ಕ್ಯಾಲಿಫೋರ್ನಿಯಾ (ಅಮೇರಿಕಾ)ದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಏಕೈಕ ಪುತ್ತಳಿ ಕಳವು !

ನವದೆಹಲಿ – ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸನ್ ಜೊಸ್ ಉದ್ಯಾನವನದಿಂದ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿ ಕಳುವಾಗಿದೆ. ಈ ಪುತ್ತಳಿಯನ್ನು ಕತ್ತರಿಸಿ ಕಳುವು ಮಾಡಿದ್ದಾರೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ. ಮಹಾರಾಜರ ಪುತ್ತಳಿ ಪುಣೆಯಿಂದ ಉಡುಗೊರೆಯಾಗಿ ನೀಡಲಾಗಿತ್ತು. ಉತ್ತರ ಅಮೆರಿಕಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಏಕೈಕ ಪುತ್ತಳಿ ಇದಾಗಿತ್ತು. ಈ ಘಟನೆಯ ನಂತರ ಸಂಪೂರ್ಣ ನಗರದಲ್ಲಿನ ಅಸಮಧಾನ ನಿರ್ಮಾಣವಾಗಿದ್ದೂ ಶಿವಾಜಿ ಪ್ರೇಮಿಗಳು ದುಃಖ ವ್ಯಕ್ತ ಪಡಿಸಿದ್ದಾರೆ.

ಸಂನ್ ಜೊಸ್ ಪಾರ್ಕ್ ವಿಭಾಗವು, ಉದ್ಯಾನವನದಿಂದ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿ ಕಾಣೆಯಾಗಿದೆ. ಇದನ್ನು ತಿಳಿಸಲು ನಮಗೆ ಅತ್ಯಂತ ಖೆದವಾಗುತ್ತದೆ; ಆದರೆ ಈ ಪುತ್ತಳಿ ಯಾವಾಗ ಕಳುವುವಾಗಿದೆ ? ಇದರ ಬಗ್ಗೆ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ನಾವು ಪುತ್ತಳಿಯ ಶೋಧ ನಡೆಸುತ್ತಿದ್ದೇವೆ ಆದಷ್ಟು ಬೇಗನೆ ಪುತ್ತಳಿ ಹುಡುಕುತ್ತೇವೆ ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದರು.