ಕೇಂದ್ರ ಸರಕಾರದಿಂದ ಚೀನಾದ ೨೩೦ ಆಪ್ ಗಳ ಮೇಲೆ ನಿಷೇಧ

ನವ ದೆಹಲಿ – ಕೇಂದ್ರ ಸರಕಾರವು ಚೀನಾದ ೨೩೦ ಆಪ್ ಗಳ ಮೇಲೆ ನಿಷೇಧ ಹೇರಿದೆ. ಅದರಲ್ಲಿ ೧೩೮ ಆಪ್ ಗಳು ಇದು ಜುಜಿಗೆ ಸಂಬಂಧಪಟ್ಟದ್ದಾಗಿದೆ. ಹಾಗೂ ೯೪ ಆಪ್ ಗಳು ಸಾಲ ನೀಡುವುದರ ಬಗ್ಗೆ ಇದೆ. ಈ ಬಗ್ಗೆ ಗೃಹ ಸಚಿವಾಲಯವು ಆದೇಶ ನೀಡಿದೆ.

೧. ಸರಕಾರವು ೬ ತಿಂಗಳಲ್ಲಿ ೨೮೮ ಚೀನಾ ಆಪ್ ಗಳ ವಿಚಾರಣೆ ನಡೆಸಿತ್ತು. ಅದರಲ್ಲಿ, ಈ ಆಪ್ ನಿಂದ ಭಾರತೀಯರ ವೈಯಕ್ತಿಕ ಮಾಹಿತಿ ಕಳವು ಮಾಡುತ್ತಿತ್ತು ಎಂಬುದು ಗಮನಕ್ಕೆ ಬಂದಿತು. ನಂತರ ಸರಕಾರ ೨೩೦ ಆಪ್ ಗಳ ಮೇಲೆ ನಿಷೇಧ ಹೇರುವ ಬಗ್ಗೆ ನಿರ್ಧಾರ ಕೈಗೊಂಡಿತು. ಮಾಹಿತಿ ತಂತ್ರಜ್ಞಾನ ಕಾನೂನಿನ ಕಲಂ ೬೯ ರ ಅಡಿಯಲ್ಲಿ ಈ ನಿಷೇಧ ಹೇರಿದೆ.

೨. ಸಾಲ ನೀಡುವ ಚೀನಾ ಆಪ್ ಗಳು ಭಾರತೀಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿತ್ತು ಮತ್ತು ನಂತರ ಅವರಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿತ್ತು. ಬಡ್ಡಿ ವಸೂಲಿ ಮಾಡುವುದಕ್ಕಾಗಿ ಅವರಿಗೆ ಕಿರುಕುಳ ನೀಡುತ್ತಿದ್ದರು. ಆದ್ದರಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕೆಲವು ಜನರು ಆತ್ಮಹತ್ಯೆ ಕೂಡ ಮಾಡಿಕೊಂಡಿರುವ ಘಟನೆ ನಡೆದಿದ್ದವು.