‘ಗೋವುಗಳಿಗೆ ಆಲಂಗಿಸುವ ದಿನ’ ಆಚರಣೆಗೆ ನೀಡಿರುವ ಕರೆಯನ್ನು ಹಿಂಪಡೆದ ಕೇಂದ್ರ ಸರಕಾರ !

ಸಮಾಜದಿಂದ ಟೀಕೆಗಳು ಆರಂಭವಾದಾಗ ಈ ನಿರ್ಧಾರ ಕೈಕೊಂಡಿರುವ ಸಾಧ್ಯತೆ !

ನವ ದೆಹಲಿ – ಕೇಂದ್ರ ಸರಕಾರದ ಪಶು ಸಂಗೋಪನ ಸಚಿವಲಯದ ಸೂಚನೆಯ ನಂತರ ಪಶು ಕಲ್ಯಾಣ ಇಲಾಖೆಯಿಂದ (‘ಅನಿಮಲ್ ವೆಲಫೇರ್ ಬೋರ್ಡ್ ಆಫ್ ಇಂಡಿಯಾ’ವು) ಬರುವ ಫೆಬ್ರವರಿ ೧೪ ರಂದು ಎಂದರೆ ಪಾಶ್ಚಾತ್ಯ ವ್ಯಾಲೆಂಟೈನ್ ಡೇ ದಿನದಂದು ‘ಕೌ ಹಗ್ ಡೇ’ (ಗೋವುಗಳಿಗೆ ಆಲಿಂಗಿಸುವ ದಿನ) ಆಚರಿಸಲು ಕರೆ ನೀಡಿದ್ದರು. ಜನರಿಗೆ ಅವರ ಸಂಸ್ಕೃತಿಯ ಬಗ್ಗೆ ಜಾಗೃತಗೊಳಿಸುವುದು, ಭಾವನಾತ್ಮಕ ಸಮೃದ್ಧಿ ಮತ್ತು ಆನಂದ ಪಡೆಯುವದಕ್ಕಾಗಿ ಈ ದಿನ ಆಚರಣೆ ಮಾಡುವುದಕ್ಕಾಗಿ ಈ ಇಲಾಖೆಯಿಂದ ಹೇಳಿದ್ದರು; ಆದರೆ ಈಗ ಈ ಇಲಾಖೆಯಿಂದ ಈ ಕರೆ ಹಿಂಪಡೆದಿದ್ದಾರೆ. ಇಲಾಖೆಯ ಸಚಿವ ಎಸ್.ಕೆ. ದತ್ತ ಇವರು ಹೊಸ ಸಂಹಿತೆ ಜಾರಿಗೊಳಿಸಿ ‘ಕೌ ಹಗ್ ಡೇ’ ಆಚರಣೆ ಹಿಂಪಡೆದಿರುವುದು ಘೋಷಿಸಿದರು. ಇಲಾಖೆಯಿಂದ  ‘ಕೌ ಹಗ್ ಡೇ’ಗೆ ಸಾಮಾಜಿಕ ಮಾಧ್ಯಮಗಳಿಂದ ಹಾಗೂ ಕೆಲವು ಮುಖಂಡರಿಂದ ವಿರೋಧ ವ್ಯಕ್ತವಾದ ನಂತರ ಅದನ್ನು ಹಿಂಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

೧. ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ ಇವರು, ಆಲಿಂಗಿಸುವ ದಿನ ಆಚರಣೆಯ ಬದಲು ಸ್ಪರ್ಶ ದಿವಸ ಎಂದು ಹೆಸರು ಇಡಬೇಕಿತ್ತು ಎಂದು ಹೇಳಿದರು.

೨. ರಾಷ್ಟ್ರವಾದಿ ಕಾಂಗ್ರೆಸ್ಸಿನ ಮುಖಂಡ ಜಿತೇಂದ್ರ ಆಹ್ಹಾಡ್ ಇವರು ಕೂಡ ಆಕ್ಷೇಪ ವ್ಯಕ್ತಪಡಿಸಿದರು.

೩. ‘ಗೋವುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನ ದೀಪಾವಳಿಯಲ್ಲಿ ‘ಗೋವತ್ಸ ದ್ವಾದಶಿ’ (ವಸುಬಾರಸ) ಈ ಹಬ್ಬ ಆಚರಿಸುತ್ತೇವೆ ಹಾಗಾದರೆ ಈ ದಿನ ಏತಕ್ಕಾಗಿ ? ಹೀಗೂ  ಅನೇಕರಿಂದ ಆಕ್ಷೇಪ ವ್ಯಕ್ತವಾಗಿತ್ತು. (ಇದನ್ನು ಸಂಕುಚಿತ ಮಾನಸಿಕತೆ ಎನ್ನಬೇಕಾಗುತ್ತದೆ ! ಈ ರೀತಿ ಇನ್ನೊಂದು ದಿನ ಆಚರಿಸಿ ಅಂತರಾಷ್ಟ್ರೀಯ  ಮಟ್ಟದಲ್ಲಿ ಅದಕ್ಕೆ ಮಹತ್ವ ನೀಡುವ ಪ್ರಯತ್ನ ಆಗುತ್ತಿದ್ದರೆ ಅದರಲ್ಲಿ ತಪ್ಪೇನು ?- ಸಂಪಾದಕರು)

