ನಾವೇ ಭಯೋತ್ಪಾದನೆಯ ಬೀಜಗಳನ್ನು ಬಿತ್ತಿದ್ದೇವೆ!

  • ಪೇಶಾವರದ ಮಸೀದಿಯಲ್ಲಿ ನಡೆದ ಆತ್ಮಾಹುತಿ ಸ್ಫೋಟ ಪ್ರಕರಣ

  • ಸಂಸತ್ತಿನಲ್ಲಿ ಒಪ್ಪಿಕೊಂಡ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಪೇಶಾವರದ ಮಸೀದಿಯಲ್ಲಿ ನಮಾಜ್ ಸಮಯದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ತಲುಪಿದೆ. ಈ ಸ್ಫೋಟವನ್ನು ಭಯೋತ್ಪಾದಕ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡೆಸಿದೆ. ಈ ಬಗ್ಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಸಂಸತ್ತಿನಲ್ಲಿ ‘ನಾವು ಭಯೋತ್ಪಾದನೆಯ ಬೀಜಗಳನ್ನು ಬಿತ್ತಿದ್ದೇವೆ’ ಎಂದು ಒಪ್ಪಿಕೊಂಡರು. ಭಾರತ ಮತ್ತು ಇಸ್ರೇಲ್‌ನಲ್ಲಿಯೂ ಸಹ, ಪ್ರಾರ್ಥನೆ ಮಾಡುವಾಗ ಭಕ್ತರು ಕೊಲ್ಲಲ್ಪಡಲಿಲ್ಲ; ಆದರೆ ಪಾಕಿಸ್ತಾನದಲ್ಲಿ ನಡೆದಿದೆ.
ಖವಾಜಾ ಆಸಿಫ್ 2010 ರಿಂದ 2017 ರವರೆಗಿನ ಭಯೋತ್ಪಾದಕ ದಾಳಿಗಳನ್ನು ಉಲ್ಲೇಖಿಸಿದ್ದಾರೆ. ಅವರು, ಈ ಭಯೋತ್ಪಾದಕರ ಯುದ್ಧವು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸಮಯದಲ್ಲಿ ಸ್ವಾತ್ ಪ್ರದೇಶದಿಂದ ಪ್ರಾರಂಭವಾಯಿತು ಎಂದು ಅವರು ಹೇಳಿದರು, ಆದರೆ ‘ಪಿಎಂಎಲ್-ಎನ್’ ಈ ಪಕ್ಷದ ಹಿಂದಿನ ಸರಕಾರದ ಅವಧಿಯಲ್ಲಿ ಪಾಕಿಸ್ತಾನದ ಕರಾಚಿಯಿಂದ ಸ್ವಾತ್ ವರೆಗೆ ಶಾಂತಿ ಸ್ಥಾಪಿಸಲಾಯಿತು. ನಾನು ಹೆಚ್ಚು ಹೇಳಲು ಬಯಸುವುದಿಲ್ಲ; ಆದರೆ ನಾವು ಭಯೋತ್ಪಾದನೆಯ ಬೀಜಗಳನ್ನು ಬಿತ್ತಿದ್ದೇವೆ. ನಾವು ಭಯೋತ್ಪಾದನೆಯಿಂದ ಮುಕ್ತರಾಗಬೇಕಾದರೆ 2011-2012ರಲ್ಲಿ ತೋರಿದ ಒಗ್ಗಟ್ಟು ಬೇಕು ಎಂದು ಹೇಳಿದರು.

ಅಮೆರಿಕದ ಹಿತಾಸಕ್ತಿಗಾಗಿ ಪಾಕಿಸ್ತಾನ ಯುದ್ಧ ಮಾಡಬಾರದು!

