ನೀಡಿದರೆ ಅವರು ಪಾಕಿಸ್ತಾನಕ್ಕೆ ಬುದ್ಧಿ ಕಲಿಸುತ್ತಾರೆ ! (ಅಂತೆ)

ಸಂಯುಕ್ತ ಜನತಾದಳದ ನೇತಾರ ಗುಲಾಮ ರಸೂಲ ಬಲಿಯಾವಿಯ ವಿಷಕಾರಿ ಹೇಳಿಕೆ !

ಪಾಟಲೀಪುತ್ರ (ಬಿಹಾರ) – ಭಾರತೀಯ ಸೈನ್ಯದಲ್ಲಿ ಮುಸಲ್ಮಾನರಿಗೆ ಶೇ. ೩೦ರಷ್ಟು ಮೀಸಲಾತಿಯನ್ನು ನೀಡಿದರೆ ಅವರು ಪಾಕಿಸ್ತಾನವನ್ನು ‘ಶಾಂತ’ಗೊಳಿಸುವರು (ಬುದ್ಧಿ ಕಲಿಸುವರು) ಎಂದು ಸಂಯುಕ್ತ ಜನತಾ ದಳದ ನೇತಾರರಾದ ಗುಲಾಮ ರಸೂಲ ಬಲಿಯಾವಿಯವರು ಹೇಳಿಕೆ ನೀಡಿದ್ದಾರೆ. ಅವರು ಮಾತನಾಡುತ್ತ, ಮುಸಲ್ಮಾನರಿಗೆ ಪಾಕಿಸ್ತಾನಕ್ಕೆ ಹೇಗೆ ಬುದ್ಧಿ ಕಲಿಸಬೇಕು ? ಎಂಬುದು ತಿಳಿದಿದೆ. ೧೯೬೫ರ ಯುದ್ಧದಲ್ಲಿ ಅಬ್ದುಲ ಹಮೀದನು ಪಾಕಿಸ್ತಾನದ ಟ್ಯಾಂಕನ್ನು ಧ್ವಂಸಗೊಳಿಸಿದ್ದನು. ಪಾಕಿಸ್ತಾನದ ಕ್ಷಿಪಣಿಗಳನ್ನು ವಿರೋಧಿಸಲು ಅಬ್ದುಲ ಕಲಾಮ ಆಝಾದ ಎಂಬ ಮುಸಲ್ಮಾನನೇ ಭಾರತಕ್ಕಾಗಿ ಕ್ಷಿಪಣಿಗಳನ್ನು ನಿರ್ಮಿಸಿದನು ಎಂದೂ ಹೇಳಿದರು.

‘ಭಾರತೀಯ ಸೈನ್ಯದಲ್ಲಿ ರಜಪೂತ ರೆಜಿಮೆಂಟ್‌, ಸಿಖ್ಖ ರೆಜಿಮೆಂಟ್, ಜಾಟ ರೆಜಿಮೆಂಟ್‌ಗಳಿವೆ; ಆದರೆ ಮುಸಲ್ಮಾನ ರೆಜಿಮೆಂಟ್‌ ಇಲ್ಲ. ಇದನ್ನು ನಿರ್ಮಿಸಬೇಕು ಎಂದು ಬಲಿಯಾವೀಯವರು ಈ ಸಮಯದಲ್ಲಿ ಮನವಿ ಮಾಡಿದರು.

ಸಂಪಾದಕೀಯ ನಿಲುವು

ಜಮ್ಮೂ – ಕಾಶ್ಮೀರದ ಮಹಾರಾಜ ಹರಿಸಿಂಹರ ಸೈನ್ಯದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪಾಕಿಸ್ತಾನವು ಕಾಶ್ಮೀರದ ಮೇಲೆ ಆಕ್ರಮಣ ಮಾಡಿದಾಗ ಈ ಮುಸಲ್ಮಾನ ಸೈನಿಕರು ಪಾಕಿಸ್ತಾನದ ಪರ ವಹಿಸಿದ್ದರು. ಇದು ಇತಿಹಾಸವಾಗಿದೆ. ಆಂಗ್ಲರು ಸೈನ್ಯದಲ್ಲಿ ಎಲ್ಲಿಯೂ ಮುಸಲ್ಮಾನರಿಗಾಗಿ ರೆಜಿಮೆಂಟ್‌ ಮಾಡಿಸಲಿಲ್ಲ ಹಾಗೂ ಸ್ವಾತಂತ್ರ‍್ಯದ ನಂತರವೂ ಇಂತಹ ರೆಜಿಮೆಂಟನ ರಚನೆ ಆಗಿಲ್ಲ, ಇದೆ ಇದರ ಹಿಂದಿನ ಕಾರಣವಾಗಿರಬಹುದು ಎಂಬುದು ಗಮನಕ್ಕೆ ಬರುತ್ತದೆ !