ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಸ್ಪಷ್ಟೋಕ್ತಿ !
ಭುವನೇಶ್ವರ (ಒರಿಸ್ಸಾ) – ಮಹಮ್ಮದ ಪೈಗಂಬರ ಮತ್ತು ಯೇಸು ಕ್ರಿಸ್ತರ ಪೂರ್ವಜರು ಸನಾತನೀ ಹಿಂದೂ ಆಗಿದ್ದರು, ಎಂದು ಒರಿಸ್ಸಾದ ಪುರಿಯಲ್ಲಿನ ಪೂರ್ವಾಮ್ನಾಯ ಗೋವರ್ಧನ ಪೀಠದ ಶಂಕರಾಚಾರ್ಯ ಜಗದ್ಗುರು ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಹೇಳಿದರು. ಅಮೇರಿಕಾದ ವಿರೋಧಿ ಪಕ್ಷದ ಸದಸ್ಯರು ಅವರ ಸಂಸತ್ತಿನಲ್ಲಿ ‘ಮಹಮ್ಮದ ಪೈಗಂಬರ ಮತ್ತು ಯೇಸು ಕ್ರಿಸ್ತರ ಪೂರ್ವಜರು ಸನಾತನಿ ಹಿಂದೂ ಆಗಿದ್ದರು’, ಎನ್ನುವ ಸೂತ್ರವನ್ನು ಮಂಡಿಸಿದ್ದರು. ಅದರ ಉದಾಹರಣೆಯನ್ನು ನೀಡುತ್ತಾ ಶಂಕರಾಚಾರ್ಯರು ಇಲ್ಲಿ ಸ್ಪಷ್ಟಪಡಿಸಿದ್ದಾರೆ.
Puri Shankaracharya Swami Nischalananda Saraswati says ‘ancestors of Prophet Muhammad, Jesus were Sanatani Hindus’: Reportshttps://t.co/HQWzjXRCTS
— OpIndia.com (@OpIndia_com) February 1, 2023
ಮಂದಿರಗಳು ಮತ್ತು ಮಠಗಳ ಮೇಲೆ ಸರಕಾರದ ನಿಯಂತ್ರಣ ಬೇಡ !
ಶಂಕರಚಾರ್ಯರು ಮಾತು ಮುಂದುವರಿಸುತ್ತಾ ಹಿಂದೂಗಳ ಮಂದಿರಗಳು ಮತ್ತು ಮಠಗಳ ಮೇಲೆ ಸರಕಾರದ ನಿಯಂತ್ರಣವಿರಬಾರದು. ಮಂದಿರಗಳ ಹಣ ವಿಕಾಸಕಾರ್ಯಕ್ಕಾಗಿ ಖರ್ಚು ಮಾಡುವ ಅವಶ್ಯಕತೆಯಿಲ್ಲ.
ಜಗನ್ನಾಥಪುರಿಯಲ್ಲಿನ ಮಂದಿರದಲ್ಲಿನ ರತ್ನಭಂಡಾರಗಳ ಕಳೆದು ಹೋಗಿರುವ ಚಾವಿಯ (ಕೀಲಿಕೈ) ವಿಷಯದಲ್ಲಿ ನಾನು ಏಕೆ ಹಸ್ತಕ್ಷೇಪ ಮಾಡಬೇಕು ?
ಜಗನ್ನಾಥಪುರಿಯಲ್ಲಿನ ಮಂದಿರದಲ್ಲಿ ೭ ಭಂಡಾರಗಳಿವೆ. ಇವುಗಳಲ್ಲಿ ೪ ಭಂಡಾರಗಳ ಚಾವಿಗಳು ೩೮ ವರ್ಷಗಳ ಹಿಂದೆ ಅನಿರೀಕ್ಷಿತವಾಗಿ ಕಳೆದು ಹೋಗಿವೆ. ಈ ವಿಷಯದಲ್ಲಿ ಪ್ರಶ್ನೆ ಕೇಳಿದಾಗ ಶಂಕರಾಚಾರ್ಯರು, ಒರಿಸ್ಸಾ ಸರಕಾರ ಮತ್ತು ಜಗತ್ತಾಥ ಮಂದಿರದ ಆಡಳಿತದವರು ಈ ವಿಷಯದಲ್ಲಿ ಯಾವುದೇ ಚರ್ಚೆಮಾಡಿಲ್ಲ. ರತ್ನಭಂಡಾರದ ಪ್ರಕರಣದಲ್ಲಿ ನಾನು ಹಸ್ತಕ್ಷೇಪ ಏಕೆ ಮಾಡಬೇಕು ? ಎಂದು ಹೇಳಿದರು.