ಆಸಿಫ್‌ ತಮ್ಮ ಮಾತನ್ನು ಮುಂದುವರೆಸುತ್ತಾ, ಮಹಾಶಕ್ತಿಯ ಕೈಯಲ್ಲಿ ಕೈಗೊಂಬೆಯಾಗುವುದು ನಮ್ಮ (ಪಾಕಿಸ್ತಾನ) ಹಳೇಯ ಬಯಕೆಯಾಗಿದೆ. ಈಗ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಪಾಕಿಸ್ತಾನ ಏಕಾಂಗಿಯಾಗಿ ನಿಂತಿದೆ. ನಾವು ಅಮೆರಿಕದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು; ಆದರೆ ಪಾಕಿಸ್ತಾನವು ತನ್ನ (ಯುಎಸ್) ಹಿತಾಸಕ್ತಿಗಾಗಿ ಅಮೇರಿಕಾದ ಇಚ್ಛೆಯಂತೆ ಯುದ್ಧ ಮಾಡಬಾರದು. ಅಫ್ಘಾನಿಸ್ತಾನದಲ್ಲಿ ನಮಗೆ ಸುಧಾರಣೆಗಳ ಅಗತ್ಯವಿದೆ ಎಂದು ಹೇಳಿದರು.

ಭಯೋತ್ಪಾದಕರನ್ನು ಮಾಡುವುದು, ಇದು ನಮ್ಮ ಸಾಮೂಹಿಕ ತಪ್ಪು ! – ಪಾಕಿಸ್ತಾನದ ಗೃಹ ಸಚಿವರು

ಪಾಕಿಸ್ತಾನದ ಗೃಹ ಸಚಿವ ರಾಣಾ ಸನಾವುಲ್ಲಾ ಅವರು, ಮುಜಾಹಿದ್ದೀನ್‌ಗಳನ್ನು (ಇತರ ಧರ್ಮಗಳ ವಿರುದ್ಧ ಹೋರಾಡುವ ಯೋಧರು) ನಿರ್ಮಿಸಿ ಅವರೊಂದಿಗೆ ಯುದ್ಧಕ್ಕೆ ಹೋಗುವುದು ಸಾಮೂಹಿಕ ತಪ್ಪಾಗಿತ್ತು ಎಂದು ಸಂಸತ್ತಿಗೆ ತಿಳಿಸಿದರು. ನಾವು ಮುಜಾಹಿದ್ದೀನ್ ಆಗುವ ಅಗತ್ಯವಿರಲಿಲ್ಲ. ನಾವು ಮುಜಾಹಿದ್ದೀನ್‌ಗಳನ್ನು ಮಾಡಿದ್ದೇವೆ ಮತ್ತು ಅವರು ಭಯೋತ್ಪಾದಕರಾದರು. ಪಾಕಿಸ್ತಾನವು ವಿಶ್ವದ ಅತ್ಯಂತ ಅಮಾನವೀಯ ಭಯೋತ್ಪಾದಕರ ಆಶ್ರಯತಾಣವಾಗಿದೆ. ನಾವು ಈಗ ಅದರ ಬೆಲೆಯನ್ನು ತೆತ್ತಬೇಕಾಗುತ್ತಿದ್ದೇವೆ; ಏಕೆಂದರೆ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿವೆ. ಇಮ್ರಾನ್ ಖಾನ್ ಅವರ ಹಿಂದಿನ ಸರಕಾರವು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ ಭಯೋತ್ಪಾದಕರನ್ನು ಬಿಡುಗಡೆ ಮಾಡಿತು ಎಂದು ಹೇಳಿದರು.

ಸಂಪಾದಕೀಯ ನಿಲುವು

75 ವರ್ಷಗಳ ನಂತರ ಪಾಕಿಸ್ತಾನಕ್ಕೆ ಬುದ್ಧಿ ಬಂದಿರುವುದು ಯಾವುದೇ ಪ್ರಯೋಜನವಿಲ್ಲ. ಅವರು ಸೃಷ್ಟಿಸಿದ ಭಯೋತ್ಪಾದಕ ರಾಕ್ಷಸರು ಈಗ ಅವರನ್ನೇ ಬಲಿಪಶುವನ್ನಾಗಿ ಮಾಡುತ್ತಿದೆ, ಇದು ನಿಜ !