ಹಿಂದುತ್ವದಲ್ಲಿ ಹತ್ಯೆ, ಹಿಂಸೆ, ಮತ್ತು ಭೇದಭಾವವನ್ನು ಬೆಂಬಲಿಸಲಾಗುತ್ತದೆ ! (ಅಂತೆ) – ಕಾಂಗ್ರೆಸ್ಸಿನ ಮುಖಂಡ ಸಿದ್ದರಾಮಯ್ಯ

ಕಾಂಗ್ರೆಸ್ಸಿನ ಮುಖಂಡ ಸಿದ್ದರಾಮಯ್ಯನ ಹಿಂದೂದ್ವೇಷ !

ಕಲಬುರ್ಗಿ (ಕರ್ನಾಟಕ) – ಹಿಂದುತ್ವವು ಸಂವಿಧಾನ ವಿರೋಧಿಯಾಗಿದೆ. ಹಿಂದುತ್ವ ಮತ್ತು ಹಿಂದೂ ಧರ್ಮ ಇವೆರಡು ವಿಭಿನ್ನ ಸಂಗತಿಗಳಾಗಿವೆ. ನಾನು ಹಿಂದೂ ಧರ್ಮವನ್ನು ವಿರೋಧಿಸುವುದಿಲ್ಲ. ನಾನೂ ಒಬ್ಬ ಹಿಂದೂ ಆಗಿದ್ದೇನೆ, ಆದರೆ ನಾನು ಹಿಂದುತ್ವ ಮತ್ತು ಮನುವಾದವನ್ನು ವಿರೋಧಿಸುತ್ತೇನೆ, ಎಂದು ಕಾಂಗ್ರೆಸ್ ಮುಖಂಡ ಮತ್ತು ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಹೇಳಿದರು. ಯಾವುದೇ ಧರ್ಮದಲ್ಲಿ ಹತ್ಯೆ ಮತ್ತು ಹಿಂಸೆಯ ಸಮರ್ಥನೆಯಾಗುವುದಿಲ್ಲ. ಆದರೆ ಹಿಂದುತ್ವದಲ್ಲಿ ಹತ್ಯೆ, ಹಿಂಸೆ ಮತ್ತು ಬೇಧಭಾವವನ್ನು ಬೆಂಬಲಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

(ಸೌಜನ್ಯ : Asianet Suvarna News)

ಸಿದ್ದರಾಮಯ್ಯ ಮಾತು ಮುಂದುವರಿಸಿ ಹಿಂದುತ್ವ ಮತ್ತು ಅದಕ್ಕೆ ಸಂಬಂಧಿಸಿ ಮಾಡಲಾಗುವ ರಾಜಕಾರಣಕ್ಕೆ ನನ್ನ ವಿರೋಧವಿದೆ. ಭಾರತೀಯ ಸಂವಿಧಾನದ ಪ್ರಕಾರ ಎಲ್ಲಾ ಧರ್ಮಗಳು ಶ್ರದ್ಧೆಯು ಸಮಾನವಾಗಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಸ್ಲಾಮಿನಲ್ಲಿ ಏನಿದೆ ? ಭಯೋತ್ಪಾದಕರ ಧರ್ಮ ಯಾವುದು ?

ಪೋರ್ಚುಗಿಸರು ಯಾವ ರೀತಿಯಲ್ಲಿ ಗೋವಾದ ಹಿಂದುಗಳನ್ನು ಮತಾಂತರಿಸಿದರು ? ಕಾಶ್ಮೀರದಿಂದ ಹಿಂದೂಗಳು ಪಲಾಯನ ಮಾಡುವಂತೆ ಮಾಡಿದವರು ಯಾರು ? ಮುಂತಾದ ವಿಷಯಗಳ ಬಗ್ಗೆ ಸಿದ್ದರಾಮಯ್ಯ ಮಾತನಾಡಬಹುದೇ ?

ಹಿಂದುತ್ವದಲ್ಲಿ ಹತ್ಯೆ ,ಹಿಂಸೆ ಮತ್ತು ಬೇದಭಾವ ಇದ್ದಿದ್ದರೆ, ಇಂದು ಬಹುಸಂಖ್ಯಾತ ಹಿಂದೂಗಳು ೯ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗುತ್ತಿರಲಿಲ್ಲ ! ಕಾಶ್ಮೀರದಿಂದ ಅವರು ಪಲಾಯನ ಮಾಡಬೇಕಾಗಿರಲಿಲ್ಲ ಮತ್ತು ಸಿದ್ದರಾಮಯ್ಯ ಇಂತಹ ಹೇಳಿಕೆ ನೀಡುವ ಮೊದಲು ವಿಚಾರ ಮಾಡಬೇಕಾಗುತ್ತಿತ್ತು !