ಪೃಥ್ವಿ ಹಾಗೂ ಪರಿಸರವನ್ನು ಶುದ್ಧವಾಗಿಡುವುದು ನಮ್ಮ ಹೊಣೆ !
ಜೋಶೀಮಠದಲ್ಲಿನ ಭೂಕುಸಿತದ ವಿಷಯದಲ್ಲಿ ಕೇಳಿದಾಗ ಶಂಕರಾಚಾರ್ಯರು, ಪೃಥ್ವಿ ಹಾಗೂ ಪರಿಸರವನ್ನು ಶುದ್ಧವಾಗಿಡುವುದು ನಮ್ಮ ಹೊಣೆಯಾಗಿದೆ. ವಿಕಾಸ’ ಈ ಶಬ್ದ ಮತ್ತು ಅದರ ಸುತ್ತುಮುತ್ತಲಿನ ಸಂದರ್ಭವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಪೃಥ್ವಿ, ನೀರು ಮತ್ತು ಗಾಳಿ ಇವು ಶಕ್ತಿಯ ಮೂಲವಾಗಿವೆ. ಪ್ರತಿಯೊಂದು ಸ್ಥಳದಲ್ಲಿ ವಿಕಾಸ ಮಾಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಮೂರುವರೆ ವರ್ಷಗಳಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡುವೆವು !ಪ್ರಯಾಗರಾಜದಲ್ಲಿನ ಮಾಘಮೇಳದಲ್ಲಿ ಶಂಕರಾಚಾರ್ಯರ ಮಂಟಪದಲ್ಲಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದರು, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡುವ ಚರ್ಚೆ ಅಮೇರಿಕಾದ ಸಂಸತ್ತಿನಲ್ಲಿಯೂ ನಡೆಯುತ್ತಿದೆ. ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಮಾಡಬಾರದೆಂದು ಕೆಲವು ಶಕ್ತಿಗಳು ಕಾರ್ಯನಿರತವಾಗಿವೆ. ಅವರು ಯಾರೆಂಬುದು ನನಗೆ ತಿಳಿದಿದೆ. ನಾನು ಅವರ ಪ್ರಯತ್ನ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲವೆಂದು ಹೇಳಲು ಇಚ್ಛಿಸುತ್ತೇನೆ. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಲು ಮೂರುವರೆ ವರ್ಷಗಳ ಅವಧಿಯನ್ನು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಲಾಗುವುದು. |
ಸಂಪಾದಕೀಯ ನಿಲುವುಕ್ರೈಸ್ತ ಪಂಥ ೨ ಸಾವಿರ ಹಾಗೂ ಇಸ್ಲಾಮ್ ೧ ಸಾವಿರದ ೪೦೦ ವರ್ಷಗಳ ಹಿಂದೆ ಸ್ಥಾಪನೆಯಾಗಿದೆ. ಸನಾತನ ಧರ್ಮ ಪೃಥ್ವಿಯ ಉತ್ಪತ್ತಿಯಿಂದ, ಅಂದರೆ ಲಕ್ಷಗಟ್ಟಲೆ ವರ್ಷಗಳಿಂದ ಅಸ್ತಿತ್ವದಲ್ಲಿರುವುದರಿಂದ ಶಂಕರಾಚಾರ್ಯರು ಹೀಗೆ ಹೇಳುತ್ತಿರಬಹುದು ಎಂದು ಅರಿವಾಗುತ್ತದೆ ! |