ಭಾಗ್ಯನಗರದಲ್ಲಿ ಸಿಕ್ಕಿಬಿದ್ದ ಭಯೋತ್ಪಾದಕರು ಮುಸಲ್ಮಾನ ಯುವಕರನ್ನು ಸೇರಿಸಿಕೊಳ್ಳುತ್ತಿದ್ದರು !

ಭಾಗ್ಯನಗರ (ತೆಲಂಗಾಣ) – ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ರಾಷ್ಟ್ರೀಯ ತನಿಖಾ ದಳವು ಅಬ್ದುಲ್ ಜಾಹಿದ್, ಮಾಝ ಹಸನ್ ಫಾರೂಕ್, ಮತ್ತು ಸಮಿಉದ್ದಿನ್ ಈ ೩ ಭಯೋತ್ಪಾದಕರನ್ನು ಬಂಧಿಸಿದ್ದರು. ಅವರ ಮೇಲೆ ನೊಂದಾಯಿಸಲಾದ ಅಪರಾಧದಲ್ಲಿ, ಭಯೋತ್ಪಾದಕ ಅಬ್ದುಲ್ ಜಾಹಿದ್ ಈತ ಲಷ್ಕರೇ-ಎ-ತೋಯ್ಬಾ ಮತ್ತು ಇಸ್ಲಾಮಿಕ್ ಸ್ಟೇಟ್ ಈ ಭಯೋತ್ಪಾದಕ ಸಂಘಟನೆಯ ಸಂಪರ್ಕದಲ್ಲಿದ್ದನು ಎಂದು ಹೇಳಲಾಗಿದೆ. ಪಾಕಿಸ್ತಾನದಿಂದ ಅವನಿಗೆ ನೀಡುತಿದ್ದ ಆದೇಶದ ಪ್ರಕಾರ ಅವನು ಮುಸಲ್ಮಾನ ಯುವಕರನ್ನು ಸಂಘಟನೆಯಲ್ಲಿ ಭರ್ತಿ ಮಾಡುತ್ತಿದ್ದನು. ಈ ಯುವಕರು ಭಯೋತ್ಪಾದಕ ಚಟುವಟಿಕೆ ಮಾಡುತ್ತಿದ್ದರು. ಜಾಹೀದ ಇವನ ಮನೆಯಿಂದ ೨ ನಾಡುಬಾಂಬ್ ಮತ್ತು ೪ ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿತ್ತು. ಜಾಹಿದ್ ಇವನು ೨೦೦೨ ರಲ್ಲಿ ಭಾಗ್ಯನಗರದ ದಿಲಸುಖನಗರದಲ್ಲಿನ ಶ್ರೀ ಸಾಯಿ ಬಾಬಾ ದೇವಸ್ಥಾನ, ೨೦೦೪ ರಲ್ಲಿ ಸಿಕಂದರಾಬಾದನ ಶ್ರೀ ಗಣೇಶ ದೇವಸ್ಥಾನ ಮತ್ತು ೨೦೦೫ ರಲ್ಲಿ ಬೇಗಮಪೇಟದಲ್ಲಿನ ಪೋಲಿಸ ಕಾರ್ಯಾಲಯದ ಮೇಲೆ ದಾಳಿ ನಡೆಸಿದ್ದ.

ಭಾರತದಲ್ಲಿ ‘ಲೋನ್ ವೂಲ್ಫ್ ಅಟ್ಯಾಕ್’ ನಡೆಯುವುದಿತ್ತು !
(ಲೋನ್ ವೂಲ್ಫ್ ಅಟ್ಯಾಕ್ ಎಂದರೆ ಒಬ್ಬನೇ ನಡೆಸುವ ದಾಳಿ)

ಪಾಕಿಸ್ತಾನವು ಈ ಭಯೋತ್ಪಾದಕರ ಸಹಾಯದಿಂದ ಭಾರತದಲ್ಲಿ ‘ಲೋನ್ ವೂಲ್ಫ್ ಅಟ್ಯಾಕ್’ ನಡೆಸುವವರಿದ್ದರು. ಅದಕ್ಕಾಗಿ ಪ್ರತಿಷ್ಠಿತ ವ್ಯಕ್ತಿ ಅಥವಾ ಮುಖಂಡರನ್ನು ಗುರಿ ಮಾಡುವವರಿದ್ದರು.

ಸಂಪಾದಕರ ನಿಲುವು

‘ಭಯೋತ್ಪಾದಕರಿಗೆ ಧರ್ಮ ಇರುತ್ತದೆ’, ಇದು ಈಗ ಸಂಪೂರ್ಣ ಜಗತ್ತಿಗೆ ಅರಿವಾಗುತ್ತದೆ. ಆದ್ದರಿಂದ ಈಗ ಈ ಧಾರ್ಮಿಕ ಭಯೋತ್ಪಾದನೆ ನಾಶ ಮಾಡುವುದಕ್ಕಾಗಿ ಮತಾಂಧ ಜಿಹಾದಿ ಮಾನಸಿಕತೆ ಹೇಗೆ ನಾಶ ಮಾಡುವುದು, ಇದರ ಯೋಚನೆ ಮಾಡಿ ಅದನ್ನು ಕೃತಿಯಲ್ಲಿ ತರುವುದು ಅವಶ್ಯಕ !