ಪಾಕಿಸ್ತಾನದಲ್ಲಿ ಗುಂಪಿನಿಂದ ಪೊಲೀಸ್ ಠಾಣೆಗೆ ನುಗ್ಗಿ ಧರ್ಮನಿಂದನೆ ಪ್ರಕರಣದ ಆರೋಪಿಯ ಹತ್ಯೆ !

ಇಸ್ಲಾಮಾಬಾದ – ಧರ್ಮನಿಂದನೆಯ ಪ್ರಕರಣದಲ್ಲಿನ ಆರೋಪಿ ವಾರಿಸ್ ಈಸಾ ಇವನ ಮೇಲೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನದ ಪಂಜಾಬ ಪ್ರಾಂತದ ಹಿಂಸಾತ್ಮಕ ಗುಂಪೊಂದು ಫೆಬ್ರುವರಿ ೧೧ ರಂದು ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿ ಆರೋಪಿಯನ್ನು ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗ ಥಳಿಸಿ ಅವನ ಹತ್ಯೆ ಮಾಡಿದರು. ವಾರಬರ್ಟನ್ ಇಲ್ಲಿಯ ನನಕಾನಾ ಸಾಹಿಬ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.

ವಾರಿಸ್ ಈಸಾ ಇವನು ೨ ವರ್ಷದ ನಂತರ ಜೈಲಿನಿಂದ ಬಿಡುಗಡೆಯಾದ ನಂತರ ಅವನು ಮನೆಗೆ ಹಿಂತಿರುಗಿದನು. ಅಲ್ಲಿ ಪವಿತ್ರ ಗ್ರಂಥದ ಮೇಲೆ ತನ್ನ ಪತ್ನಿಯ ಛಾಯಚಿತ್ರ ಅಂಟಿಸಿ ಮಂತ್ರ ತಂತ್ರ ಮಾಡುತ್ತಿದ್ದನು. ಈ ಘಟನೆಯ ಅನೇಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಆದ್ದರಿಂದ ಈ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ. ಪ್ರಧಾನ ಮಂತ್ರಿ ಶಹಬಾಜ ಶರೀಫ್ ಇವರು ಈ ದಾಳಿಯಲ್ಲಿ ಸಹಭಾಗಿಯಾಗಿರುವ ಜನರ ಮೇಲೆ ಕ್ರಮ ಕೈಗೊಳ್ಳುವ ಆದೇಶ ನೀಡಿದ್ದಾರೆ.