ಬಿಬಿಸಿಯಿಂದ ವ್ಯಂಗಚಿತ್ರದ ಮೂಲಕ ಟೀಕೆ

ನವದೆಹಲಿ – ಕೇಂದ್ರ ಸರಕಾರದ ‘ಅನಿಮಲ್ ವೆಲ್ ಫೇರ ಬೋರ್ಡ ಆಫ್ ಇಂಡಿಯಾ’ವು ಬರುವ ಫೆಬ್ರವರಿ 14 ರಂದು ಅಂದರೆ ಪಾಶ್ಚಿಮಾತ್ಯರ ‘ವ್ಯಾಲೆಂಟೈನ್ ಡೆ’ ದಿನದಂದು ‘ಕೌ ಹಗ್ ಡೇ’ (ಹಸುಗಳನ್ನು ಆಲಂಗಿಸುವ ದಿನ) ಆಚರಿಸುವಂತೆ ಕರೆ ನೀಡಿದೆ. ಜನರಿಗೆ ಅವರ ಸಂಸ್ಕೃತಿಯ ವಿಷಯದಲ್ಲಿ ಜಾಗೃತಿಗೊಳಿಸುವುದು, ಭಾವನಾತ್ಮಕ ಸಮೃದ್ಧಿ ಮತ್ತು ಆನಂದ ಪಡೆದುಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತಿದೆಯೆಂದು ಬೋರ್ಡನ ವತಿಯಿಂದ ಹೇಳಲಾಗಿದೆ; ಆದರೆ ಹಿಂದೂದ್ವೇಷದ ಕಾಮಾಲೆಯಾಗಿರುವ ಬಿಬಿಸಿ ಒಂದು ವ್ಯಂಗಚಿತ್ರದ ಮೂಲಕ ಇದನ್ನು ಹಾಸ್ಯಾಸ್ಪದವೆಂದು ಬಿಂಬಿಸಲು ಪ್ರಯತ್ನಿಸಿದೆ. ಬಿಬಿಸಿ ಈ ವ್ಯಂಗಚಿತ್ರದಲ್ಲಿ, ‘ಬರುವ ವಾರದಲ್ಲಿ ‘ಕೌ ಗೋಬರ ಡೇ’, ‘ಕೌ ಮೂತ್ರ ಡೇ’, `ಕೌ ಮಿಲ್ಕ ಡೇ’, ‘ಕೌ ಮೇವಿನ ಡೇ’ ಇತ್ಯಾದಿ ಆಚರಿಸಲಾಗುವುದು’, ಎಂದು ಹೇಳಿದೆ. ಈ ವ್ಯಂಗಚಿತ್ರದ ಪೋಸ್ಟ ತಯಾರಿಸಿ ಬಿಬಿಸಿ ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡಿದೆ. ಅದರ ಮೇಲೆ ಮುಸಲ್ಮಾನರು ಹಸುಗಳ ವಿಷಯದಲ್ಲಿ ಅಪಮಾನಕಾರಕ ಹೇಳಿಕೆ ನೀಡುತ್ತಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಹಿಂದೂ ದ್ವೇಷಿ ಜನರ ಸಂಖ್ಯೆ ಕಡಿಮೆ ಇಲ್ಲ, ಆದ್ದರಿಂದ ಈ ರೀತಿ ವಿರೋಧ ಆಗುವುದು ಹೊಸದೇನಲ್ಲ. ಇದರ ಬಗ್ಗೆ ಕೇಂದ್ರ ಸರಕಾರ ದೃಢವಾಗಿದ್ದು ಈ ಕರೆ ಯಾವಾಗಲೂ ಇರಿಸಬೇಕಿತ್ತು, ಎಂದು ಧರ್ಮಾಭಿಮಾನಿ ಹಿಂದೂಗಳಿಗೆ ಮತ್ತು ಗೋ ಪ್ರೇಮಿಗಳಿಗೆ ಅನಿಸುತ್ತದೆ !

ವಿದೇಶದಲ್ಲಿ ‘ಕೌ ಕಡಲಿಂಗ್’ (ಗೋವುಗಳ ಸಾನಿಧ್ಯದಲ್ಲಿರುವುದು) ಹೆಸರಿನಿಂದ ಸಾವಿರಾರು ರೂಪಾಯಿ ನೀಡಿ ಕೆಲವು ಗಂಟೆಗಳ ಕಾಲ ಗೋವಿನ ಸಾನಿಧ್ಯದಲ್ಲಿ ಮಾನಸಿಕ ಉಪಚಾರ ಮಾಡಿಸಿ ಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅದನ್ನು ನೋಡಿದರೆ ಭಾರತದಲ್ಲಿ ಈ ರೀತಿಯ ದಿನ ಆಚರಿಸುವುದು, ಅದರಲ್ಲಿ ತಪ್ಪೇನು ? ಅದಕ್ಕೆ ತದ್ವಿರುದ್ಧ ಸರಕಾರದ ಮಟ್ಟದಲ್ಲಿ ಮಹತ್ವ ಸಿಗುತ್ತಿತ್ತು !