ಅಪಘಾನಿಸ್ತಾನದಲ್ಲಿರುವ ಭಾರತ, ಚೀನಾ ಮತ್ತು ಇರಾನಿನ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆಸುವೆವು

ವಿಶ್ವಸಂಸ್ಥೆಯ ವರದಿಯಿಂದ ಇಸ್ಲಾಮಿಕ್ ಸ್ಟೇಟ್ (ಖುರಾಸಾನ) ನ ಬೆದರಿಕೆ ಬಹಿರಂಗ !

ನವ ದೆಹಲಿ – ಇಸ್ಲಾಮಿಕ್ ಸ್ಟೇಟ್ (ಖುರಾಸಾನ) ಈ ಭಯೋತ್ಪಾದಕ ಸಂಘಟನೆಯು ಅಪಘಾನಿಸ್ತಾನದಲ್ಲಿನ ಭಾರತ, ಇರಾನ್ ಮತ್ತು ಚೀನಾದ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡುವ ಬೆದರಿಕೆ ನೀಡಿದೆ. ಇದರ ಮೂಲಕ ತಾಲಿಬಾನ್ ಮತ್ತು ವಿಶ್ವ ಸಂಸ್ಥೆಯಲ್ಲಿನ ದೇಶಗಳ ಸಂಬಂಧ ಹದಗೆಡೆಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆಯ ಕಾರ್ಯದರ್ಶಿ ಆಟೋನಿಯೋ ಗೂಟೆರಸ್ ಇವರ ಒಂದು ವರದಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ ತನ್ನನ್ನು ತಾಲಿಬಾನದ ಪರ್ಯಾಯ ಎಂದು ತಿಳಿದುಕೊಳ್ಳುತ್ತಿದೆ. ‘ತಾಲಿಬಾನ್ ಅಫಘಾನಿಸ್ತಾನವನ್ನು ರಕ್ಷಿಸುವಲ್ಲಿ ಸಮರ್ಥವಾಗಿಲ್ಲ’, ಎಂದು ಈ ವರದಿಯಲ್ಲಿ ಹೇಳಿದೆ. ಈ ಭಯೋತ್ಪಾದಕ ಸಂಘಟನೆಯ ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ೩ ಸಾವಿರ ಭಯೋತ್ಪಾದಕರು ಇರುವರು. ಇವರು ಪ್ರಸ್ತುತ ಮಾದಕ ವಸ್ತುಗಳ ವ್ಯವಸಾಯ ಮಾಡುತ್ತಿದ್ದಾರೆ.