ಮೋದಿಯವರು ಯುದ್ಧವನ್ನು ಮುಕ್ತಾಯಗೊಳಿಸಲು ಪುತಿನ್ ರ ಮನಸ್ಸನ್ನು ಹೊರಳಿಸಬಹುದು – ಅಮೇರಿಕಾ

(ಸೌಜನ್ಯ :Hindustan Times)

ವಾಷಿಂಗ್ಟನ್ – ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ಮುಕ್ತಾಯಗೊಳಿಸಲು ಭಾರತದ ಪ್ರಧಾನಮಂತ್ರಿ ಮೋದಿಯವರು ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುತಿನ್ ರ ಮನಸ್ಸು ಹೊರಳಿಸ ಬಲ್ಲರು, ಎಂದು ಅಮೇರಿಕಾದ ‘ವೈಟ್ ಹೌಸ್’ ವಕ್ತಾರ ಜಾನ್ ಕಿರ್ಬಿ ದಾವೆ ಮಾಡಿದ್ದಾರೆ. ಹೀಗಾದರೆ ಅಮೇರಿಕಾ ಶತ್ರುತ್ವ ಮುಗಿಸುವ ಪ್ರಯತ್ನಗಳಿಗೆ ಮನಃಪೂರ್ವಕವಾಗಿ ಸ್ವಾಗತಿಸಲಿದೆ, ಎಂದೂ ಅವರು ಸ್ಪಷ್ಟ ಪಡಿಸಿದರು.